ಅಯ್ಯೋ ದೇವರೇ! ವಿವಾಹಕ್ಕೂ ಮುನ್ನ ಅಲ್ಲಿನ ಯುವಕರು ತಮ್ಮ ಗಂಡಸ್ತನ ಸಾಬೀತುಪಡಿಸಬೇಕಂತೆ! ಪರೀಕ್ಷೆ ಏನು ಗೊತ್ತಾ?

Viral News In Kannada: ಸೌತ್ ಅಮೇರಿಕಾದಲ್ಲಿ ಒಂದು ಬುಡಕಟ್ಟು ಜನಾಂಗವಿದೆ. ಈ ಜನಾಂಗದಲ್ಲಿ ಮದುವೆಗೂ ಮುನ್ನ ವಿವಾಹ ಬಂಧನಕ್ಕೆ ಒಳಗಾಗಬೇಕಾಗಿರುವ ಯುವಕನ ಗಂಡಸ್ತನದ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಆತನಿಗೆ 120 ವೋಲ್ಟ್ ಶಾಕ್ ಕೊಡಲಾಗುತ್ತದೆ. ಒಂದು ವೇಳೆ ಯುವಕ ಅದನ್ನು ತಡೆದುಕೊಂಡರೆ, ಆತನನ್ನು ನಿಜವಾದ ಗಂಡಸು ಎಂದು ಭಾವಿಸಲಾಗುತ್ತದೆ.  

Written by - Nitin Tabib | Last Updated : Jul 19, 2023, 07:54 PM IST
  • ಗಂಡಸ್ತನದ ಈ ಆಟದಲ್ಲಿ ಯುವಕನಿಗೆ ಶಾಕ್ ಕೊಡುವ ಮೊದಲು ಆತನಿಗೆ ಮದ್ಯಪಾನ ಮಾಡಿಸಲಾಗುತ್ತದೆ.
  • ಅಷ್ಟೇ ಅಲ್ಲ ಈ ಸಂಪ್ರದಾಯ ಆ ಬುಡಕಟ್ಟು ಜನಾಂಗದ ಅತಿ ದೊಡ್ಡ ಸಂಪ್ರದಾಯ ಎಂದು ಭಾವಿಸಲಾಗಿದೆ.
  • ವಧುವಿನ ಕಡೆಯವರಿಂದ ಈ ಸಂಪ್ರದಾಯ ನಡೆಸಲಾಗುತ್ತದೆ.
ಅಯ್ಯೋ ದೇವರೇ! ವಿವಾಹಕ್ಕೂ ಮುನ್ನ ಅಲ್ಲಿನ ಯುವಕರು ತಮ್ಮ ಗಂಡಸ್ತನ ಸಾಬೀತುಪಡಿಸಬೇಕಂತೆ! ಪರೀಕ್ಷೆ ಏನು ಗೊತ್ತಾ? title=

ಅಮೆರಿಕಾ: ಸಾಮಾನ್ಯವಾಗಿ ಮದುವೆಯ ಸಂದರ್ಭದಲ್ಲಿ ಪತಿ ತನ್ನ ಪತ್ನಿಗಾಗಿ ಉಡುಗೊರೆಯನ್ನು ತರುತ್ತಾನೆ. ಅದು ಪತ್ನಿಯಲ್ಲಿ ಆತನ ಖುಷಿಯ ಭಾವನೆ ತರಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿರುತ್ತದೆ. ಆದರೆ, ಮದುವೆಗೂ ಮುನ್ನ ಯಾವುದೇ ಓರ್ವ ಯುವಕನಿಗೆ ತನ್ನ ಗಂಡಸ್ತನದ ಪರೀಕ್ಷೆ ಕೊಡಬೇಕಾಗುತ್ತದೆ ಎಂಬುದನ್ನು ಎಲ್ಲಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ? ಕೇಳಲು ವಿಷಯ ಸ್ವಲ್ಪ ವಿಚಿತ್ರವಾಗಿದ್ದರೂ ಕೂಡ ಇದು ನಿಜವಾಗಿದೆ. ಸೌತ್ ಅಮೇರಿಕಾದಲ್ಲಿ ಒಂದು ಬುಡಕಟ್ಟು ಜನಾಂಗ ವಾಸಿಸುತ್ತದೆ. ಈ ಬುಡಕಟ್ಟು ಜನರಲ್ಲಿ ಅನಾದಿ ಕಾಲದಿಂದ ಒಂದು ಸಂಪ್ರದಾಯ ನಡೆದುಕೊಂಡು ಬಂದಿದೆ (Viral News In Kannada). ಈ ಸಂಪ್ರದಾಯವನ್ನು ಆ ಜನಾಂಗದಲ್ಲಿರುವ ಪ್ರತಿಯೊಬ್ಬರು ಚಾಚುತಪ್ಪದೆ ಪಾಲಿಸುತ್ತಾರಂತೆ. ಈ ವಿಚಿತ್ರ ಪರಂಪರೆ ಎಂದು ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ಓದಿ-ಮದ್ಯಕ್ಕಿಂತಲೂ ಹೆಚ್ಚು ಕಿಕ್ಕ್ ಕೊಡುತ್ತೇ ಈ ಕೆಂಪು ಜೇನು, ವಿಶ್ವಾದ್ಯಂತ ಇದಕ್ಕಿದೆ ಭಾರಿ ಡಿಮ್ಯಾಂಡ್, ಕೇವಲ ಇಲ್ಲಿ ಮಾತ್ರ ಸಿಗುತ್ತೆ!

