Viral News : 17 ವರ್ಷದ ಬಾಲಕನನ್ನು ಹನುಮಂತ ಎಂದು ಪೂಜಿಸುವ ಗ್ರಾಮಸ್ಥರು! ಕಾರಣ ಗೊತ್ತಾ?
Hanuman Boy: ಹುಟ್ಟಿದಾಗಿನಿಂದ ಬರುವ ಕೆಲವು ಸಂಗತಿಗಳು ಅನೇಕ ಬಾರಿ ಜೀವನಕ್ಕೆ ಶಾಪವಾಗುತ್ತವೆ. ಆದರೆ ರತ್ಲಾಮ್‌ನ ನಂಡ್ಲೇಟಾ ಗ್ರಾಮದಲ್ಲಿ, 17 ವರ್ಷದ ಹುಡುಗನ ವಿಚಿತ್ರ ದೇಹ ರಚನೆ ಅವನನ್ನು ದೇವರನ್ನಾಗಿ ಮಾಡಿದೆ. ಈಗ ಈ 17 ವರ್ಷದ ಬಾಲಕನನ್ನು ಹನುಮಂತನಿಗೆ ಹೋಲಿಸಲಾಗಿದೆ.
Viral News : ಹುಟ್ಟಿದಾಗಿನಿಂದ ಬರುವ ಕೆಲವು ಸಂಗತಿಗಳು ಅನೇಕ ಬಾರಿ ಜೀವನಕ್ಕೆ ಶಾಪವಾಗುತ್ತವೆ. ಆದರೆ ರತ್ಲಾಮ್‌ನ ನಂಡ್ಲೇಟಾ ಗ್ರಾಮದಲ್ಲಿ, 17 ವರ್ಷದ ಹುಡುಗನ ವಿಚಿತ್ರ ದೇಹ ರಚನೆ ಅವನನ್ನು ದೇವರನ್ನಾಗಿ ಮಾಡಿದೆ. ಈಗ ಈ 17 ವರ್ಷದ ಬಾಲಕನನ್ನು ಹನುಮಂತನಿಗೆ ಹೋಲಿಸಲಾಗಿದೆ. ವಾಸ್ತವವಾಗಿ, ರತ್ಲಾಮ್‌ನ ನಂಡ್ಲೇಟಾ ಗ್ರಾಮದ 17 ವರ್ಷದ ಲಲಿತ್ ಪಾಟಿದಾರ್ ದೇಹದ ಮುಖದ ಮೇಲೆ ಹುಟ್ಟಿನಿಂದಲೇ ತನ್ನ ಕಂದು ಕೂದಲು ಬೆಳೆದಿದೆ. ಪ್ರಾರಂಭದಲ್ಲಿ ಮನೆಯವರೂ ಇದರಿಂದ ವಿಚಲಿತರಾಗಿದ್ದರು. ಇದೇ ಕಾರಣಕ್ಕೆ ಅನೇಕ ದಿನಗಳವರೆಗೆ ಮಗನನ್ನು ಹೊರಗೆ ಬಿಟ್ಟಿರಲೇ ಇಲ್ಲ. ಆದರೆ ಮಗುವಿನ ವಿದ್ಯಾಭ್ಯಾಸ, ಭವಿಷ್ಯದ ಚಿಂತೆಯಲ್ಲಿ ಪಾಲಕರು ಮಗುವನ್ನು ಶಾಲೆಗೆ ಕಳುಹಿಸಲು ಹರಸಾಹಸಪಟ್ಟರು.
ಇದನ್ನೂ ಓದಿ : ಇಂತಹ ಸ್ಟೇಜ್ ಬ್ರೇಕಿಂಗ್ ಡ್ಯಾನ್ಸ್ ಅನ್ನು ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ...
