Viral Video : ಸಾಮಾಜಿಕ ಮಾಧ್ಯಮ ಪ್ರಪಂಚವು ಅದ್ಭುತ ಸಂಗತಿಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಲು ಸಾಧ್ಯವಾಗದ ಎಲ್ಲವನ್ನೂ ನೋಡುತ್ತೇವೆ. ಇಂಟರ್‌ನೆಟ್‌ನಲ್ಲಿ ನೋಡುವ ವಿಡಿಯೋಗಳಲ್ಲಿ ಕೆಲವೊಮ್ಮೆ ನಮ್ಮನ್ನು ನಗಿಸುವ, ಕೆಲವೊಮ್ಮೆ ಯೋಚಿಸುವಂತೆ ಮಾಡುವ, ಕೆಲವೊಮ್ಮೆ ಆಶ್ಚರ್ಯಪಡುವ, ಕೆಲವೊಮ್ಮೆ ಆಘಾತವನ್ನುಂಟು ಮಾಡುವ ಮತ್ತು ಕೆಲವೊಮ್ಮೆ ದುಃಖವನ್ನು ತರಿಸುತ್ತವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳು ಅಂತರ್ಜಾಲದಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿವೆ. ಈಗಂತೂ ಕುತೂಹಲಕಾರಿ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಅಂತರ್ಜಾಲದಲ್ಲಿ ಮಂಗಗಳಿಗೆ ಅಭಿಮಾನಿಗಳಿದ್ದಾರೆ. ಸಿಂಹ, ಹುಲಿ, ಕೋತಿ ಮತ್ತು ಹಾವು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯ ಪ್ರಾಣಿಗಳಾಗಿವೆ. ಕೆಲವೊಮ್ಮೆ ಮಂಗಗಳು ತಮ್ಮ ಚೇಷ್ಟೆಯಿಂದ ಜನರ ಗಮನ ಸೆಳೆಯುತ್ತವೆ. ಮಂಗಗಳನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಕೋತಿಗಳ ಕಿಡಿಗೇಡಿತನವನ್ನು ತೋರಿಸುವ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : Viral Video : ದಿನಪತ್ರಿಕೆ ಓದುವ ಮಂಗ.. ಬುದ್ಧಿವಂತ ಕೋತಿ ಕಂಡು ನೆಟ್ಟಿಜನ್ಸ್ ಫಿದಾ.!
ಇತ್ತೀಚೆಗಷ್ಟೇ ಎರಡು ಕೋತಿಗಳಿಗೆ ಸಂಬಂಧಿಸಿದ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಕೋತಿಯೊಂದು ತನ್ನ ಬಳಿ ಸೇಬು ಹಣ್ಣನ್ನು ಹೊಂದಿದ್ದು, ಮತ್ತೊಂದು ಮಂಗನ ಜತೆ ತುಂಟಾಟವಾಡುತ್ತಿದ್ದು, ಅದಕ್ಕೆ ಇನ್ನೊಂದು ಕೋತಿಯ ಪ್ರತಿಕ್ರಿಯೆ ತುಂಬಾ ಮುದ್ದಾಗಿದೆ.
ಸ್ನೇಹಿತನನ್ನು ಚುಡಾಯಿಸಿದ ಕೋತಿ
ಈ ವೈರಲ್ ವಿಡಿಯೋದಲ್ಲಿ, ಕೋತಿಯೊಂದು ಕೈಯಲ್ಲಿ ಸೇಬಿನೊಂದಿಗೆ ತನ್ನ ಸಹಚರ ಕೋತಿಯ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. ಕೋತಿಯು ಮೊದಲು ಸೇಬನ್ನು ತೋರಿಸಿ ಮತ್ತೊಂದು ಕೋತಿಯನ್ನು ಚುಡಾಯಿಸುತ್ತದೆ. ನಂತರ ಅದನ್ನು ತಿನ್ನಲು ಪ್ರಾರಂಭಿಸುತ್ತದೆ. ಇನ್ನೊಂದು ಕೋತಿ ಸೇಬನ್ನು ನೋಡುತ್ತಲೇ ಇರುತ್ತದೆ, ಆದರೆ ಮೊದಲ ಕೋತಿ ಅದಕ್ಕೆ ಸೇಬನ್ನು ಕೊಡುವುದಿಲ್ಲ. ಎರಡನೇ ಕೋತಿಯ ನೋಟವು ಸೇಬಿನಿಂದ ದೂರ ಸರಿದ ತಕ್ಷಣ, ಮೊದಲ ಕೋತಿ ಮತ್ತೊಮ್ಮೆ ಸೇಬನ್ನು ಅದರ ಮುಂದೆ ತೋರಿಸಿ ಅದನ್ನು ತಿನ್ನಲು ಪ್ರೇರೇಪಿಸುತ್ತದೆ. ಇದನ್ನು ಎರಡನೇ ಕೋತಿಗೆ ತೋರಿಸಲಾಗುತ್ತಲೇ ಇಡೀ ಸೇಬನ್ನು ತಿನ್ನುತ್ತದೆ. ಇದಕ್ಕೆ ಬಲು ಮುದ್ದಾಗಿ ಮತ್ತೊಂದು ಮಂಗ ಪ್ರತಿಕ್ರಿಸುತ್ತದೆ.
ಇದನ್ನೂ ಓದಿ : Viral Video : ಶಿಕ್ಷಕಿಯನ್ನು ನೆಲಕ್ಕೆ ತಳ್ಳಿ ಎಲ್ಲರ ಮುಂದೆ ಈ ವಿದ್ಯಾರ್ಥಿ ಮಾಡಿದ ನೀಚ ಕೃತ್ಯ.!
ಮತ್ತೊಂದೆಡೆ, ಈ ವಿಡಿಯೋ ವಿಭಿನ್ನ ಕಥೆಯನ್ನು ಹೇಳುತ್ತದೆ. ಮೊದಲ ಕೋತಿ ಎರಡನೇ ಕೋತಿಗೆ ಸೇಬನ್ನು ನೀಡಲು ತುಂಬಾ ಪ್ರಯತ್ನಿಸುತ್ತಿದೆ ಎಂದು ತೋರುತ್ತದೆ ಮತ್ತು ಅದನ್ನು ತೋರಿಸಿ ಸೇಬನ್ನು ತಿನ್ನಿಸಲು ಸಹ ಪ್ರಯತ್ನಿಸುತ್ತಿರಬಹುದು. ಈ ವಿಡಿಯೋವನ್ನು waowafrica ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನಮ್ಮ ಬಾಲ್ಯದಲ್ಲಿ ನಾವು ನಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡ ಮಧುರ ಕ್ಷಣಗಳನ್ನು ನೆನಪಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.