ಸಣ್ಣದೊಂದು ದೊಡ್ಡ ಶಬ್ದವು ನಮ್ಮಲ್ಲಿ ಹೆಚ್ಚಿನವರನ್ನು ಬೆಚ್ಚಿಬೀಳಿಸುತ್ತದೆ. ಆದರೆ ಕೆಲವು ಜನರು ಉಕ್ಕಿನ ಮನುಷ್ಯರಂತೆ ನಿಂತಿರುತ್ತಾರೆ. ಅವರು ಯಾವುದೇ ರೀತಿಯ ದೊಡ್ಡ ಶಬ್ದಗಳಿಗೆ ಭಯಬೀಳುವುದಿಲ್ಲ. ಅಂತಹದ್ದೇ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಕೆಜಿಎಫ್‌ನ ರಾಕಿಭಾಯ್‌ಗೆ ಹೋಲಿಕೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಉಕ್ರೇನ್‌ನ ಸೈನಿಕನೊಬ್ಬ ತೆರೆದ ಮೈದಾನದಲ್ಲಿ ಮುಂದೆ ಸಾಗುತ್ತಾ, ಕ್ಯಾಮೆರಾಗೆ ಫೋಸ್‌ ಕೊಡುತ್ತಿದ್ದಾನೆ. ಆದರೆ ಇದರಲ್ಲಿ ವಿಶೇಷ ಏನೆಂದರೆ, ಸೈನಿಕ ಚಿಪ್ಸ್‌ ತಿನ್ನುತ್ತಾ ಮುಂದೆ ನಡೆದುಕೊಂಡು ಬರುತ್ತಿದ್ದರೆ, ಆತನ ಹಿಂದೆ ಕ್ಷಿಪಣಿಯ ಬೆಂಕಿಯುಂಡೆಗಳು ಸಿಡಿಯುತ್ತಿರುತ್ತದೆ.  ಕೆಲವೇ ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.


ಇದನ್ನು ಓದಿ: ಇನ್ನೂ ಮೂರೇ ವರ್ಷ ಬದುಕುತ್ತಾರಾ ರಷ್ಯಾ ಅಧ್ಯಕ್ಷ ಪುಟೀನ್? ಶಾಕಿಂಗ್ ವಿವರ ನೀಡಿದ ಗುಪ್ತಚರ ಅಧಿಕಾರಿ..!


ಸೈನಿಕನು ಸಂತೋಷದಿಂದ ಚಿಪ್ಸ್ ತಿನ್ನುತ್ತಾ ನಡೆದುಕೊಂಡು ಬರುತ್ತಿದ್ದು, ಹಿಂದೆ ಕ್ಷಿಪಣಿಗಳನ್ನು ಹಾರಿ ಬಿಡಲಾಗುತ್ತಿರುವ ದೃಶ್ಯ ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಸೈನಿಕ ಚಿಪ್ಸ್ ತಿನ್ನುತ್ತಿರುವುದನ್ನು ಕಾಣಬಹುದು. 


ಸೈನಿಕನ ನಡತೆಯ ಶೈಲಿ ಹೀರೋಗಳಿಗೇನು ಕಡಿಮೆಯಿಲ್ಲ. ತನ್ನ ಮಿಲಿಟರಿ ಸಮವಸ್ತ್ರವನ್ನು ಧರಿಸಿ, ಸೈನಿಕನು ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾ, ಚಿಪ್ಸ್‌ ತಿನ್ನುತ್ತಾ ಬರುತ್ತಿದ್ದಾನೆ. ಅವನ ಹಿಂದೆ ಒಂದರ ಹಿಂದೆ ಒಂದರಂತೆ ಕ್ಷಿಪಣಿಗಳನ್ನು ಹಾರಿಸಲಾಗುತ್ತಿದೆ. 


ಕೈವ್ ಇಂಡಿಪೆಂಡೆಂಟ್‌ನ ರಕ್ಷಣಾ ವರದಿಗಾರರಾದ ಇಲ್ಯಾ ಪೊನೊಮರೆಂಕೊ ಅವರು ಟ್ವಿಟ್ಟರ್‌ನಲ್ಲಿ 'ಶೂಟ್ ಆಡ್ ಚಿಪ್ಸ್' ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.


ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಟ್ವಿಟರ್‌ಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗಿನಿಂದ 50,000 ವೀಕ್ಷಣೆಗಳನ್ನು ಗಳಿಸಿದೆ. ಅಷ್ಟೇ ಅಲ್ಲದೆ ಈ ವೀಡಿಯೊಗೆ 1,400 ಲೈಕ್‌ಗಳು ಮತ್ತು ನೂರಾರು ರೀಟ್ವೀಟ್‌ಗಳು ಆಗಿವೆ. 


ಇದನ್ನು ಓದಿ: ಜಗತ್ರ್ಪಸಿದ್ದ ಮೋನಾಲಿಸಾ ಚಿತ್ರವನ್ನು ವಿರೂಪಗೊಳಿಸಿದ ಭೂಪ...! ಮ್ಯೂಸಿಯಂನಲ್ಲಿ ಆಗಿದ್ದೇನು


ಇನ್ನು ಈ ವಿಡಿಯೋಗೆ ಅನೇಕರು ಕಮೆಂಟ್‌ಗಳನ್ನು ಮಾಡಿದ್ದು, ಈ ರೀತಿ ಬರೆದುಕೊಂಡಿದ್ದಾರೆ. ಒಬ್ಬ ವ್ಯಕ್ತಿ 'ಪರಿಸ್ಥಿತಿ ದುಃಖಕರವಾಗಿರದಿದ್ದರೆ, ಈ ವಿಡಿಯೋ ತುಂಬಾ ಹಾಸ್ಯಮಯವಾಗಿರುತ್ತಿತ್ತು' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು 'ಚಿಪ್ಸ್ ಇರುವವರೆಗೂ ಜಗತ್ತಿನಲ್ಲಿ ಯಾರೂ ಕಾಳಜಿ ವಹಿಸುವುದಿಲ್ಲ! ತಿನ್ನಿರಿ! ನನಗೆ ಈ ವಿಡಿಯೋ ಇಷ್ಟವಾಯಿತು' ಎಂದು ಹೇಳಿದ್ದಾರೆ. ಮತ್ತಿಬ್ಬರು 'ಸಂಪೂರ್ಣವಾಗಿ ರಾಕಿ ಭಾಯಿ ಶೈಲಿ' ಎಂದು ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.