Sewage water beer : ಚರಂಡಿ ನೀರಿನಿಂದ ಬಿಯರ್ ತಯಾರಿ..! ಕುಡಿದವರಿಗೂ ಬಂತಂತೆ ಭಾರೀ ಮಜಾ ..!

Sewage water beer :  ಸಿಂಗಾಪುರದಲ್ಲಿ ಡ್ರೈನ್ ವಾಟರ್ ರಿಫೈನ್ ಮಾಡಿ ಬಿಯರ್ ತಯಾರಿಸಿರುವ ಶಾಕಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಕೊಳಚೆ ನೀರು ಮತ್ತು ಮೂತ್ರವನ್ನು ರಿಸೈಕಲ್ ಮಾಡಿ ಬಿಯರ್ ಪಾನೀಯಗಳನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Written by - Ranjitha R K | Last Updated : May 30, 2022, 09:10 AM IST
  • ಮದುವೆ ಮತ್ತು ಪಾರ್ಟಿಯಲ್ಲಿ ಡ್ರಿಂಕ್ಸ್ ಮಾಡಲು ಇಷ್ಟಪಡುವ ಅನೇಕ ಮಂದಿ ಇದ್ದಾರೆ.
  • ಕೆಲವರಿಗೆ ಡ್ರಿಂಕ್ಸ್ ಇಲ್ಲ ಎಂದಾದರೆ ಪಾರ್ಟಿ ಪರಿಪೂರ್ಣವಾಗುವುದೇ ಇಲ್ಲ.
  • ಡ್ರೈನ್ ವಾಟರ್ ರಿಫೈನ್ ಮಾಡಿ ಬಿಯರ್ ತಯಾರಿಸಿರುವ ಆಘಾತಕಾರಿ ಪ್ರಕರಣ
Sewage water beer : ಚರಂಡಿ ನೀರಿನಿಂದ ಬಿಯರ್ ತಯಾರಿ..! ಕುಡಿದವರಿಗೂ ಬಂತಂತೆ ಭಾರೀ ಮಜಾ ..! title=
Sewage water beer (file photo)

ನವದೆಹಲಿ : Sewage water beer :  ಮದುವೆ ಮತ್ತು ಪಾರ್ಟಿಯಲ್ಲಿ ಡ್ರಿಂಕ್ಸ್ ಮಾಡಲು ಇಷ್ಟಪಡುವ ಅನೇಕ ಮಂದಿ ಇದ್ದಾರೆ. ಇನ್ನು ಕೆಲವರಿಗೆ ಡ್ರಿಂಕ್ಸ್ ಇಲ್ಲ ಎಂದಾದರೆ ಪಾರ್ಟಿ ಪರಿಪೂರ್ಣವಾಗುವುದೇ ಇಲ್ಲ.  ಜನರು ತಮ್ಮ ನೆಚ್ಚಿನ ಬ್ರಾಂಡ್ ನ ಮದ್ಯಗಳನ್ನು ಸೇವಿಸುತ್ತಾರೆ. ಇನ್ನು ಕೆಲವೊಮ್ಮೆ ಹೊಸ ಹೊಸ್ ಬ್ರಾಂಡ್ ಗಳನ್ನೂ ಟ್ರೈ ಮಾಡುತ್ತಿರುತ್ತಾರೆ.  ಜನರ ಬೇಡಿಕೆಗೆ ಅನುಗುಣವಾಗಿ  ಮಾರುಕಟ್ಟೆಗೆ ಹೊಸ ಹೊಸ ಬ್ರಾಂಡ್ ಗಳ ಉತ್ಪನ್ನಗಳು ಕೂಡಾ ಲಗ್ಗೆ ಇಡುತ್ತಿವೆ. ಆದರೆ ಆ ಉತ್ಪನ್ನಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂದು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. 

ಸಿಂಗಾಪುರದಲ್ಲಿ ಡ್ರೈನ್ ವಾಟರ್ ರಿಫೈನ್ ಮಾಡಿ ಬಿಯರ್ ತಯಾರಿಸಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಕೊಳಚೆ ನೀರು ಮತ್ತು ಮೂತ್ರವನ್ನು ರಿಸೈಕಲ್  ಮಾಡಿ ಬಿಯರ್ ಪಾನೀಯಗಳನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Slapping Game: ವಿಚಿತ್ರ ಆಟಕ್ಕಿಳಿದ ಹುಡುಗಿಯರಿಂದ ಪರಸ್ಪರರ ಕೆನ್ನೆಗೆ ಕಪಾಳಮೋಕ್ಷ, ಇದೆಂಥಾ ಆಟ?

