Viral Video : ಮೆಕ್ಸಿಕೋದ ಗುಹೆಯೊಂದರಿಂದ ಬಾವಲಿಗಳ ಹಿಂಡು ಹಾರುತ್ತಿರುವ ವಿಡಿಯೋವೊಂದು  ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಾಗಿನಿಂದ  6 ಮಿಲಿಯನ್ ನಷ್ಟು ಜನ ಈ ವೀಡಿಯೊವನ್ನು ವೀಕ್ಷಿಸಿದ್ದಾರೆ.  ವೈರಲ್ ಆಗುತ್ತಿರುವ ವೀಡಿಯೊವನ್ನು ಕಾರಿನ ಒಳಗಿನಿಂದ ರೆಕಾರ್ಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಲೆಕ್ಕವಿಲ್ಲದಷ್ಟು ಬಾವಲಿಗಳು ಹಾರುತ್ತಿರುವುದನ್ನು ಕಾಣಬಹುದು. 


COMMERCIAL BREAK
SCROLL TO CONTINUE READING

ಬಾವಲಿಗಳ ಗುಂಪು ಒಂದು ದಿಕ್ಕಿನಲ್ಲಿ ಹಾರುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಏಕಕಾಲದಲ್ಲಿ ಕಪ್ಪು ಹೊಗೆಯಂತೆ ಆಕಾಶದೆಡೆಗೆ ಬಾವಲಿಗಳು ಹಾರುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ವನ್ನು ಅಪ್‌ಲೋಡ್ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. 


ಇದನ್ನೂ ಓದಿ : Viral Video: ಬಿಯರ್ ಕುಡಿದ ಹುಂಜ, ನಶೆಯಲ್ಲಿ ಮಾಡಿದ್ದೇನು ನೋಡಿ..


 


ಈ ವಿಡಿಯೋ ಬಗ್ಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಬ್ಯಾಟ್ಮ್ಯಾನ್ ಈ ಬಾವಲಿಗಳನ್ನು ತನ್ನತ್ತ ಕರೆಯುತ್ತಿದ್ದಾನೆ ಎಂದು ಬರೆದರೆ ಮತ್ತೊಬ್ಬರು, ಬಾವಲಿಗಳು ನಮ್ಮ ಗ್ರಹಕ್ಕೆ ಬಹಳ ಮುಖ್ಯ ಎಂದಿದ್ದಾರೆ.  ಇದೇ ವೇಳೆ,  ಇನ್ನೊಬ್ಬ ಬಳಕೆದಾರರು ಪ್ರಕೃತಿಯ ಅದ್ಭುತ ಘಟನೆ ಎಂದು  ವರ್ಣಿಸಿದ್ದಾರೆ.  


ಒಟ್ಟಿನಲ್ಲಿ ಈ ನೋಟ ಮಾತ್ರ ಅದ್ಬುತವಾಗಿತ್ತು. 


ಇದನ್ನೂ ಓದಿ :  Viral: ಮಗು ರಕ್ಷಿಸಲು ಹಾವಿನೊಂದಿಗೆ ಇಲಿಯ ಕಾದಾಟ.. ಗೆದ್ದವರು ಯಾರು ನೋಡಿ?


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...