Viral Video: ಇದು ತೋಳವೋ? ನರಿಯೋ? ಜಗತ್ತನ್ನೇ ಗೊಂದಲಕ್ಕೀಡು ಮಾಡಿದ ಪ್ರಾಣಿ ಯಾವುದಯ್ಯಾ ಇದು?
Maned Wolf spotted: ಕೆಲವರು ಇದನ್ನು ತೋಳ ಎಂದರೆ, ಇನ್ನೂ ಕೆಲವರು ಇದು ನರಿಯ ಒಂದು ಜಾತಿ ಇರಬಹುದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಉದ್ದವಾದ ಕೆಂಪು-ಕಂದು ಬಣ್ಣದ ತುಪ್ಪಳ, ಅತ್ಯಂತ ಉದ್ದವಾದ ಕಪ್ಪು ಕಾಲುಗಳು ಮತ್ತು ನರಿಯಂತಹ ತಲೆಯನ್ನು ಹೊಂದಿರುವ ಮ್ಯಾನ್ಡ್ ತೋಳ ಆಗಿರಬಹುದು ಎಂದು ಹೇಳುತ್ತಿದ್ದಾರೆ.
Maned Wolf spotted: ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ನರಿಯೂ ಅಲ್ಲದ ತೋಳವೂ ಅಲ್ಲದ ಪ್ರಾಣಿಯೊಂದು ಕಾಣಿಸಿಕೊಂಡಿದೆ. ತೀರಾ ವಿಚಿತ್ರವಾಗಿರುವ ಈ ಪ್ರಾಣಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ದಕ್ಷಿಣ ಅಮೆರಿಕಾದಲ್ಲಿ ಈ ಅಸಾಮಾನ್ಯ ಪ್ರಾಣಿ ಆಕಸ್ಮಿಕವಾಗಿ ರಸ್ತೆ ದಾಟುತ್ತಿರುವುದನ್ನು ಕಂಡುಬಂದಿದೆ ಎನ್ನಲಾಗಿದೆ.
ಇನ್ನು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವ್ಯಕ್ತಿ, "ಯಾರಿಗಾದರೂ ಗೊತ್ತಾ ಇದು ಏನು ಅಂತಾ?!" ಎಂದು ಟ್ವಿಟ್ಟರ್ ಬಳಕೆದಾರರಿಗೆ ಪ್ರಶ್ನೆ ಮಾಡಿ, ಶೀರ್ಷಿಕೆ ಬರೆದಿದ್ದಾರೆ.
ಇದನ್ನೂ ಓದಿ: Javed Akhtar: 'ಪತ್ನಿಯರಿಗೂ ಕೂಡ ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದುವ ಹಕ್ಕು ಕೊಡಿ'
ಕೆಲವರು ಇದನ್ನು ತೋಳ ಎಂದರೆ, ಇನ್ನೂ ಕೆಲವರು ಇದು ನರಿಯ ಒಂದು ಜಾತಿ ಇರಬಹುದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಉದ್ದವಾದ ಕೆಂಪು-ಕಂದು ಬಣ್ಣದ ತುಪ್ಪಳ, ಅತ್ಯಂತ ಉದ್ದವಾದ ಕಪ್ಪು ಕಾಲುಗಳು ಮತ್ತು ನರಿಯಂತಹ ತಲೆಯನ್ನು ಹೊಂದಿರುವ ಮ್ಯಾನ್ಡ್ ತೋಳ ಆಗಿರಬಹುದು ಎಂದು ಹೇಳುತ್ತಿದ್ದಾರೆ. ಇದು ರಾತ್ರಿಯ ಸಮಯದಲ್ಲಿ ಓಡಾಡುವ ಜೀವಿ. ಅಷ್ಟೇ ಅಲ್ಲದೆ, ಇದು ಒಂಟಿಯಾಗಿ ಓಡಾಡುವ ಪ್ರಾಣಿಯಾಗಿದ್ದು, ಸಣ್ಣ ಪ್ರಾಣಿಗಳು, ಕೀಟ ಮತ್ತು ಸಸ್ಯ ಪದಾರ್ಥಗಳನ್ನು ತಿಂದು ಬದುಕುತ್ತವೆ ಎಂದು ಹೇಳಲಾಗುತ್ತಿದೆ.
'ಮೇನ್ಡ್ ವುಲ್ಫ್' ವಿಡಿಯೋವೊಂದು ಸದ್ಯ ವೈರಲ್ ಆಗಿದ್ದು, ಇಂಟರ್ನೆಟ್ ತುಂಬಾ ಸದ್ದು ಮಾಡುತ್ತಿದೆ. ಟ್ವಿಟರ್‌ನಲ್ಲಿ ಇಂಟರ್ನೆಟ್ ಬಳಕೆದಾರ ರೆಗ್ ಸ್ಯಾಡ್ಲರ್ ಎಂಬವರು ಹಂಚಿಕೊಂಡ ವೀಡಿಯೊದಲ್ಲಿ, ಪ್ರಾಣಿ ಶಾಂತವಾಗಿ ರಸ್ತೆ ದಾಟುತ್ತಿರುವುದನ್ನು ಕಾಣಬಹುದು. ವಿಚಿತ್ರವೆಂದರೆ ಪ್ರಾಣಿಯು ಮೊದಲ ನೋಟದಲ್ಲಿ ತೋಳದಂತೆ ಕಂಡರೂ ಸಹ, ಬಳಿಕ ಹತ್ತಿರದಿಂದ ನೋಡಿದರೆ ಅದು ನರಿ ಥರ ಕಾಣಿಸುತ್ತದೆ. ಇದು ಯಾವ ವರ್ಗಕ್ಕೆ ಸೇರಿದೆ ಎಂಬುದು ಇನ್ನೂ ಖಚಿತವಾಗಿಲ್ಲ.
Viral Video : ಆನೆಗೆ ಕೋಲಿನಿಂದ ಹೊಡೆದ ಯುವಕ, ಕೆಣಕಿದವರನ್ನು ಸುಮ್ಮನೆ ಬಿಟ್ಟೀತಾ?
'ಮೇನ್ಡ್ ವುಲ್ಫ್' ಉದ್ದವಾದ ಕೆಂಪು-ಕಂದು ಬಣ್ಣದ ತುಪ್ಪಳ, ಅತ್ಯಂತ ಉದ್ದವಾದ ಕಪ್ಪು ಕಾಲುಗಳು ಮತ್ತು ನರಿಯಂತಹ ತಲೆಯನ್ನು ಹೊಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.