ಒಂದು ಕೋಟಿ ಗಳಿಕೆ, ಊಟ-ತಿಂಡಿ-ವಾಸ್ತವ್ಯ ಉಚಿತ, ಅಷ್ಟಕ್ಕೂ ಈ ಸುಂದರಿ ಮಾಡುವ ಕೆಲಸ ಏನು ಗೊತ್ತಾ?
Viral News: ಈ ಸುಂದರ ಮಹಿಳೆಯ ಗಳಿಕೆ ಕೇಳಿ ಪುರುಷರು ಹೌಹಾರಿದ್ದಾರೆ. ಇದಕ್ಕೆ ಕಾರಣ ಎಂದರೆ, ಪುರುಷ ಪ್ರಧಾನ ವೃತ್ತಿಯಂತಹ ಸ್ಟೀರಿಯೊಟೈಪ್ಗಳನ್ನು ನುಚ್ಚುನೂರು ಮಾಡಿ, ಆಶ್ಲೇ ಇತರ ಹುಡುಗಿಯರಿಗೆ ಮಾದರಿಯಾಗುವಂತಹ ತನ್ನ ಕೆಲಸದ ಬಗ್ಗೆ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಿದ್ದಾರೆ.
ಆಸ್ಟ್ರೇಲಿಯ: ಜೀವನದಲ್ಲಿ ಉದ್ಯೋಗ ತೃಪ್ತಿ ಹೊಂದುವುದು ತುಂಬಾ ಮುಖ್ಯ. ಆದರೆ, ಎಲ್ಲರಿಗೂ ಅವರವರ ಆಯ್ಕೆಯ ಕೆಲಸ ಸಿಗುವುದಿಲ್ಲ ಎಂಬುದು ಬೇರೆ ಮಾತು. ಕೆಲವರಿಗೆ ಒಳ್ಳೆಯ ಕೆಲಸ ಸಿಕ್ಕರೆ ಒಳ್ಳೆಯ ವೇತನ ಸಿಗುವುದಿಲ್ಲ. ಆದರೆ ಜಗತ್ತಿನಲ್ಲಿ ಕೆಲವರು ತಮ್ಮ ಕೆಲಸ ಮತ್ತು ವೇತನ ಎರಡರಲ್ಲೂ ಸಂತೋಷವಾಗಿರುತ್ತಾರೆ. ಅಂತಹವರಲ್ಲಿ ಆಸ್ಟ್ರೇಲಿಯಾದ ನಿವಾಸಿ (Viral News In Kannada) ಆಶ್ಲೇ ಕೂಡ ಒಬ್ಬಳು, ಆಶ್ಲೇ ವರ್ಷದಲ್ಲಿ 6 ತಿಂಗಳು ಕೆಲಸ ಮಾಡುತ್ತಾರೆ ಮತ್ತು ಉಳಿದ 6 ತಿಂಗಳು ವಿಶ್ರಾಂತಿ ಪಡೆಯುತ್ತಾಳೆ. ಒಟ್ಟಾರೆಯಾಗಿ, ಇಂಸೆಂಟಿವ್ ಅನ್ವಯಿಸುವ ಮೂಲಕ, ಮೇಡಂನ CTC ಸುಮಾರು ಒಂದು ಕೋಟಿ ತಲುಪುತ್ತದೆ, ಆದರೂ ಇಂದಿಗೂ ಕೂಡ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವಂತಹ ದೇಶಗಳು ಇಂತಹ ವೃತ್ತಿ ಮತ್ತು ಉದ್ಯೋಗಗಳಿಂದ ದೂರ ಉಳಿದಿವೆ,
ಇದನ್ನೂ ಓದಿ-ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಮೂರ್ತಿಯಾದ ಯುವತಿ! ವಿಡಿಯೋ ನೋಡಿ..
