Wedding Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ತುಂಬಾ ಫನ್ನಿಯಾಗಿದ್ದರೆ, ಮತ್ತೆ ಕೆಲವು ನೋಡುಗರಲ್ಲಿ ಆಶ್ಚರ್ಯ ಮೂಡಿಸುತ್ತವೆ. ಮದುವೆ ಮನೆಯಲ್ಲಿ ಹೀಗೂ ನಡೆಯಬಹುದಾ ಎಂಬ ಅನುಮಾನವನ್ನು ಹುಟ್ಟು ಹಾಕುತ್ತವೆ. ಇಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡಿದೆ. ಇದನ್ನು ನೋಡಿದರೆ ಒಂದು ಕ್ಷಣ ನೀವು ನಿಮ್ಮ ಕಣ್ಣನ್ನೇ ನಂಬುವುದಿಲ್ಲ. 


COMMERCIAL BREAK
SCROLL TO CONTINUE READING

ಈ ವೈರಲ್‌ ವಿಡಿಯೋ ನೋಡಿದರೆ ಎಂಥವರೂ ಶಾಕ್ ಆಗುತ್ತಾರೆ. ಕುಟುಂಬ ಸದಸ್ಯರು, ನೆಂಟರಿಷ್ಟರಿಂದ ಮದುವೆ ಮನೆ ತುಂಬಿ ತುಳುಕುತ್ತಿದೆ. ವರ ಕೂಡ ಎದುರಲ್ಲೇ ನಿಂತಿದ್ದಾನೆ. ವಧು ಪ್ರಿಯಕರನ ಜೊತೆ ಏನೆಲ್ಲಾ ಮಾಡುತ್ತಾಳೆ ಎಂದರೆ, ಅವರನ್ನು ಬೇರ್ಪಡಿಸಲು ಅಲ್ಲಿದ್ದವರು ಹರಸಾಹಸವನ್ನೇ ಮಾಡಬೇಕಾಯಿತು. ಇದನ್ನೆಲ್ಲ ಕಂಡು ಪಾಪ ವರನ ಸ್ಥಿತಿ ಏನಾಗಿರಬೇಕು ಹೇಳಿ.. 


ಇದನ್ನೂ ಓದಿ : Monkey Video : ಆಪಲ್ ತಿಂದ ಕೋತಿಗೆ ಹುಚ್ಚು.. ದೋಸ್ತ್ ಮಂಗನ ಮಾಸ್ ರಿಯಾಕ್ಷನ್ ವೈರಲ್


ಸಾಮಾಜಿಕ ಜಾಲತಾಣ ಬಳಕೆದಾರರು ಅನೇಕ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ಮದುವೆಯಲ್ಲಿ ಡ್ಯಾನ್ಸ್ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಧು ತುಂಬಾ ಖುಷಿಯಿಂದ ನೃತ್ಯ ಮಾಡುತ್ತಿದ್ದಾಳೆ. ಅದರೆ ಅವಳು ಹೀಗೆ ಕುಣಿಯುತ್ತಿರುವುದು ಅವಳ ಪ್ರಿಯತಮನ ಜೊತೆ. ಇದನ್ನೆಲ್ಲಾ ನೋಡುತ್ತ ವರನು ಒಂದು ಬದಿಯಲ್ಲಿ ಸುಮ್ಮನೆ ನಿಂತಿದ್ದಾನೆ. ಮೊದಮೊದಲು ವಧುವಿನ ಜೊತೆ ಡ್ಯಾನ್ಸ್ ಮಾಡುತ್ತಿರುವ ಯುವಕ ಆಕೆಯ ಪ್ರಿಯಕರ ಎಂಬುದು ಜನರಿಗೆ ಗೊತ್ತಾಗಿಲ್ಲ. ಆದರೆ, 'ತುಜ್ಕೊ ಹಿ ದುಲ್ಹಾ ಬನೌಂಗಿ' ಹಾಡು ಡಿಜೆಯಲ್ಲಿ ಪ್ಲೇ ಆಗಲು ಪ್ರಾರಂಭಿಸಿದಾಗ, ವಧು ತನ್ನ ಮೇಲೆ ತಾನೆ ಕಂಟ್ರೋಲ್‌ ಕಳೆದುಕೊಳ್ಳುತ್ತಾಳೆ. ತನ್ನ ಪ್ರಿಯಕರನನ್ನು ಬಿಗಿಯಾಗಿ ತಬ್ಬಿಕೊಂಡು, ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ.  


 


Viral Video : ಶಿಕ್ಷಕಿಯನ್ನು ನೆಲಕ್ಕೆ ತಳ್ಳಿ ಎಲ್ಲರ ಮುಂದೆ ಈ ವಿದ್ಯಾರ್ಥಿ ಮಾಡಿದ ನೀಚ ಕೃತ್ಯ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.