ಈ ವಸ್ತುಗಳಿಂದ ಬಿಯರ್ ತಯಾರಿಸಲಾಗುತ್ತದೆ :
NEWBrew ಹೆಸರಿನ ಬಿಯರ್ ಬ್ರಾಂಡ್ ಅನ್ನು 'NeWater' ಬಳಸಿ ತಯಾರಿಸಲಾಗುತ್ತದೆ. ಇದು ಸಿಂಗಾಪುರದ ಶುದ್ಧ ಮತ್ತು ಉತ್ತಮ ಗುಣಮಟ್ಟದ ರಿಸೈಕಲ್ ಮಾಡಿದ ನೀರಿನ ಬ್ರ್ಯಾಂಡ್ ಎನ್ನಲಾಗಿದೆ. ವರದಿಯ ಪ್ರಕಾರ, ಇದನ್ನು ಕೊಳಚೆಯಿಂದ ರಿಸೈಕಲ್ ಮಾಡಿ ಫಿಲ್ಟರ್ ಮಾಡಿದ ದ್ರವದಿಂದ ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ. ಸ್ಥಳೀಯ ಕ್ರಾಫ್ಟ್ ಬಿಯರ್ ಬ್ರೂವರಿ ಬ್ರೂವರ್ಕ್ಜ್ ಸಹಯೋಗದೊಂದಿಗೆ ನ್ಯಾಷನಲ್ ವಾಟರ್ ಏಜೆನ್ಸಿ PUB ಪ್ರಾರಂಭಿಸಿದೆ. 

ಮೂಲಗಳ ಪ್ರಕಾರ, ಸಿಂಗಾಪುರದ ಈ ರಿಸೈಕಲ್ಡ್  ನೀರು ಕುಡಿಯಲು ಸುರಕ್ಷಿತವಾಗಿದೆ ಮಾತ್ರವಲ್ಲ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುತ್ತದೆ ಎಂದು ಕಂಪನಿ ಹೈಲೈಟ್ ಮಾಡುತ್ತಿದೆ. ಈ ಹೊಸ ಬ್ರ್ಯಾಂಡ್ ಬಿಯರ್  ಸುಟ್ಟ ಜೇನುತುಪ್ಪದ ಪರಿಮಳವನ್ನು ಹೊಂದಿದೆ. ಇದನ್ನು ಒಳಚರಂಡಿ-ರಿಸೈಕಲ್ಡ್ ನೀರಿನಿಂದ ತಯಾರಿಸಲಾಗುತ್ತದೆ ಎನ್ನಲಾಗಿದೆ. ಪ್ರೀಮಿಯಂ ಜರ್ಮನ್ ಬಾರ್ಲಿ ಮಾಲ್ಟ್‌ಗಳು, ಆರೊಮ್ಯಾಟಿಕ್ ಸಿಟ್ರಾ ಮತ್ತು ಕ್ಯಾಲಿಪ್ಸೊ ಹಾಪ್‌ಗಳಂತಹ ಅತ್ಯುತ್ತಮ ಪದಾರ್ಥಗಳನ್ನು ಬಳಸಿಕೊಂಡು ಈ ಬಿಯರ್ ಅನ್ನು ರಚಿಸಲಾಗಿದೆ. ಟ್ರಾಪಿಕಲ್ ಬ್ಲಂಡರ್ ಎಲೆ ಬಿಯರ್ 95 ಪ್ರತಿಶತ ನ್ಯೂವಾಟರ್ ನಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಈ ಪಾನೀಯವನ್ನು ಕುಡಿದ ಜನರು ರುಚಿಯನ್ನು ಇಷ್ಟಪಟ್ಟಿದ್ದಾರೆ. ಬಿಯರ್ ಅನ್ನು ಟೇಸ್ಟ್ ಮಾಡಿದ ಜನರು ತಮ್ಮ ತಮ್ಮ ವಿಚಾರ  ವಿಮರ್ಶೆಗಳನ್ನು ಕೂಡಾ ಹಂಚಿ ಕೊಂಡಿದ್ದಾರೆ. 

ಇದನ್ನೂ ಓದಿ : Parrot Video: ಟೀಗಾಗಿ ಹಿಂದಿಯಲ್ಲಿ 'ಅಮ್ಮಾ' ಎಂದು ಕರೆದ ವಿದೇಶಿ ಗಿಳಿ, ಅಮ್ಮನ ಉತ್ತರ ಕೇಳಿ ಮನಸೋತ ನೆಟ್ಟಿಗರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News