ಹ್ಯಾಂಡ್ಸಮ್ ವೇತನ ಮತ್ತು ಮರ್ಚಂಟ್ ನೆವಿ ಕೆಲಸ
ಆಸ್ಟ್ರೇಲಿಯಾ ಮೂಲದ ಈ ಸುಂದರ ಟ್ರಕ್ ಡ್ರೈವರ್ ಆಶ್ಲೇ ಪ್ರತಿ ವರ್ಷ ಸುಮಾರು ಒಂದು ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಆಕೆಯ ವಾಸ್ತವ್ಯ, ಆಹಾರ ಮತ್ತು ಪ್ರಯಾಣ ಎಲ್ಲವೂ ಉಚಿತ ಮತ್ತು ಆಕೆ ಮರ್ಚಂಟ್ ನೆವಿ ಕೆಲಸದ ನಿಯಮಗಳ ಪ್ರಕಾರ ವರ್ಷದಲ್ಲಿ ಆರು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಸ್ವತಃ ಆಶ್ಲೇ ತನ್ನ ಕಥೆಯನ್ನು ಪ್ರಪಂಚದ ಮುಂದೆ ಹಂಚಿಕೊಂಡಿದ್ದಾಳೆ. ಹೀಗಾಗಿ ಜನರು ಆಕೆಯ ಕೆಲಸದ ಬಗ್ಗೆ ತಿಳಿದಿದ್ದಾರೆ. ಆಶ್ಲೇ ಗಣಿಗಾರಿಕೆ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದಾಳೆ. ವೇತನದ ಜೊತೆಗೆ ಭತ್ಯೆಗಳ ಹೊರತಾಗಿ ಪ್ರತಿ ತಿಂಗಳು ಬಂಪರ್ ಬೋನಸ್ ಕೂಡ ಆಕೆ ಪಡೆಯುತ್ತಾಳೆ. ಒಟ್ಟಾರೆಯಾಗಿ ಅವಳು ವೃತ್ತಿಪರ ನುರಿತ ಕೆಲಸಗಾರನ ಟ್ಯಾಗ್‌ನೊಂದಿಗೆ ತನ್ನದೇ ಆದ ನಿಯಮಗಳಲ್ಲಿ ಕೆಲಸ ಮಾಡುತ್ತಾಳೆ.
ಇದನ್ನೂ ಓದಿ-ಅಯ್ಯೋ ದೇವರೇ! ವಿವಾಹಕ್ಕೂ ಮುನ್ನ ಅಲ್ಲಿನ ಯುವಕರು ತಮ್ಮ ಗಂಡಸ್ತನ ಸಾಬೀತುಪಡಿಸಬೇಕಂತೆ! ಪರೀಕ್ಷೆ ಏನು ಗೊತ್ತಾ?
ಆಶ್ಲೇ ಸಾಮಾಜಿಕ ಮಾಧ್ಯಮದಲ್ಲಿ ಸೂಪರ್ ಹಿಟ್ ಆಗಿದ್ದಾಳೆ
ವರದಿಗಳ ಪ್ರಕಾರ, ಬ್ಯೂಟಿಫುಲ್ ಆಶ್ಲೇ ಟಿಕ್‌ಟಾಕ್‌ನಲ್ಲಿಯೂ ಕೂಡ ಸಾಕಷ್ಟು ಸಕ್ರೀಯಳಾಗಿದ್ದಾಳೆ. ಆಕೆಗೆ ಸಾವಿರಾರು ಹಿಂಬಾಲಕರಿದ್ದಾರೆ. ಅನೇಕ ಬಾರಿ ಆಕೆ ರಸ್ತೆಯ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾಳೆ. ಯಾವುದೇ ರೀತಿಯಲ್ಲಿ ತೋರ್ಪಡಿಸಿಕೊಳ್ಳದ ‘ನಿಜವಾದ ಹುಡುಗಿ’ ಎನ್ನುತ್ತಾಳೆ. ಆದರೂ ಇನ್ನೂ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಟ್ರಕ್ ಡ್ರೈವರ್ ವೃತ್ತಿಯು ಆಕೆಗೆ ಸರಿಹೊಂದುವುದಿಲ್ಲ ಎಂದು ಅವರು ಹೇಳುತ್ತಾಳೆ, ಆದರೆ, ಆಕೆ ಇಂತಹ ವಿಷಯಗಳಿಂದ ತಲೆಕೆಡಿಸಿಕೊಳ್ಳುವ ಬದಲು, ಅವುಗಳನ್ನು ನಿರ್ಲಕ್ಷಿಸುತ್ತಾಳೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.