Bride-Groom Big Fight: ಮದುವೆ ಮಂಟಪದಲ್ಲಿಯೇ ವಧು-ವರರ ನಡುವೆ 'ಮಹಾಭಾರತ'

Viral Video: ಸಾಮಾಜಿಕ ಮಾಧ್ಯಮದಲ್ಲಿ ವಧು-ವರರಿಗೆ ಸಂಬಂಧಿಸಿದ ಒಂದು ಸ್ವಾರಸ್ಯಕರ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಪ್ರರಸ್ಪರ ಕಾಳಗವನ್ನೇ ನಡೆಸಿದ್ದಾರೆ.  

Written by - Nitin Tabib | Last Updated : Dec 6, 2022, 04:58 PM IST
  • ಸಾಮಾನ್ಯವಾಗಿ ಮದುವೆಯಲ್ಲಿ ಹಲವು ವಿಧದ ಆಚರಣೆಗಳನ್ನು ನಡೆಸಲಾಗುತ್ತದೆ.
  • ಅನೇಕ ಸ್ಥಳಗಳಲ್ಲಿ, ಈ ಆಚರಣೆಗಳು ತುಂಬಾ ವಿಚಿತ್ರವಾಗಿರುತ್ತವೆ
  • ಅವುಗಳನ್ನು ಅರಿಯದವರಿಗೆ ಅವು ದಿಗ್ಭ್ರಮೆಯನ್ನೇ ನೀಡುತ್ತವೆ.
Bride-Groom Big Fight: ಮದುವೆ ಮಂಟಪದಲ್ಲಿಯೇ ವಧು-ವರರ ನಡುವೆ 'ಮಹಾಭಾರತ'  title=
Marriage Ritual Funny Video

Trending Video: ಮದುವೆಯ ಸೀಸನ್ ಶುರುವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಮದುವೆಯ ಕುರಿತಾದ ತಮಾಷೆಯ ವಿಡಿಯೋಗಳು ಹರಿದಾಡುತ್ತಿವೆ. ಪ್ರತಿನಿತ್ಯ ಹಲವು ರೀತಿಯ ವಿಡಿಯೋಗಳು ಶೇರ್ ಆಗುತ್ತಿವೆ. ಈ ವೀಡಿಯೊಗಳಲ್ಲಿ ಹೆಚ್ಚಿನ ವಿಡಿಯೋಗಳು ತಮಾಷೆಯ ವಿಡಿಯೋಗಳಾಗಿವೆ, ಆದರೆ ಜನರು ಕೆಲವನ್ನು ನೋಡಿ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. ಅಂತಹುದೇ ಒಂದು ಮದುವೆಯ ವೀಡಿಯೊ ಇದೀಗ ಜನರಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ, ಇದನ್ನು ನೋಡಿ ನಿಮಗೂ ಕೂಡ ನಗೆ ತಡೆದುಕೊಳ್ಳುವುದು ಕಷ್ಟವಾಗಲಿದೆ. ಏಕೆಂದರೆ, ಈ ವಿಡಿಯೋದಲ್ಲಿ ವಧು-ವರರು ಮದುವೆ ಮಂಟಪದಲ್ಲಿಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಇದನ್ನೂ ಓದಿ-Trending Video: ಮೊದಲು ಜೋಕಾಲಿ ಆಡುವ ಈ ಪುಟಾಣಿಯ ವಿಡಿಯೋ ನೋಡಿ, ನಂತರ ದಮ್ಮಿದ್ರೆ ನಗು ತಡೆದು ತೋರಿಸಿ

