Bride Groom Video: ವೇದಿಕೆಯ ಮೇಲೆ ನಿಂತಿದ್ದ ವಧು-ವರರ ಮೇಲೆ ಬಿದ್ದ ಸ್ಪೀಕರ್!

Bride Groom Video: ವಧು-ವರರು ವೇದಿಕೆಯ ಮೇಲೆ ನಿಂತಿರುವುದನ್ನು ನೀವು ನೋಡುತ್ತೀರಿ. ಈ ವೇಳೆ ಇದ್ದಕ್ಕಿದ್ದಂತೆ ಸೌಂಡ್ ಬಾಕ್ಸ್ ವಧುವಿನ ಮೇಲೆ ಬೀಳುತ್ತದೆ. ಇದೀಗ ಈ ವಿಡಿಯೋಗೆ ನೆಟಿಜನ್‌ಗಳ ಕಾಮೆಂಟ್‌ ಮಾಡಲು ಆರಂಭಿಸಿದ್ದಾರೆ. 

Written by - Chetana Devarmani | Last Updated : Nov 1, 2022, 03:22 PM IST
  • ವೇದಿಕೆಯ ಮೇಲೆ ನಿಂತಿದ್ದ ವಧು-ವರ
  • ವಧು-ವರರ ಮೇಲೆ ಬಿದ್ದ ಸ್ಪೀಕರ್
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
Bride Groom Video: ವೇದಿಕೆಯ ಮೇಲೆ ನಿಂತಿದ್ದ ವಧು-ವರರ ಮೇಲೆ ಬಿದ್ದ ಸ್ಪೀಕರ್! title=
ವಧು-ವರ‌

Bride Groom Video: ಮದುವೆಗಳಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಿದ್ದು, ನೋಡಿದರೆ ನಗು ಬರುತ್ತದೆ. ಜೀವನದಲ್ಲಿ ನೆನಪಿನಲ್ಲಿ ಉಳಿಯುವ ಕೆಲವು ಕ್ಷಣಗಳಿವೆ. ವಧು-ವರರಿಗೆ ಸಂಬಂಧಿಸಿದ ಇಂತಹದ್ದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರಲ್ಲಿ ವಧು-ವರರು ವೇದಿಕೆಯ ಮೇಲೆ ನಿಂತಿರುವುದನ್ನು ನೀವು ನೋಡುತ್ತೀರಿ. ಅವರ ಮುಂದೆ ಅನೇಕ ಜನರು ನೃತ್ಯ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸೌಂಡ್ ಬಾಕ್ಸ್ ವಧುವಿನ ಮೇಲೆ ಬೀಳುತ್ತದೆ. ಇದಾದ ನಂತರ ಸೃಷ್ಟಿಯಾಗುವ ವಾತಾವರಣ, ಅತಿಥಿಗಳೆಲ್ಲ ಅಚ್ಚರಿಗೊಂಡಿದ್ದಾರೆ. 

ಇದನ್ನೂ ಓದಿ : Video Viral : ವ್ಯಕ್ತಿಯ ರುಂಡವನ್ನು ಬಾಯಿಯಲ್ಲಿ ಹಿಡಿದು ತಿರುಗಾಡಿದ ನಾಯಿ!

ಮದುವೆಗೆ ಸಂಬಂಧಿಸಿದ ವಿವಿಧ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತದೆ. ವೈರಲ್ ಆಗುತ್ತಿರುವ ಇತ್ತೀಚಿನ ವಿಡಿಯೋದಲ್ಲಿ, ವಧು-ವರರು ವೇದಿಕೆಯ ಮೇಲೆ ನಿಂತಿರುವುದನ್ನು ನೀವು ನೋಡುತ್ತೀರಿ. ಕೆಲವು ಹುಡುಗರು ಅವರ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾರೆ. ಆಗ ವರನ ತಲೆಯ ಮೇಲೆ ದೊಡ್ಡ ಸೌಂಡ್ ಬಾಕ್ಸ್ ಬಿದ್ದು ವಧುಗೂ ಪೆಟ್ಟು ಬೀಳುತ್ತದೆ. ಇಬ್ಬರೂ ಮುಂದೆ ಬೀಳುತ್ತಾರೆ. ಇಬ್ಬರಿಗೂ ಗಾಯಗಳಾಗಿರಬಹುದು. 

 

 

ವಿಡಿಯೋದ ಕೊನೆಯಲ್ಲಿ ವಧು-ವರರ ಮೇಲೆ ಸೌಂಡ್ ಬಾಕ್ಸ್ ಬೀಳುವ ಮೂಲಕ ಸಂಪೂರ್ಣವಾಗಿ ಆಘಾತಕ್ಕೊಳಗಾಗಿರುವುದನ್ನು ನೀವು ನೋಡುತ್ತೀರಿ. ಇದೀಗ ಈ ವಿಡಿಯೋಗೆ ನೆಟಿಜನ್‌ಗಳ ಕಾಮೆಂಟ್‌ ಮಾಡಲು ಆರಂಭಿಸಿದ್ದಾರೆ. gyanendra ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. 

ಇದನ್ನೂ ಓದಿ : ವಿರಾಟ್‌ ಕೊಹ್ಲಿ ಬೆಡ್‌ ರೂಂ ವಿಡಿಯೋ ಲೀಕ್‌ ಬಗ್ಗೆ ಅನುಷ್ಕಾ ಅಸಮಾಧಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News