Viral Video : ಶಿಕ್ಷಕಿಯನ್ನು ನೆಲಕ್ಕೆ ತಳ್ಳಿ ಎಲ್ಲರ ಮುಂದೆ ಈ ವಿದ್ಯಾರ್ಥಿ ಮಾಡಿದ ನೀಚ ಕೃತ್ಯ.!

Student beating teacher in school corridor : ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನೇಕ ಪ್ರಕರಣಗಳು ಬರುತ್ತಲೇ ಇರುತ್ತವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವಿಷಯಗಳು ತರಗತಿಯಿಂದಲೇ ವೈರಲ್ ಆಗಿದ್ದು ಹಲವು ಬಾರಿ ಸಂಭವಿಸಿದೆ. 

Written by - Chetana Devarmani | Last Updated : Mar 3, 2023, 12:05 PM IST
  • ತರಗತಿಯಲ್ಲಿ ವಿದ್ಯಾರ್ಥಿಗೆ ಬುದ್ಧಿ ಹೇಳಿದ ಟೀಚರ್‌
  • ಶಿಕ್ಷಕಿಯ ಮೇಲೆ ಕೂಡಲೇ ಸೇಡು ತೀರಿಸಿಕೊಂಡ ಹುಡುಗ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌
Viral Video : ಶಿಕ್ಷಕಿಯನ್ನು ನೆಲಕ್ಕೆ ತಳ್ಳಿ ಎಲ್ಲರ ಮುಂದೆ ಈ ವಿದ್ಯಾರ್ಥಿ ಮಾಡಿದ ನೀಚ ಕೃತ್ಯ.!   title=
Student beating teacher

Student beating teacher in school corridor :  ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನೇಕ ಪ್ರಕರಣಗಳು ಬರುತ್ತಲೇ ಇರುತ್ತವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವಿಷಯಗಳು ತರಗತಿಯಿಂದಲೇ ವೈರಲ್ ಆಗಿದ್ದು ಹಲವು ಬಾರಿ ಸಂಭವಿಸಿದೆ. ಆದರೆ ಶಿಕ್ಷಕಿಯೊಬ್ಬರು ತರಗತಿಯಿಂದ ಹೊರಬಂದ ತಕ್ಷಣ ಸ್ವಂತ ವಿದ್ಯಾರ್ಥಿಯೇ ಅವರ ಮೇಲೆ ಹಲ್ಲೆ ನಡೆಸಿದರೆ, ಅದು ಬಹುಶಃ ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದು, ಬಹುಶಃ ಶಿಕ್ಷೆ ನೀಡದೆ ಬಿಟ್ಟರೆ ತುಂಬಾ ಅನ್ಯಾಯವಾಗುತ್ತದೆ.

ವಾಸ್ತವವಾಗಿ, ಈ ಘಟನೆಯನ್ನು ಫ್ಲೋರಿಡಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತದೆ. ಈ ಕುರಿತು ಸಿಸಿಟಿವಿ ವಿಡಿಯೋ ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಫ್ಲೋರಿಡಾದ ಶಾಲೆಯಲ್ಲಿ ನಡೆದಿದೆ. ಇಲ್ಲಿ ತರಗತಿಯ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದನು ಮತ್ತು ಶಿಕ್ಷಕಿ ಇದನ್ನು ಗಮನಿಸಿದ್ದಾರೆ. ಈ ರೀತಿ ಕ್ಲಾಸ್‌ರೂಂ ನಲ್ಲಿ ಮಾಡದಂತೆ ತಿಳಿ ಹೇಳಿದ್ದಾರೆ. ಹಲವು ಬಾರಿ ಮನವೊಲಿಸಿದರೂ ಒಪ್ಪದಿದ್ದಾಗ ವಿದ್ಯಾರ್ಥಿಯ ವಿಡಿಯೋ ಗೇಮ್ ಸಾಧನವನ್ನು ಕಸಿದುಕೊಂಡಿದ್ದಾರೆ. ಆ ನಂತರ ನಡೆದಿದ್ದು ವೈರಲ್ ಆಗಿದೆ.

 

 

ಇದನ್ನೂ ಓದಿ : Viral Video : ತರಗತಿಯಲ್ಲಿ ಹೀಗೆ... ಹುಡುಗ - ಹುಡುಗಿಯ ವಿಡಿಯೋ ವೈರಲ್

ಹುಡುಗ ಶಿಕ್ಷಕನೊಂದಿಗೆ ವಾಗ್ವಾದಕ್ಕೆ ಇಳಿದನು ಮತ್ತು ಅದು ತುಂಬಾ ಉಲ್ಬಣಗೊಂಡಿತು ಮತ್ತು ಹುಡುಗನ ಕೋಪ ನೆತ್ತಿಗೇರಿತು. ಕೋಪಗೊಂಡ ಹುಡುಗ ತನ್ನ ಶಿಕ್ಷಕಿಯನ್ನು ಹಿಂಬಾಲಿಸಿದ್ದಾನೆ. ಈ ವೇಳೆ ಶಾಲೆಯ ವರಾಂಡದಲ್ಲಿ ಆಕೆಯನ್ನು ನೆಲದ ಮೇಲೆ ತಳ್ಳಿದನು. ಆ ನಂತರ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈತನ ಏಟಿಗೆ ಶಿಕ್ಷಕಿ ಅಲ್ಲಿಯೇ ಮೂರ್ಛೆ ಹೋಗಿದ್ದಾರೆ. ಇದ್ನು ಗಮನಸಿದ ಸುತ್ತಲಿನ ಜನ ಆಕೆಯನ್ನು ರಕ್ಷಿಸಿದ್ದಾರೆ.

ವಿದ್ಯಾರ್ಥಿಯ ಇಂತಹ ಕೃತ್ಯವನ್ನು ನೋಡಿದ ಕೆಲವರು ಶಿಕ್ಷಕಿಯನ್ನು ರಕ್ಷಿಸಲು ಓಡಿ ಬಂದಿರುವುದು ವೈರಲ್ ಆಗಿರುವ ಈ ವಿಡಿಯೋದಲ್ಲಿ ಕಂಡು ಬಂದಿದೆ. ಘಟನೆಯಲ್ಲಿ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಿಂದಲೇ ಬಾಲಕನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. 

ಇದನ್ನೂ ಓದಿ : Viral Video : ದಿನಪತ್ರಿಕೆ ಓದುವ ಮಂಗ.. ಬುದ್ಧಿವಂತ ಕೋತಿ ಕಂಡು ನೆಟ್ಟಿಜನ್ಸ್‌ ಫಿದಾ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News