Bride Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವೈರಲ್‌ ವಿಡಿಯೋಗಳನ್ನು ನಾವು ನೋಡುತ್ತೇವೆ. ಅದರಲ್ಲೂ ಕೆಲವು ವಧು - ವರರಿಗೆ ಸಂಬಂಧಿಸಿದ ವಿಡಿಯೋಗಳು ನೋಡುಗರನ್ನು ಅಚ್ಚರಿಗೊಳಿಸುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಸಾಮಾನ್ಯವಾಗಿ ಲವ್‌ ಬ್ರೇಕಪ್‌ ಎಂಬುದು ಎಲ್ಲರ ಜೀವನದಲ್ಲಿಯೂ ನಡೆದಿರುತ್ತದೆ. ಆದರೆ ಅದನ್ನು ಅಲ್ಲಿಗೆ ಬಿಟ್ಟು ಜೀವನವನ್ನು ಮುನ್ನಡೆಸಬೇಕು. ಆದರೆ ಕೆಲವರು ಅದರಲ್ಲೇ ತಮ್ಮ ಜೀವನವನ್ನ ಹಾಳು ಮಾಡಿಕೊಳ್ಳುತ್ತಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : 20 ವರ್ಷದ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕನ ಖುಷಿ ನೋಡಿ..


ವಧು ತನ್ನ ವರನ ಮುಂದೆ ತನ್ನ ಮಾಜಿ ಪ್ರಿಯಕರನ ಬಗ್ಗೆ ಮಾತನಾಡಲು ಪ್ರಾರಂಭಿಸಿದ ವಿಡಿಯೋ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವಧು ತನ್ನ ಮಾಜಿ ಗೆಳೆಯನಿಗೆ ಹಾಡನ್ನು ಹಾಡಿದ್ದಾಳೆ. 


 


 

 

 

 



 

 

 

 

 

 

 

 

 

 

 

A post shared by Bhutni_ke (@bhutni_ke_memes)


 


ಮದುವೆ ಸಂದರ್ಭದ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಧು ತುಂಬಾ ಬೇಸರದಲ್ಲಿರುವಂತೆ ಕಾಣುತ್ತಿದ್ದಾಳೆ. ಮದುವೆಯ ನಂತರ, ವಧು ತನ್ನ ಪತಿಯೊಂದಿಗೆ ಸ್ಟುಡಿಯೋಗೆ ಹೋಗುತ್ತಾಳೆ. ಅಲ್ಲಿ ವಧು ಹಾಡನ್ನು ಹಾಡುವ ಬಗ್ಗೆ ಮಾತನಾಡುವುದನ್ನು ಕೇಳಲಾಗುತ್ತದೆ. ಈ ಬಗ್ಗೆ ವರದಿಗಾರರು ಯಾರಿಗಾಗಿ ಹಾಡಬೇಕೆಂದು ಕೇಳಿದಾಗ, ವಧು ತನ್ನ 'ಎಕ್ಸ್' ಗಾಗಿ ಹಾಡಲು ಬಯಸುತ್ತೇನೆ ಎಂದು ಹೇಳುತ್ತಾಳೆ.


ಇದನ್ನೂ ಓದಿ : ಈ ಏರ್‌ಲೈನ್‌ನಲ್ಲಿ ಸಾಕುಪ್ರಾಣಿಗಳಿಗೂ ಇದೆ ಅನುಮತಿ.! ಪೆಟ್‌ ಜೊತೆ ವಿಮಾನ ಪ್ರಯಾಣ ಆನಂದಿಸಿ.!


ಈ ಬಗ್ಗೆ ವರದಿಗಾರ ನಿಮ್ಮ ಗೆಳೆಯನ ಹೆಸರೇನು? ಅದಕ್ಕೆ ಹುಡುಗಿ ಹೇಳುತ್ತಾಳೆ, "ನಾನು ಅವನ ಹೆಸರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾನು ಅವನನ್ನು ನಿಜವಾಗಿಯೂ ಪ್ರೀತಿಸುತ್ತೇನೆ." ಇದಾದ ಬಳಿಕ ವಧು ಏಕಾಏಕಿ ಅಳಲು ಆರಂಭಿಸುತ್ತಾಳೆ. ಈ ಬಗ್ಗೆ ವರದಿಗಾರ ಕೇಳುತ್ತಾನೆ ಯಾಕೆ ಅಳುತ್ತಿದ್ದೀರಾ?  ಎಂದು. ಅದಕ್ಕೆ ವಧು ಉತ್ತರಿಸುತ್ತಾಳೆ, "ನಾನು ನನ್ನ ಗೆಳೆಯನನ್ನು ತುಂಬಾ ಪ್ರೀತಿಸುತ್ತೇನೆ, ಆದರೆ ಅವನು ಬೇರೆಯವರನ್ನು ಪ್ರೀತಿಸುತ್ತಾನೆ, ನಾನು ಅವನಿಗೆ ಜಲೆಸಿ ಫೀಲ್‌ ಮಾಡಿಸಬೇಕೆಂದು ಈ ಮದುವೆಯಾಗಿದ್ದೇನೆ, ಆದರೆ ಅವನು ಬರಲಿಲ್ಲ" ಎಂದು ಹೇಳುತ್ತಾಳೆ. bhutni_ke_memes ಹೆಸರಿನ ಖಾತೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.


(ಗಮನಿಸಿ- Zee News ಈ ವಿಡಿಯೋದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಇದು ತಮಾಷೆಯ ವಿಡಿಯೋ ಕೂಡ ಆಗಿರಬಹುದು)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.