ಸಾಮಾನ್ಯವಾಗಿ ಮದುವೆಯಲ್ಲಿ ಹಲವು ವಿಧದ ಆಚರಣೆಗಳನ್ನು ನಡೆಸಲಾಗುತ್ತದೆ. ಅನೇಕ ಸ್ಥಳಗಳಲ್ಲಿ, ಈ ಆಚರಣೆಗಳು ತುಂಬಾ ವಿಚಿತ್ರವಾಗಿರುತ್ತವೆ, ಅವುಗಳನ್ನು ಅರಿಯದವರಿಗೆ ಅವು ದಿಗ್ಭ್ರಮೆಯನ್ನೇ ನೀಡುತ್ತವೆ. ಎಲ್ಲೋ ಒಂದು ಕಡೆ ಮುತ್ತು ಕೊಡುವ ಪದ್ಧತಿ ಇದೆ, ಇನ್ನು ಕೆಲವೆಡೆ ಹೊಡೆಯುವ ಪದ್ಧತಿ ಇದೆ. ಆದರೆ, ಈ ವಿಡಿಯೋದಲ್ಲಿ ವಧು-ವರರು ಮಾಡುತ್ತಿರುವ ಆ್ಯಕ್ಷನ್ ನೋಡಿ ಜನ ಬೆಚ್ಚಿ ಬೀಳುತ್ತಿದ್ದು, ನಗುತ್ತಿದ್ದಾರೆ. ಮದುವೆಯ ವಿಧಿವಿಧಾನಗಳನ್ನು ನೀವು ವೀಡಿಯೊದಲ್ಲಿ ನೋಡಬಹುದು. ಇದ್ದಕ್ಕಿದ್ದಂತೆ ವಧು-ವರರು ಪರಸ್ಪರ ಹೊಡೆಯಲು ಪ್ರಾರಂಭಿಸುತ್ತಾರೆ. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡ ರೀತಿ ನೋಡಿ ಅಲ್ಲಿದ್ದ ಜನರೂ ಆಶ್ಚರ್ಯ ಪಡುತ್ತಿದ್ದಾರೆ. ಕೆಲವರು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಾರೆ, ಆದರೆ ಇಬ್ಬರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅದರ ನಂತರ ಏನಾಗುತ್ತದೆ ವೀಡಿಯೊದಲ್ಲಿ ನೀವೇ ನೋಡಿ...

ಇದನ್ನೂ ಓದಿ-Viral Video: ಮಾರುಕಟ್ಟೆಯಲ್ಲಿ ನಾಯಿ ತರಕಾರಿ ಖರೀದಿಸುವುದನ್ನು ಎಲ್ಲಾದರೂ ನೋಡಿದ್ದೀರಾ?

ವಧು-ವರರ ನಡುವೆ ಜಬರ್ದಸ್ತ್ ಫೈಟ್
ವಧು-ವರರ ನಡುವಣ 'ಮಹಾಭಾರತ' ನೋಡಿ ನಿಮ್ಮ ಮನಸ್ಸು ಗೊಂದಲಕ್ಕೀಡಾಗಿರಬಹುದು. ಅದೇನೇ ಇದ್ದರೂ ಪ್ರಸ್ತುತ ಈ ವಿಡಿಯೋ ಮಾತ್ರ ಭಾರಿವೈರಲ್ ಆಗುತ್ತಿದೆ. ಈ ವೀಡಿಯೊವನ್ನು Instagram ನಲ್ಲಿ 'haryanvi_chhori' ಹೆಸರಿನ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಜನರು ಇದನ್ನು ನೋಡಿದ್ದಾರೆ. ಆದರೆ, ಒಂದು ಲಕ್ಷ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇನ್ನೊಂದೆಡೆ ಈ ವಿಡಿಯೋ ಕುರಿತು ಚರ್ಚೆ ಮಾಡುತ್ತಿರುವ ಹಲವರು ತಮಾಷೆ ಮಾಡಿ ಹರಟೆ ಹೊಡೆಯುವ ರೀತಿಯಲ್ಲಿ ವೀಡಿಯೊಗೆ ಕಾಮೆಂಟ್ ಮಾಡುತ್ತಿದ್ದಾರೆ. ಇದು ತುಂಬಾ ತಮಾಷೆಯ ಪದ್ಧತಿ ಎಂದು ಕೆಲವರು ಹೇಳುತ್ತಾರೆ. ಮದುವೆಯಲ್ಲಿ ಯಾರು ಈ ರೀತಿ ಜಗಳವಾಡುತ್ತಾರೆ? ಎಂದು ಉಳಿದವರು ಪ್ರಶ್ನಿಸುತ್ತಿದ್ದಾರೆ. ದಂಪತಿಗಳು ಮೋಜು ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News