Javed Akhtar: 'ಪತ್ನಿಯರಿಗೂ ಕೂಡ ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದುವ ಹಕ್ಕು ಕೊಡಿ'

Common Civil Code: ಹಲವು ಬಾರಿ ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಸಿಲುಕಿಕೊಳ್ಳುವ ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್, ಈ ಬಾರಿಯೂ ಕೂಡ ಕಾಮನ್ ಸಿವಿಲ್ ಕೋಡ್ ಕುರಿತು ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.  

Written by - Nitin Tabib | Last Updated : Dec 6, 2022, 06:28 PM IST
  • ಸಂದರ್ಶನವೊಂದರಲ್ಲಿ ಕಾಮನ್ ಸಿವಿಲ್ ಕೋಡ್ ಅರ್ಥವನ್ನು ವಿವರಿಸಿದ ಜಾವೇದ್ ಅಖ್ತರ್,
  • ನನಗೆ ಒಬ್ಬ ಮಗ ಮತ್ತು ಮಗಳಿದ್ದಾರೆ.
  • ನನ್ನ ಆಸ್ತಿಯನ್ನು ನಾನು ನೀಡಬೇಕಾದರೆ, ನಾನು ಅದನ್ನು ಎರಡು ಸಮಾನ ಭಾಗಗಳಲ್ಲಿ ಮಾಡುತ್ತೇನೆ.
Javed Akhtar: 'ಪತ್ನಿಯರಿಗೂ ಕೂಡ ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದುವ ಹಕ್ಕು ಕೊಡಿ'  title=
Javed Akthar Controversial Statement

Controversial Statement: ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಬಹಿರಂಗ ಹೇಳಿಕೆ ನೀಡುವಲ್ಲಿ ಜಾವೇದ್ ಅಖ್ತರ್. ಆದರೆ ಕೆಲವೊಮ್ಮೆ ಅವರು ನೀಡುವ ಕೆಲ ಹೇಳಿಕೆಗಳು ಅವರ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತವೆ. ಪ್ರಸ್ತುತ ಅವರ ಒಂದು ಹೇಳಿಕೆಯಿಂದ ಭಾರಿ ವಾಕ್ ಸಮರವೇ ಆರಂಭ ಗೊಂಡಿದೆ. ಕಾಮನ್ ಸಿವಿಲ್ ಕೋಡ್ ಬಗ್ಗೆ ಮಾತನಾಡುವಾಗ ಜಾವೇದ್ ಅಖ್ತರ್ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಸಾಮಾನ್ಯ ನಾಗರಿಕ ಸಂಹಿತೆಯ ಅರ್ಥ ವಿವರಿಸಿದ ಜಾವೇದ್ ಅಖ್ತರ್
ಸಂದರ್ಶನವೊಂದರಲ್ಲಿ ಕಾಮನ್ ಸಿವಿಲ್ ಕೋಡ್ ಅರ್ಥವನ್ನು ವಿವರಿಸಿದ ಜಾವೇದ್ ಅಖ್ತರ್, ನನಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ನನ್ನ ಆಸ್ತಿಯನ್ನು ನಾನು ನೀಡಬೇಕಾದರೆ, ನಾನು ಅದನ್ನು ಎರಡು ಸಮಾನ ಭಾಗಗಳಲ್ಲಿ ಮಾಡುತ್ತೇನೆ. ಕಾಮನ್ ಸಿವಿಲ್ ಕೋಡ್ ಎಲ್ಲಾ ಸಮುದಾಯಗಳಿಗೆ ಮಾತ್ರವಲ್ಲದೆ ಪುರುಷರು ಮತ್ತು ಮಹಿಳೆಯರಿಗೆ ಕಾನೂನು ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.

ಇದನ್ನೂ ಓದಿ-Bride-Groom Big Fight: ಮದುವೆ ಮಂಟಪದಲ್ಲಿಯೇ ವಧು-ವರರ ನಡುವೆ 'ಮಹಾಭಾರತ'

ಒಬ್ಬರಿಗಿಂತ ಹೆಚ್ಚು ಪತಿಯರನ್ನು ಹೊಂದುವ ಹಕ್ಕು ಹೆಣ್ಣಿಗೂ ಸಿಗಲಿ!
ಒಂದೆಡೆ ಜಾವೇದ್ ಅಖ್ತರ್ ನೀಡಿರುವ ಈ ಹೇಳಿಕೆಗೆ ಸಮಾಜದ ಕೆಲ ವರ್ಗಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಕೆಲ ವರ್ಗಗಳ ಜನರ ಕರುಳನ್ನೇ ಕಿತ್ತಿದೆ ಎಂದರೆ ತಪ್ಪಾಗಲಾರದು. ವಾಸ್ತವದಲ್ಲಿ, ಈ ಸಂದರ್ಶನದ ಸಂದರ್ಭದಲ್ಲಿ , ಜಾವೇದ್ ಅವರು ಪುರುಷರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದುವ ಹಕ್ಕನ್ನು ನೀಡಿದ್ದರೆ, ಅದೇ ರೀತಿ ಮಹಿಳೆಯರಿಗೂ ಕೂಡ ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದುವ ಹಕ್ಕನ್ನು ನೀಡಬೇಕು ಎಂದು ಹೇಳಿದ್ದಾರೆ. ಹಾಗಾಗದಿದ್ದರೆ ಅದು ಯಾವ ಸಮಾನತೆ ಎಂದು ಪ್ರಶ್ನಿಸಿದ್ದಾರೆ. ಈ ಹೇಳಿಕೆಯ ನಂತರ ಕೆಲವರು ಜಾವೇದ್ ಅಖ್ತರ್ ವಿರುದ್ಧ ಧ್ವನಿ ಎತ್ತುವ ಬಗ್ಗೆಯೂ ಮಾತನಾಡಿದ್ದಾರೆ.

ಇದನ್ನೂ ಓದಿ-Bharat Jodo Yatra : ಬಿಜೆಪಿ ನಾಯಕರಿಗೆ ಫ್ಲೈಯಿಂಗ್ ಕಿಸ್ ನೀಡಿದ ರಾಹುಲ್ ಗಾಂಧಿ

ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕೋಲಾಹಲ
ಜಾವೇದ್‌ ಭಾಯಿ ಅವರ ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕೋಲಾಹಲವೇ ಸೃಷ್ಟಿಯಾಗಿದೆ. ಗೀತ ರಚನೆಕಾರರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಲವರು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಜಾವೇದ್ ಅಖ್ತರ್ ಅವರ ಈ ಹೇಳಿಕೆ ನಾಚಿಕೆಗೇಡು ಎಂದು ಸೈಫ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಆದಾಗ್ಯೂ, ಜಾವೇದ್ ಅಖ್ತರ್ ಅವರ ಮಾತನ್ನು ಅನೇಕ ಜನರು ಬೆಂಬಲಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News