SDRF Team Helping: ಟ್ವಿಟರ್‌ನಲ್ಲಿ ಆಘಾತಕಾರಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನಂತರ ದೃಶ್ಯದಲ್ಲಿ ಕಾಣುವ ಮಗುವಿನ ಧೈರ್ಯವನ್ನು ನಿಜಕ್ಕೂ ಮೆಚ್ಚಬೇಕು. ಆದಾಗ್ಯೂ, SDRF ತಂಡವು ಪ್ರಶಂಸೆಗೆ ಅರ್ಹವಾಗಿದೆ. ವಾಸ್ತವವಾಗಿ ಈ ವಿಡಿಯೋದಲ್ಲಿ SDRF ತಂಡವು ಬಾಲಕನನ್ನು ರಕ್ಷಿಸುವಲ್ಲಿ ನಿರತವಾಗಿದೆ. ಇದು ನಿಜವಾದ ವೀರಾವೇಶದ ಕೃತ್ಯ ಎಂದು ಈ ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಚಂಬಲ್ ನದಿ, ಮೊಸಳೆ ಮತ್ತು ಫೈಟರ್ ಕಿಡ್. ರಕ್ಷಣಾ ತಂಡಕ್ಕೆ ವಂದನೆಗಳು ಎಂದು ಬರೆದಿದ್ದಾರೆ. ಈ ವಿಡಿಯೋದಲ್ಲಿ ಕೆಲವು ಮೊಸಳೆಗಳು ಬಾಲಕನ ಸುತ್ತ ಸುತ್ತುತ್ತಿರುವುದನ್ನು ಕಾಣಬಹುದು. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.
ಇದನ್ನೂ ಓದಿ: Weight Loss : ಒಂದು ಲೋಟ ಬೆಚ್ಚಗಿನ ಹಾಲು ನಿಮ್ಮ ತೂಕ, ಸಕ್ಕರೆ ಮಟ್ಟ ನಿಯಂತ್ರಿಸುತ್ತೆ
This is real heroic deed. Chambal river, crocodiles and the fighter kid. Salute to the rescue team. #Chambal pic.twitter.com/MvNVLV5pVy
— Dr Bhageerath Choudhary IRS (@DrBhageerathIRS) August 24, 2022
ಬಾಲಕ ನೀರಿನಲ್ಲಿ ಮುಳುಗುತ್ತಿದ್ದಾಗ ತನ್ನ ಧೈರ್ಯ ಬಿಡದೇ ಹೋರಾಡಿದೆ. ಸುತ್ತ ಮೊಸಳೆ ಕಂಡರು ಸಹ ಧೈರ್ಯವನ್ನು ಕಳೆದುಕೊಳ್ಳದೆ ಬಾಲಕ ಈಜುತ್ತಲೇ ಇದ್ದ. ಇದಲ್ಲದೇ ಬಾಲಕನ ಅದೃಷ್ಟ ಕೂಡ ಆಸರೆಯಾಗಿದ್ದು, ಈ ಕಾರಣದಿಂದ ಆತ ತನ್ನ ಪ್ರಾಣ ಉಳಿಸಿಕೊಳ್ಳುವಲ್ಲಿ ಬಾಲಕ ಯಶಸ್ವಿಯಾಗಿದ್ದಾನೆ. ಮಗುವಿನ ಜೀವ ಉಳಿಸಲು ರಕ್ಷಣಾ ತಂಡಕ್ಕೆ ಹಲವರು ಧನ್ಯವಾದ ಸಲ್ಲಿಸುತ್ತಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲ ಈ ಪುಟ್ಟ ಬಾಲಕನನ್ನು ರಕ್ಷಿಸುವಲ್ಲಿ ಎಸ್ ಡಿಆರ್ ಎಫ್ ತಂಡ ಯಶಸ್ವಿಯಾಗಿದೆ.
ಈ ಕೆಲವು ಸೆಕೆಂಡುಗಳ ವವಿಡಿಯೋವನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಅನೇಕರು ಇದನ್ನು ಲೈಕ್ ಮಾಡಿ ರೀಟ್ವೀಟ್ ಮಾಡುತ್ತಿರುವುದು ಕಂಡುಬಂದಿದೆ. ಕಾಮೆಂಟ್ ವಿಭಾಗದಲ್ಲಿ ಜನರ ವಿಭಿನ್ನ ಪ್ರತಿಕ್ರಿಯೆಗಳನ್ನು ಸಹ ನೋಡಲಾಗುತ್ತಿದೆ. ಆದರೆ ಈ ವೀಡಿಯೊದ ಸ್ಥಳವನ್ನು ನಾವು ದೃಢೀಕರಿಸಲ್ಲ.
ಇದನ್ನೂ ಓದಿ: ಭಾರತದಲ್ಲಿ Vivo Y35: ಅದರ ಬೆಲೆ, ಬ್ಯಾಂಕ್ ಕೊಡುಗೆಗಳು, ವಿಶೇಷಣಗಳನ್ನು ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.