ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು.. ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!!

Whiskey Bottle Auction: ಜಗತ್ತಿನಲ್ಲಿ ಅನೇಕ ವಿಶಿಷ್ಟ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಇಂತಹದೊಂದು ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲಿಯನ್ನು ಇಲ್ಲಿ ಹರಾಜು ಮಾಡಲಾಯಿತು. ಬಾಟಲಿಯಲ್ಲಿ 311 ಲೀಟರ್ ಮದ್ಯವನ್ನು ತುಂಬಿಸಲಾಗಿತ್ತು.

Written by - Chetana Devarmani | Last Updated : May 30, 2022, 10:25 AM IST
  • ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು
  • 5 ಅಡಿ 11 ಇಂಚು ಉದ್ದದ ಈ ಬಾಟಲಿ
  • 311 ಲೀಟರ್ ವಿಸ್ಕಿಯಿಂದ ತುಂಬಿದ್ದ ಬಾಟಲಿ
ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು.. ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!! title=
ವಿಸ್ಕಿ

World largest whiskey bottle: ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು ಪ್ರಕ್ರಿಯೆ ನಡೆದಿದೆ. 5 ಅಡಿ 11 ಇಂಚು ಉದ್ದದ ಈ ಬಾಟಲಿಯು 311 ಲೀಟರ್ ವಿಸ್ಕಿಯಿಂದ ತುಂಬಿದೆ. ಈ ಬಾಟಲಿಯನ್ನು ಅಂತಿಮವಾಗಿ ಆನ್‌ಲೈನ್ ಮಾರಾಟದಲ್ಲಿ ಹರಾಜು ಮಾಡಲಾಯಿತು.

ಇದನ್ನೂ ಓದಿ: Sewage water beer : ಚರಂಡಿ ನೀರಿನಿಂದ ಬಿಯರ್ ತಯಾರಿ..! ಕುಡಿದವರಿಗೂ ಬಂತಂತೆ ಭಾರೀ ಮಜಾ ..!

ಹರಾಜು-ಸಂಘಟನಾ ಕಂಪನಿ ಲಿಯಾನ್ ಮತ್ತು ಟರ್ನ್‌ಬುಲ್ ಪ್ರಕಾರ 5 ಅಡಿ 11 ಇಂಚು ಉದ್ದ ಮತ್ತು 311 ಲೀಟರ್‌ ಸ್ಕಾಚ್ ವಿಸ್ಕಿ ಇದ್ದ ವಿಶ್ವದ ಅತಿದೊಡ್ಡ ಬಾಟಲಿ ಸುಮಾರು 1.4 ಮಿಲಿಯನ್ ಡಾಲರ್ (10,85,88,900 ರೂ.) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ಬಿಡ್ ಅನ್ನು ಆನ್‌ಲೈನ್‌ನಲ್ಲಿ ಇರಿಸಲಾಗಿತ್ತು. ಅಂತಿಮವಾಗಿ ಅಂತರಾಷ್ಟ್ರೀಯ ಅಪರಿಚಿತ ಸಂಗ್ರಾಹಕ ಅದನ್ನು ಖರೀದಿಸಿದರು.

ಈ ವಿಸ್ಕಿಗೆ ‘ದಿ ಇಂಟ್ರೆಪಿಡ್’ ಎಂದು ಹೆಸರಿಡಲಾಗಿದೆ ಎಂದು ಹರಾಜು ಕಂಪನಿ ತಿಳಿಸಿದೆ. ಇದು ಸುಮಾರು 32 ವರ್ಷಗಳಷ್ಟು ಹಳೆಯದಾದ ಸಿಂಗಲ್ ಮಾಲ್ಟ್ ಆಗಿದೆ. ಇದನ್ನು 1989 ರಲ್ಲಿ ಸ್ಪೈಸೈಡ್‌ನ ಪ್ರತಿಷ್ಠಿತ ದಿ ಮಕಲನ್‌ನಲ್ಲಿ ಭಟ್ಟಿ ಇಳಿಸಲಾಯಿತು. ಸೆಪ್ಟೆಂಬರ್ 2021 ರಲ್ಲಿ ವಿಸ್ಕಿಯನ್ನು ಭರ್ತಿ ಮಾಡಿದಾಗ ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿತು. ಈ ಬಾಟಲಿಯಲ್ಲಿ ಸುಮಾರು 444 ವಿಸ್ಕಿ ಬಾಟಲಿಗಳಿಗೆ ಸಮನಾದ ಆಲ್ಕೋಹಾಲ್ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kitchen Hacks: ಮಾಗಿದ ಬಾಳೆಹಣ್ಣುಗಳನ್ನು ತಾಜಾ ಆಗಿರಿಸಲು ಸಿಂಪಲ್ ಟಿಪ್ಸ್

ಹರಾಜು ಕಂಪನಿ ಲಿಯಾನ್ ಮತ್ತು ಟರ್ನ್‌ಬುಲ್ ಈ ವಿಸ್ಕಿ ಸೇಬಿನಷ್ಟು ಸಿಹಿಯಾಗಿದೆ ಎಂದು ಹೇಳಿದೆ. ಪ್ರಾಜೆಕ್ಟ್ ಸಂಸ್ಥಾಪಕ ಡೇನಿಯಲ್ ಮಾಂಕ್ ನನಗೆ ಮತ್ತು ಇಡೀ ತಂಡಕ್ಕೆ, 'ಇಂಟ್ರೆಪಿಡ್ ಯಾವಾಗಲೂ ಹಣಕ್ಕಿಂತ ಹೆಚ್ಚು ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News