ಟ್ರಾಫಿಕ್ ಜಾಮ್ ನಡುವೆ ಸ್ಕೂಟರ್‌ನಲ್ಲಿಯೇ ಕುಳಿತು ಜೂಮ್ ಮೀಟಿಂಗ್‌ಗೆ ಹಾಜರಾದ ಮಹಿಳೆ, ವಿಡಿಯೋ ವೈರಲ್!

Viral Video: ಸ್ಕೂಟರ್‌ನಲ್ಲಿ ಹೋಗುವಾಗ ಟ್ರಾಫಿಕ್ ಜಾಮ್‌ನ ನಡುವೆ ಮಹಿಳೆಯೊಬ್ಬರು ಆನ್‌ಲೈನ್ ಮೀಟಿಂಗ್‌ನಲ್ಲಿ ಭಾಗವಹಿಸಿರುವ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

Written by - Yashaswini V | Last Updated : May 8, 2024, 12:29 PM IST
  • ಐಟಿ ಹಬ್ ಎಂತಲೇ ಕರೆಯಲ್ಪಡುವ ಸಿಲಿಕಾನ್ ಸಿಟಿ ಬೆಂಗಳೂರು ಸುದೀರ್ಘ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿದೆ.
  • ಬೆಂಗಳೂರಿನ ನಿತ್ಯ ಸಂಚರಿಸುವ ಜನರು ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿಯೇ ಹೆಣಗಾಡುವುದು ಹೊಸತೇನಲ್ಲ.
ಟ್ರಾಫಿಕ್ ಜಾಮ್ ನಡುವೆ ಸ್ಕೂಟರ್‌ನಲ್ಲಿಯೇ ಕುಳಿತು ಜೂಮ್ ಮೀಟಿಂಗ್‌ಗೆ ಹಾಜರಾದ ಮಹಿಳೆ, ವಿಡಿಯೋ ವೈರಲ್!  title=

Bengaluru Traffic Viral Video: ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ 'ವರ್ಕ್ ಫ್ರಮ್ ಹೋಂ' (Work From Home) ಸಂಸ್ಕೃತಿ ಹೆಚ್ಚಾಗಿದೆ. ಆದರೀಗ ಸಾಮಾಜಿಕ ಜಾಲತಾಣದಲ್ಲಿ 'ವರ್ಕ್ ಆನ್ ರೋಡ್' (Works on the road too) ಎಂಬ   ವಿಡಿಯೋ  ಎಲ್ಲರ ಗಮನ ಸೆಳೆಯುತ್ತಿದೆ. 

ಹೌದು, ಐಟಿ ಹಬ್ ಎಂತಲೇ ಕರೆಯಲ್ಪಡುವ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸುದೀರ್ಘ ಟ್ರಾಫಿಕ್ ಜಾಮ್‌ಗೆ (Traffic Jam) ಹೆಸರುವಾಸಿಯಾಗಿದೆ. ಬೆಂಗಳೂರಿನ ನಿತ್ಯ ಸಂಚರಿಸುವ ಜನರು ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿಯೇ ಹೆಣಗಾಡುವುದು ಹೊಸತೇನಲ್ಲ. ಆದರಿಲ್ಲಿ, ಬೆಂಗಳೂರು ಟ್ರಾಫಿಕ್ ನಡುವೆ ಸ್ಕೂಟರ್‌ನಲ್ಲಿಯೇ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಮೀಟಿಂಗ್‌ಗೆ ಹಾಜರಾಗಿದ್ದಾರೆ. 

ಇದನ್ನೂ ಓದಿ- ಬಂಡೀಪುರ ಸಫಾರಿಯಲ್ಲಿ ಗಾಯಗೊಂಡ ವ್ಯಾಘ್ರಗಳ ದರ್ಶನ

ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ಈ ವಿಡಿಯೋದಲ್ಲಿ ದೀರ್ಘ ಟ್ರಾಫಿಕ್ ನಡುವೆ ದ್ವಿಚಕ್ರ ವಾಹನದಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿರುವ ಮಹಿಳೆ ಆನ್‌ಲೈನ್‌ನಲ್ಲಿ ಮೀಟಿಂಗ್‌ಗೆ (Online Meeting) ಹಾಜರಾಗಿರುವುದನ್ನು ಕಾಣಬಹುದು.  

ಇದನ್ನೂ ಓದಿ- Viral Video: ಮಾವುತನನ್ನು ತುಳಿದು ಸಾಯಿಸಿದ ಆನೆ, ಸಿಸಿಟಿವಿಯಲ್ಲಿ ಸೆರೆಯಾಗಿ ಭಯಾನಕ ದೃಶ್ಯ!

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಸ್ಕೂಟರ್‌ನಲ್ಲಿ ಕುಳಿತು ಕಾರ್ಯನಿರತವಾಗಿರುವ  ಮಹಿಳೆಯ ವೀಡಿಯೊವನ್ನು ತಮಿಳಿನಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದರಲ್ಲಿ "ರಸ್ತೆಯಲ್ಲೂ ಕೆಲಸ ಮಾಡಿ. ಇನ್ನೇನು ಮಾಡೋಕಾಗುತ್ತೆ?" ಎಂದು ಬರೆಯಲಾಗಿದೆ. 

ಈ ವಿಡಿಯೋದ ಮೇಲ್ಭಾಗದಲ್ಲಿ "ಬೆಂಗಳೂರಿನಲ್ಲಿ ಸಾಮಾನ್ಯ ದಿನಗಳಲ್ಲಿ ಟ್ರಾಫಿಕ್‌ನಲ್ಲೂ ಕೆಲಸ ಮಾಡಿ" (Work Amid Traffic Jam) ಎಂಬ ಪಠ್ಯವನ್ನು ಸೇರಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News