ನವದೆಹಲಿ: ಬಲ್ಗೇರಿಯಾದ ಕುರುಡು ಮಹಿಳೆ, ಖ್ಯಾತ ಪ್ರವಾದಿ ಬಾಬಾ ವಂಗಾ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿದ್ದಾರೆ. ಇದುವರೆಗೆ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಈ ಕಾರಣದಿಂದಾಗಿಯೇ ಅವರ ಭವಿಷ್ಯವಾಣಿಗಳ ಬಗ್ಗೆ ವಿಶ್ವದಾದ್ಯಂತ ಹೆಚ್ಚಾಗಿ ಚರ್ಚಿಸಲಾಗುತ್ತದೆ. ತಮ್ಮ ಮರಣಕ್ಕೂ ಮುನ್ನ ಬಾಬಾ ವೆಂಗಾ ಯುದ್ಧ ಮತ್ತು ವಿಪತ್ತು ಸೇರಿದಂತೆ ಪ್ರಪಂಚಕ್ಕೆ ಸಂಬಂಧಿಸಿದ ಅನೇಕ ಸ್ಫೋಟಕ ಭವಿಷ್ಯವಾಣಿಗಳನ್ನು ನುಡಿದಿದ್ದರು. ಈ ಪೈಕಿ ಪ್ರಪಂಚದ ಅಂತ್ಯದ ಬಗ್ಗೆಯೂ ಅವರು ಭಯಾನಕ ಭವಿಷ್ಯವಾಣಿ ನುಡಿದಿದ್ದಾರೆ. ವಂಗಾ ಹೇಳಿರುವ ಪ್ರಕಾರ ಈ ಜಗತ್ತಿನ ಅಂತ್ಯ ಯಾವಾಗ ಆಗುತ್ತೆ ಗೊತ್ತಾ?


COMMERCIAL BREAK
SCROLL TO CONTINUE READING

ಜಗತ್ತು ಯಾವಾಗ ಕೊನೆಗೊಳ್ಳುತ್ತದೆ?


ಬಾಬಾ ವಂಗಾ ಅವರು 1996ರಲ್ಲಿ ನಿಧನರಾದರು. ಸಾವಿಗೂ ಮುನ್ನ ಅವರು 5079ರವರೆಗೆ ಭವಿಷ್ಯ ನುಡಿದಿದ್ದರು. ವಂಗಾರ ಭವಿಷ್ಯವಾಣಿಯ ಪ್ರಕಾರ, ಪ್ರಪಂಚವು 5079ರಲ್ಲಿ ಕೊನೆಗೊಳ್ಳುತ್ತದಂತೆ. ಅಂದರೆ 5079ರಲ್ಲಿ ಈ ಪ್ರಪಂಚವು ಸಂಪೂರ್ಣವಾಗಿ ಅಂತ್ಯ ಕಾಣಲಿದೆಯಂತೆ.  


ಇದನ್ನೂ ಓದಿ: Bride Groom Video: ವೇದಿಕೆಯ ಮೇಲೆ ನಿಂತಿದ್ದ ವಧು-ವರರ ಮೇಲೆ ಬಿದ್ದ ಸ್ಪೀಕರ್!


ಭೂಮಿಯ ಕಕ್ಷೆಯು 2023ರಲ್ಲಿ ಬದಲಾಗುತ್ತದೆ


ಬಾಬಾ ವಂಗಾ ಅವರು 2023ರಲ್ಲಿ ಭೂಮಿಯ ಕಕ್ಷೆಯನ್ನು ಬದಲಾಯಿಸುವ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದರು. 2023ರಲ್ಲಿ ಭೂಮಿಯ ಕಕ್ಷೆಯು ಬದಲಾಗುತ್ತದೆ ಮತ್ತು ಇದು ಜೀವ ಸಂಕುಲಗಳ ಮೇಲೆ ಆಳ ಪರಿಣಾಮ  ಬೀರಬಹುದು ಎಂದು ಅವರು ಹೇಳಿದ್ದರು. ಇದರೊಂದಿಗೆ 2028ರಲ್ಲಿ ಗಗನಯಾತ್ರಿಗಳು ಶುಕ್ರ ಗ್ರಹವನ್ನು ತಲುಪಬಹುದು ಎಂದು ವಂಗಾ ಭವಿಷ್ಯ ನುಡಿದಿದ್ದಾರೆ.


