Viral Video: ಕೆಂಪು ದೀಪ ಇಲ್ಲದಿರುವಾಗ ಅಥವಾ ಜೀಬ್ರಾ ಕ್ರಾಸಿಂಗ್‌ನಲ್ಲಿ ಯಾರಾದರೂ ಚಲಿಸುವ ಕಾರನ್ನು ರಸ್ತೆ ದಾಟಲು ನಿಲ್ಲಿಸುವುದನ್ನು ನೋಡುವುದು ಭಾರತದಲ್ಲಿ ಸಾಮಾನ್ಯ ದೃಶ್ಯವಾಗಿದೆ. ಜನರು ಲಿಫ್ಟ್ ಬೇಕಾದಾಗ ಆಟೋಗಳು ಅಥವಾ ರಿಕ್ಷಾಗಳನ್ನು ರಸ್ತೆಯಲ್ಲಿ ನಿಲ್ಲಿಸಲು ಕೇಳುತ್ತಾರೆ. ಕೆಲವೊಮ್ಮೆ ಬಸ್‌ ನಿಲ್ಲಿಸಲು ಸಹ ಜನರು ಕೈ ಅಡ್ಡ ಹಾಕುವುದುಂಟು. ಆದರೆ ಚಲಿಸುವ ರೈಲನ್ನು ಹತ್ತಲು ಯಾರಾದರೂ ಕೈ ಅಡ್ಡ ಹಾಕಿ ನಿಲ್ಲಿಸುವುದನ್ನು ನೋಡಿದ್ದೀರಾ? ಇಂತಹದೊಂದು ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video : ಸದ್ದಿಲ್ಲದೆ ಮರಿಗಳ ನುಂಗಿದ ಹಾವು, ಕರುಳು ಹಿಂಡುವಂತಿದೆ ತಾಯಿ ಪಕ್ಷಿಯ ರೋಧನೆ


ವಿಡಿಯೋವನ್ನು Instagram ನಲ್ಲಿ ಮೆಮೆ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 33 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 1,900 ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಕ್ಲಿಪ್‌ನಲ್ಲಿ, ವೃದ್ಧರೊಬ್ಬರು ರೈಲ್ವೆ ಕ್ರಾಸಿಂಗ್‌ನಲ್ಲಿ ನಿಂತು ರೈಲಿಗಾಗಿ ಕಾಯುತ್ತಿದ್ದರು. ಎಕ್ಸ್ ಪ್ರೆಸ್ ರೈಲು ಬರುತ್ತಿರುವುದನ್ನು ಕಂಡು ಕೈಯನ್ನು ಅಡ್ಡ ಹಾಕಿ ಲಿಫ್ಟ್ ಕೇಳಿದರು. 


 



 


ಕೇವಲ ಒಂದು ಸೆಕೆಂಡಿನ ನಂತರ, ರೈಲು ಆಶ್ಚರ್ಯಕರವಾಗಿ ನಿಲ್ಲುತ್ತದೆ. ಸರಿಯಾದ ನಿಲ್ದಾಣ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಅಲ್ಲ ಬದಲಾಗಿ ಚಲಿಸುವ ಮಾರ್ಗ ಮಧ್ಯೆ ರೈಲು ನಿಲ್ಲುತ್ತದೆ. ಬಳಿಕ ವೃದ್ಧ ಕೋಚ್‌ನತ್ತ ನಡೆದು ನಿಧಾನವಾಗಿ ಚಲಿಸುತ್ತಿದ್ದ ರೈಲನ್ನು ಸರಾಗವಾಗಿ ಏರುತ್ತಾರೆ. ರೈಲಿನ ಇನ್ನೊಂದು ಕೋಚ್‌ನಲ್ಲಿ ಮಹಿಳೆಯೊಬ್ಬರು ಜಿಗಿಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ವೈರಲ್‌ ಆಗಿದ್ದು, ಈ ವೃದ್ಧ ರೈಲನ್ನು ನಿಲ್ಲಿಸುವುದನ್ನು ನೋಡಿದ ನೆಟಿಜನ್‌ಗಳು ಆಶ್ಚರ್ಯಚಕಿತರಾಗಿದ್ದಾರೆ. 


ಇದನ್ನೂ ಓದಿ: Viral Video : ನಾಗರ ಹಾವು - ಮುಂಗುಸಿ ಕಾದಾಟದ ವಿಡಿಯೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.