Video Viral : ಆಂಜನೇಯ ಸ್ತೋತ್ರ ಹೇಳುವ ಈ ಪುಟ್ಟ ಹುಡುಗಿ.. ಕೇಳಿದವರು ಭಕ್ತಿ ಪರವಶರಾಗೋದು ಗ್ಯಾರೆಂಟಿ!

Video Viral : ವಿಡಿಯೋದಲ್ಲಿ, ಆ ಪುಟ್ಟ ಹುಡುಗಿ ಭಗವಾನ್ ಹನುಮಂತನ ಭಜನೆಗಳನ್ನು ಹಾಡುವುದನ್ನು ಕಾಣಬಹುದು. ಆ ಹುಡುಗಿ ತನ್ನ ಶಾಲೆಯ ಸಮವಸ್ತ್ರವನ್ನು ಧರಿಸಿದ್ದಾಳೆ ಮತ್ತು ಅವಳು ಹನುಮಂತನ ಭಜನೆಯನ್ನು ಇತರ ಅನೇಕ ಮಹಿಳೆಯರೊಂದಿಗೆ ಕುಳಿತು ಹಾಡುತ್ತಾಳೆ. 

Written by - Chetana Devarmani | Last Updated : Nov 25, 2022, 03:32 PM IST
  • ಆಂಜನೇಯ ಸ್ತೋತ್ರ ಹೇಳುವ ಈ ಪುಟ್ಟ ಹುಡುಗಿ
  • ಕೇಳಿದವರು ಭಕ್ತಿ ಪರವಶರಾಗೋದು ಗ್ಯಾರೆಂಟಿ!
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್‌
Video Viral : ಆಂಜನೇಯ ಸ್ತೋತ್ರ ಹೇಳುವ ಈ ಪುಟ್ಟ ಹುಡುಗಿ.. ಕೇಳಿದವರು ಭಕ್ತಿ ಪರವಶರಾಗೋದು ಗ್ಯಾರೆಂಟಿ! title=
ಪುಟ್ಟ ಹುಡುಗಿ

Video Viral : ಕೆಲವು ದಿನಗಳ ಹಿಂದೆ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ತುಂಬಾ ಮುದ್ದಾದ ಚಿಕ್ಕ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾಳೆ. ವಿಡಿಯೋದಲ್ಲಿ, ಆ ಹುಡುಗಿಯು ಹನುಮಂತನ ಭಜನೆಗಳನ್ನು ಹಾಡುವುದನ್ನು ಕಾಣಬಹುದು. ಆ ಹುಡುಗಿ ತನ್ನ ಶಾಲೆಯ ಸಮವಸ್ತ್ರವನ್ನು ಧರಿಸಿದ್ದಾಳೆ ಮತ್ತು ಆಂಜನೇಯನ ಭಜನೆಯನ್ನು ಇತರ ಅನೇಕ ಮಹಿಳೆಯರೊಂದಿಗೆ ಕುಳಿತು ಹಾಡುತ್ತಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಭಜನಾ ಮಂಡಳಿಯನ್ನು ಮುನ್ನಡೆಸುತ್ತಿರುವ ಈ ಪೋರಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾಳೆ.

ಇದನ್ನೂ ಓದಿ : 6 ಜನ, 2 ಶ್ವಾನ, 2 ಕೋಳಿ ಬೈಕ್‌ ಮಾತ್ರ ಒಂದೇ! ಈ ಸವಾರಿ ಕಂಡು ಹೌಹಾರಿದ ನೆಟ್ಟಿಗರು

ಈ ವೈರಲ್ ವಿಡಿಯೋದಲ್ಲಿ ನೀವು ನೋಡುವಂತೆ, ಚಿಕ್ಕ ಹುಡುಗಿಯೊಬ್ಬಳು ಭಜನಾ ಮಂಡಳಿಯಲ್ಲಿ ಒಂದು ಸ್ಥಳದಲ್ಲಿ ಕುಳಿತುಹಾಡುತ್ತಾಳೆ. ಇತರ ಮಹಿಳೆಯರು ಆಕೆ ಹೇಳುವ ಸಾಲುಗಳನ್ನು ಪುನರಾವರ್ತಿಸುತ್ತಾರೆ. ಶಾಲೆಯಿಂದ ಬಂದ ನಂತರ ಡ್ರೆಸ್ ಕೂಡ ಬದಲಾಯಿಸದೆ, ಭಜನೆ ಹಾಡಲು ಪ್ರಾರಂಭಿಸಿದಂತಿದೆ. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಅಜ್ಜಿ ಬಾಲಕಿಗೆ ಹಣ ನೀಡಲು ಯತ್ನಿಸಿದರೂ ಆಕೆ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ. ಹಿಂದೆ ಕುಳಿತಿದ್ದ ಹೆಂಗಸರೂ ಮಗು ಹೇಳಿದ ಸಾಲುಗಳನ್ನು ಪುನರಾವರ್ತಿಸುತ್ತಿರುವುದು ಕಂಡುಬಂದಿದೆ.

 

 

ಈ ವಿಡಿಯೋವನ್ನು @Gulzar_sahab ಹೆಸರಿನ ಬಳಕೆದಾರರು Twitter ನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಬಾಲಕಿ ‘ಛೋಟಾ ಸಾ ಹನುಮಾನ್, ಚಲಾವೇ ಗಾಡಿ ಸತ್ಸಂಗ ಕಿ..’ ಎಂದು ಹಾಡುತ್ತಿದ್ದು, ಇತರ ಮಹಿಳೆಯರೂ ಆಕೆ ಹೇಳಿಕೊಟ್ಟಂತೆ ಹಾಡುತ್ತಿದ್ದಾರೆ. ವಿಡಿಯೋವನ್ನು 25,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವಿಡಿಯೋ 1,800 ಕ್ಕೂ ಹೆಚ್ಚು ಲೈಕ್‌ಗಳನ್ನು ಸಹ ಸ್ವೀಕರಿಸಿದೆ. ವಿಡಿಯೋ ನೋಡಿದ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರ, 'ದೇವರು ಈ ಮುದ್ದಾದ ಹುಡುಗಿಯನ್ನು ತನ್ನದೇ ರೂಪದಲ್ಲಿ ಕಳುಹಿಸಿದ್ದಾನೆ' ಎಂದು ಬರೆದಿದ್ದಾರೆ.

ಇದನ್ನೂ ಓದಿ : ಬೈಕ್‌ ಕನ್ನಡಿಯಲ್ಲಿ ಮುಖ ನೋಡಿಕೊಂಡ ಈ ಮಂಗನ ರಿಯಾಕ್ಷನ್‌ ನೋಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News