ವಾಸ್ತವದಲ್ಲಿ ಸೌತ್ ಅಮೇರಿಕಾದಲ್ಲಿ ವಾಸಿಸುವ ಈ ಬುಡಕಟ್ಟು ಜನಾಂಗದಲ್ಲಿ ಮದುವೆಯಾಗ ಬಯಸುವ ಪುರುಷ ಮದುವೆಗೂ ಮುನ್ನ ತನ್ನ ಗಂಡಸ್ತನದ ಪರೀಕ್ಷೆ ನೀಡಬೇಕು. ಇದಕ್ಕಾಗಿ ಆತ 120 ವೋಲ್ಟ್  ವಿದ್ಯುತ್ ಶಾಕ್ ತಗುಲಿಸಿಕೊಳ್ಳಬೇಕು ಮತ್ತು ಅದನ್ನು ಸಹಿಸಿಕೊಳ್ಳಬೇಕು. ಇದಕ್ಕಾಗಿ ಯುವಕನ ಕೈಯಲ್ಲಿ ಲೋಹದ ಎರಡು ರಾಡ್ ಗಳನ್ನು ಕೊಡಲಾಗುತ್ತದೆ(Weird Marriage Ritual). ಅವುಗಳನ್ನು ಆತ ಎರಡೂ ಕೈಗಳಲ್ಲಿ ಹಿಡಿದುಕೊಳ್ಳಬೇಕು. ಬಳಿಕ ಆ ರಾಡ್ ಗಳಲ್ಲಿ ವಿದ್ಯುತ್ ಅನ್ನು ಹಾರಿಬಿಡಲಾಗುತ್ತದೆ. ಒಂದು ವೇಳೆ ಆ ಯುವಕ ಆ ಶಾಕ್ ತಡೆದುಕೊಂಡರೆ ಆತನನ್ನು ಅಸಲಿ ಗಂಡಸು ಎಂದು ಭಾವಿಸಲಾಗುತ್ತದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ಯುವಕ ಫೇಲಾದರೆ ಆತ ಗಂಡಸು ಅಲ್ಲ ಎಂದು ಭಾವಿಸಲಾಗುತ್ತದೆ. ಅಷ್ಟೇ ಯಾಕೆ ಬುಡಕಟ್ಟು ಜನಾಂಗದ ಯಾವುದೇ ಯುವತಿ ಆತನನ್ನು ವಿವಾಹ ಮಾಡಿಕೊಳ್ಳುವುದಿಲ್ಲ.

ಇದನ್ನೂ ಓದಿ-ಹುಡುಗಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ 'ಆಟಾ-ಸಾಟಾ' ವಿವಾಹದ ಬಗ್ಗೆ ನಿಮಗೆ ತಿಳಿದಿದೆಯಾ?

ಇದಕ್ಕೂ ಮೊದಲು ಆತನಿಗೆ ಮದ್ಯಪಾನ ಮಾಡಿಸಲಾಗುತ್ತದೆ
ಗಂಡಸ್ತನದ ಈ ಆಟದಲ್ಲಿ ಯುವಕನಿಗೆ ಶಾಕ್ ಕೊಡುವ ಮೊದಲು ಆತನಿಗೆ ಮದ್ಯಪಾನ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲ ಈ ಸಂಪ್ರದಾಯ ಆ ಬುಡಕಟ್ಟು ಜನಾಂಗದ ಅತಿ ದೊಡ್ಡ ಸಂಪ್ರದಾಯ ಎಂದು ಭಾವಿಸಲಾಗಿದೆ. ವಧುವಿನ ಕಡೆಯವರಿಂದ ಈ ಸಂಪ್ರದಾಯ ನಡೆಸಲಾಗುತ್ತದೆ. ಯಾವುದೇ ಓರ್ವ ಯುವಕ ಯುವತಿಯೊರ್ವಳಿಗೆ ಮದುವೆಗಾಗಿ ಬೇಡಿಕೆ ಅಥವಾ ಪ್ರಸ್ತಾವನೆ ಸಲ್ಲಿಸುತ್ತಾನೋ, ಆಗ ಯುವತಿ ಆತನಿಗೆ ಈ ಪರೀಕ್ಷೆಗೆ ಆನಿಯಾಗುವಂತೆ ಹೇಳುತ್ತಾಳಂತೆ. ಅದಾದ ಬಳಿಕವೇ ಆಕೆ ಆತನಿಗೆ ಒಪ್ಪಿಗೆ ಸೂಚಿಸುತ್ತಾಳೆ. ಈಗ ಗೊತ್ತಾಯ್ತಾ ಸ್ವಾಮಿ... ಅಲ್ಲಿನ ಈ ಸಂಪ್ರದಾಯದಲ್ಲಿ ಏಕೆ ಭಾವನೆಗಳ ಆಧಾರದ ಮೇಲೆ ಸಂಬಂಧ ಬೆಳೆಸಲಾಗುವುದಿಲ್ಲ ಮತ್ತು ಎಲೆಕ್ಟ್ರಿಕ್ ಶಾಕ್ ಆಧಾರದ ಮೇಲೆ ಸಂಬಂಧ ಬೆಳೆಸಲಾಗುತ್ತದೆ ಅಂತಾ... 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News