Ambani Wedding celebrations : ಬಿಲಿಯನೇರ್ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಸಾಂಪ್ರದಾಯಿಕ ಗುಜರಾತಿ ಶೈಲಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಹಣವಂತವರು ಹೆಚ್ಚಾಗಿ ಡೆಸ್ಟಿನೇಷನ್ ವೆಡ್ಡಿಂಗ್ ಅಂತ ವಿದೇಶಕ್ಕೆ ಹೋಗುತ್ತಿದ್ದರೆ, ಅನಂತ್ ಅವರು ತಾಯಿ ನೆಲದಲ್ಲೇ ಸಪ್ತಪದಿ ತುಳಿಯಲಿದ್ದಾರೆ.. ಇದಕ್ಕೆ ಕಾರಣವೂ ಇದೆ.. ಸ್ವತಃ ಅವರೇ ಈ ಕುರಿತು ತಿಳಿಸಿದ್ದಾರೆ..
ಅನಂತ್ ಅಂಬಾನಿ ತಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಭಾರತದಲ್ಲಿಯೇ ಮಾಡುವುದಾಗಿ ನಿಶ್ಚಿತಾರ್ಥದ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ವಿವಾಹ ಸಮಾರಂಭ ನಡೆಯಲಿದೆ ಎಂದು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸಹ ತಿಳಿಸಿದ್ದರು.
ಇದನ್ನೂ ಓದಿ:ಈ ದೇಸಿ ಬಾರ್ಬಿ ಡಾಲ್ ಯಾರು ಅಂತ ಗೊತ್ತಾದ್ರೆ...! ಶಾಕ್ ಆಗ್ತೀರಾ.. ಒಮ್ಮೆ ನೋಡಿ ಬಿಡಿ..
ಪ್ರಧಾನಿ ನರೇಂದ್ರ ಮೋದಿಯವರ 'ವೆಡ್ ಇನ್ ಇಂಡಿಯಾ' ಕರೆಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಅನಂತ್ ಅಂಬಾನಿ ಹೇಳಿದ್ದಾರೆ. ಅನೇಕರು ತಮ್ಮ ಮದುವೆಯನ್ನು ವಿದೇಶದಲ್ಲಿ ನಡೆಸಲು ನಿರ್ಧರಿಸಿದರೆ, ಅನಂತ್ ಅಂಬಾನಿ ತಮ್ಮ ಮದುವೆಯನ್ನು ವಿಶ್ವದ ಅತಿದೊಡ್ಡ ವಿವಾಹ ಆಚರಣೆಗಳಲ್ಲಿ ಒಂದನ್ನಾಗಿ ಮಾಡಲು ಇಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದಾರೆ..
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಭಾರತ ಕಂಡ ಅತಿ ದೊಡ್ಡ ರಾಜಮನೆತನದ ವಿವಾಹಗಳಲ್ಲಿ ಒಂದಾಗಿ ರೂಪುಗೊಳ್ಳುತ್ತಿದೆ. ಇದಲ್ಲದೆ, ಈ ಮದುವೆಯು ಭಾರತೀಯ ಆರ್ಥಿಕತೆಯ ಮೇಲೆ ಪ್ರಭಾವ ಬೀರಲಿದೆ. ಮುಂಬೈನಲ್ಲಿ ನಡೆಯುವ ಈ ಮದುವೆಯ ಮೂಲಕ ಕಲಾವಿದರು, ಸಾಂಸ್ಕೃತಿಕ ಪ್ರತಿಭೆಗಳು, ವಿನ್ಯಾಸಕರು ಹೀಗೆ ನಾನಾ ಕ್ಷೇತ್ರಗಳ ಸಾವಿರಾರು ಮಂದಿ ಉದ್ಯೋಗ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಲಿಪ್‌ಲಾಕ್ ಸೀನ್‌ನಲ್ಲಿ ನಟಿಸಲು ರಾಕುಲ್ ರೆಡಿ..! ಆದ್ರೆ ಆ ಕಂಡೀಷನ್ ಹಾಕಿದ ಚೆಲುವೆ.. ಏನದು..?
ವಿವಾಹ ಪೂರ್ವ ಆಚರಣೆಗಳಿಗಾಗಿ ಆರು ತಿಂಗಳ ಕಾಲ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕೆಲಸಕ್ಕಾಗಿ ನೇಮಿಸಲಾಗಿತ್ತು. ಇದರಲ್ಲಿ ಅಡುಗೆಯವರು, ಚಾಲಕರು, ಕಲಾವಿದರು ಮತ್ತು ಇತರರು ಇದ್ದರು. ಅಲ್ಲದೆ, ಜಾಮ್‌ನಗರ, ರಾಜ್‌ಕೋಟ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯನ್ನು ಇದು ಒಳಗೊಂಡಿತ್ತು.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಆದರೆ, ಮದುವೆಯ ಜೊತೆಗೆ ಮೂರು ದಿನಗಳ ಕಾಲ ಸಮಾರಂಭಗಳು ನಡೆಯಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.