King Cobra And Tiger Viral Video: ಕಾಡಿನ ಭಯಾನಕ ಪ್ರಾಣಿಗಳು ಎಂದೊಡನೆ ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳ ಹೆಸರುಗಳು ಮೊದಲು ನೆನಪಾಗುತ್ತೆ. ಅವುಗಳಲ್ಲಿ ಕಾಡಿನಲ್ಲಿ ಎಲ್ಲಾ ಪ್ರಾಣಿಗಳನ್ನು ಸಹ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಕಾಡಿನ ರಾಜ ಎಂತಲೇ ಕರೆಯಲ್ಪಡುವ 'ಹುಲಿ' ಯಾರಿಗಾದರೂ ಹೆದರುವುದನ್ನು ನೀವು ನೋಡಿದ್ದೀರಾ? ಇದೀಗ ಅಂತಹುದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಹೌದು, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹುಲಿಯ ವಿಡಿಯೋ ವೈರಲಾಗುತ್ತಿದ್ದು (Tiger Viral Video), ಇದರಲ್ಲಿ ರಾಜನಂತೆ ಗಾಂಭೀರ್ಯವಾಗಿ ನಡೆದು ಬರುತ್ತಿದ್ದ ಹುಲಿ ಮುಂದೆ ನಾಗರಹಾವು ದಾಟುತ್ತಿದ್ದನ್ನು ಕಂಡು ಕೂಡಲೇ ಹಿಂದೆ ಸರಿದು ನಿಲ್ಲುತ್ತದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ವೀಕ್ಷಿಸಿದ್ದು ಇದಕ್ಕೆ ಕುತೂಹಲಕಾರಿ ಕಾಮೆಂಟ್‌ಗಳು ಕೂಡ ಬರುತ್ತಿವೆ. 


Birds Amazing Viral Video: ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವ, ಸೆಲ್ಫಿ ತೆಗೆದುಕೊಳ್ಳುವ ಪಕ್ಷಿಗಳನ್ನು ನೋಡಿದ್ದೀರಾ... ಇಲ್ಲಿದೆ ತಮಾಷೆಯ ವಿಡಿಯೋ


ಮಹಾರಾಷ್ಟ್ರದ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿರುವ ಈ ವಿಡಿಯೋದಲ್ಲಿ, ಹುಲಿ ಮತ್ತು ನಾಗರಹಾವು (Tiger King Cobra) ಇದ್ದಕ್ಕಿದ್ದಂತೆ ಮುಖಾಮುಖಿಯಾಗಿವೆ. ವೀಡಿಯೊದ ಆರಂಭದಲ್ಲಿ, ಹುಲಿಯೊಂದು ಕೆಸರಿನ ಹಾದಿಯಲ್ಲಿ ಉಲ್ಲಾಸದಿಂದ ನಡೆದುಕೊಂಡು ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಹುಲಿ ನಾಗರಹಾವನ್ನು ನೋಡುತ್ತದೆ. ತಕ್ಷಣವೇ ನಿಧಾನವಾಗಿ ಹಿಂದೆ ಸರಿಯುತ್ತದೆ. ಏತನ್ಮಧ್ಯೆ, ನಾಗರ ಹಾವು ತನ್ನೆಡೆಗೆ ಬರುತ್ತಿರುವುದನ್ನು ಕಂಡು ಹೆದರಿದ ಹುಲಿಯ ಒಂದೊಂದೇ ಹೆಜ್ಜೆ ಹಿಂದೆ ಸಾಗುತ್ತದೆ. 


ಇದನ್ನೂ ಓದಿ- ಟ್ರಾಫಿಕ್ ಜಾಮ್ ನಡುವೆ ಸ್ಕೂಟರ್‌ನಲ್ಲಿಯೇ ಕುಳಿತು ಜೂಮ್ ಮೀಟಿಂಗ್‌ಗೆ ಹಾಜರಾದ ಮಹಿಳೆ, ವಿಡಿಯೋ ವೈರಲ್!


ಐ‌ಎಫ್‌ಎಸ್ ಅಧಿಕಾರಿ ರಮೇಶ್ ಪಾಂಡೆ @rameshpandeyifsಎಂಬುವವರು ಆಗಸ್ಟ್ 19ರಂದು ಈ ವಿಡಿಯೋವನ್ನು 'ಎಕ್ಸ್'ಖಾತೆಯಲ್ಲಿ ಹಂಚಿಕೊಂಡಿದ್ದು ಇದುವರೆಗೂ ಸುಮಾರು 50 ಸಾವಿರ ಜನರು ಇದನ್ನು ವೀಕ್ಷಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.