ಲಲಿತ್ ಅವರ ದೇಹ ಕೂದಲಿನಿಂದ ಆವೃತ್ಗೊಂಡಿರುವುದನ್ನು ನೋಡಿ ಆರಂಭದಲ್ಲಿ ಇತರ ಮಕ್ಕಳು ಹೆದರುತ್ತಿದ್ದರು. ಕ್ರಮೇಣ ಮಕ್ಕಳು, ಗ್ರಾಮಸ್ಥರು ಲಲಿತ್‌ಗೆ ತಮ್ಮ ಪ್ರೀತಿ, ವಾತ್ಸಲ್ಯ ನೀಡ ತೊಡಗಿದರು. ಲಲಿತ್ ಅವರ ಆತ್ಮಸ್ಥೈರ್ಯ ಮರಳಿತು. ಜಗತ್ತನ್ನು ಎದುರಿಸುವ ಧೈರ್ಯವನ್ನು ನೀಡಿತು ಮತ್ತು ಇಂದು 17 ವರ್ಷದ ಲಲಿತ್ ಸಾಮಾನ್ಯ ಜೀವನ ನಡೆಸುತ್ತಿದ್ದಾನೆ. ಅಷ್ಟೇ ಅಲ್ಲ ಲಲಿತ್ ಗೆ ಈಗ ಹೆಚ್ಚಿನ ಗೌರವ ನೀಡಲಾಗುತ್ತಿದೆ. ಕೆಲವರು ಲಲಿತ್ ವಿಚಿತ್ರ ರೂಪವನ್ನು ಹನುಮಂತನೊಂದಿಗೆ ಹೋಲಿಸುತ್ತಾರೆ, ಕೆಲವರು ಜಾಂಬುವಂತನಿಗೆ ಹೋಲಿಸುತ್ತಾರೆ ಮತ್ತು ಕೆಲವರು ಹಳ್ಳಿಯಲ್ಲಿ ಲಲಿತ್‌ನನ್ನು ಪೂಜಿಸುತ್ತಾರೆ.
ಆರಂಭದಲ್ಲಿ ಜನರು ಮತ್ತು ಮಕ್ಕಳು ಲಲಿತ್ ನೋಡಿ ಹೆದರುತ್ತಿದ್ದರು, ಆದರೆ ಈಗ ಅವರು ಲಲಿತ್‌ನನ್ನು ದೇವರೆಂದು ಪರಿಗಣಿಸುತ್ತಾರೆ, ಈಗ ಇಡೀ ಗ್ರಾಮವು ಲಲಿತ್‌ಗೆ ಸಾಕಷ್ಟು ಪ್ರೀತಿ ಮತ್ತು ಕಾಳಜಿಯನ್ನು ನೀಡುತ್ತದೆ ಎಂದು ಲಲಿತ್ ಅವರ ಸಹೋದರ ಹೇಳಿದರು. ಲಲಿತ್ ಚಿಕಿತ್ಸೆಗಾಗಿ ಸಂಸದ ಸುಧೀರ್ ಗುಪ್ತಾ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಮಾಜಿ ಸರಪಂಚ್ ಇಂದ್ರಜಿತ್ ಹೇಳುತ್ತಾರೆ. ಹಿರಿಯ ವೈದ್ಯರನ್ನು ಸಂಪರ್ಕಿಸಿದ್ದರಂತೆ. ಆದರೆ 21 ವರ್ಷಕ್ಕಿಂತ ಮೊದಲು ಚಿಕಿತ್ಸೆ ಅಸಾಧ್ಯ, ಹೀಗಾಗಿ ಈಗ 21 ವರ್ಷದ ನಂತರವೇ ಲಲಿತ್ ಚಿಕಿತ್ಸೆ ಸಾಧ್ಯವಾಗಲಿದೆಯಂತೆ. ಲಲಿತ್ ಅವರ ವಿಚಿತ್ರ ರೂಪವನ್ನು ಕೆಲವು ವರ್ಷಗಳ ನಂತರ ಪ್ಲಾಸ್ಟಿಕ್ ಸರ್ಜರಿಯಿಂದಲೇ ಸರಿಪಡಿಸಬೇಕಿದೆ.
ಇದನ್ನೂ ಓದಿ : ಆಂಜನೇಯ ಸ್ತೋತ್ರ ಹೇಳುವ ಈ ಪುಟ್ಟ ಹುಡುಗಿ.. ಕೇಳಿದವರು ಭಕ್ತಿ ಪರವಶರಾಗೋದು ಗ್ಯಾರೆಂಟಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.