2046ರಲ್ಲಿ ಮಾನವರ ವಯಸ್ಸು 100 ವರ್ಷ


ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಯಲ್ಲಿ ಮಾನವರ ವಯಸ್ಸಿನ ಬಗ್ಗೆಯೂ ಹೇಳಿದ್ದಾರೆ. 2046ರ ವೇಳೆಗೆ ವಿಜ್ಞಾನವು ತುಂಬಾ ಪ್ರಗತಿ ಹೊಂದುತ್ತದೆ ಮತ್ತು ಮಾನವ ಅಂಗಗಳ ಕಸಿ ಅಂದರೆ ಮಾನವ ಅಂಗಾಂಗ ಕಸಿ ಸುಲಭವಾಗಿ ಮಾಡಲಾಗುತ್ತದೆ. ಈ ಕಾರಣದಿಂದಾಗಿ ಜನರು ಮೊದಲಿಗಿಂತ ಹೆಚ್ಚು ಕಾಲ ಬದುಕಲು ಪ್ರಾರಂಭಿಸುತ್ತಾರೆ ಮತ್ತು ಜನರು ಸುಮಾರು 100 ವರ್ಷಗಳವರೆಗೆ ಬದುಕಬಹುದು ಎಂದು ವಂಗಾ ಹೇಳಿದ್ದಾರೆ.


ಇದನ್ನೂ ಓದಿ: Digital currency: ಇಂದಿನಿಂದಲೇ ಭಾರತದ ಮೊದಲ ಡಿಜಿಟಲ್ ರೂಪಾಯಿ ಆರಂಭ


2022ರಲ್ಲಿ ನಿಜವಾಗಿರುವ ವಂಗಾರ 2 ಭವಿಷ್ಯವಾಣಿಗಳು!


2022ರಲ್ಲಿ ಬಾಬಾ ವಂಗಾ ಅವರ 2 ಭವಿಷ್ಯವಾಣಿಗಳು ನಿಜವಾಗಿವೆ. ಆದರೆ ಈ ವರ್ಷ ಅವರು ಒಟ್ಟು 6 ಭವಿಷ್ಯಗಳನ್ನು ನುಡಿದಿದ್ದಾರೆ. ವಂಗಾರ ಪ್ರಕಾರ, ಕೆಲವು ಏಷ್ಯಾದ ದೇಶಗಳು ಮತ್ತು ಆಸ್ಟ್ರೇಲಿಯಾದಲ್ಲಿ ಪ್ರವಾಹ, ಕೆಲವು ದೇಶಗಳಲ್ಲಿ ನೀರಿನ ಕೊರತೆ, ಸೈಬೀರಿಯಾದಲ್ಲಿ ಹೊಸ ಮಾರಣಾಂತಿಕ ವೈರಸ್, ಅನ್ಯಲೋಕದ ದಾಳಿ, ಮಿಡತೆ ಆಕ್ರಮಣ ಮತ್ತು ವರ್ಚುವಲ್ ರಿಯಾಲಿಟಿ ಹೆಚ್ಚಳವನ್ನು 2022ರಲ್ಲಿ ಊಹಿಸಬಹುದು ಎಂದು ಅವರು ಹೇಳಿದ್ದರು. ಈ ಪೈಕಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿದೆ. ಇದಲ್ಲದೇ ಪೋರ್ಚುಗಲ್, ಇಟಲಿಯಂತಹ ದೇಶಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಜಗತ್ತಿನ ಅಂತ್ಯದ ಬಗ್ಗೆ ವಂಗಾರ ಭವಿಷ್ಯವಾಣಿ ನಿಜವಾಗುತ್ತಾ ಕಾದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.