Viral News: ಇಡ್ಲಿ-ವಡೆಗಳನ್ನು ಈ ಹೆಸರಿನಡಿ ಮಾರಾಟ ಮಾಡುತ್ತಿರುವ US ಹೋಟೆಲ್, ಬೆಲೆ ಕೇಳಿ ದಂಗಾಗುವಿರಿ
Viral News: ಅಮೆರಿಕಾದ ರೆಸ್ಟೋರೆಂಟ್ ವೊಂದರ ಮೇನ್ಯೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಮೆನ್ಯೂವಿನಲ್ಲಿ ವಡೆಯನ್ನು `ಡೋನೆಟ್` ಮತ್ತು ಇಡ್ಲಿಯನ್ನು `ರೈಸ್ ಕೇಕ್` ಹೆಸರಿನಿಂದ ಮಾರಾಟ ಮಾಡಲಾಗುತ್ತಿದೆ.
Viral News: ವಿಶ್ವದ ಮೂಲೆಮೂಲೆಯಲ್ಲಿ ನೀವು ಭಾರತೀಯ ಆಹಾರಗಳನ್ನು ಇಷ್ಟಪಡುವ ಜನರನ್ನು ನೋಡಬಹುದು. ಅದರಲ್ಲಿಯೂ ವಿಶೇಷವಾಗಿ ನಿಮಗೆ ದೇಶದ ಹೊರಗಡೆ ಭಾರತೀಯ ತಿಂಡಿಯ ರುಚಿ ಸವಿಯಲು ದೊರೆತರೆ ಅದರ ಆನಂದವೇ ವಿಭಿನ್ನವಾಗಿರುತ್ತದೆ. ಅಮೇರಿಕಾದಲ್ಲಿರುವ ರೆಸ್ಟೋರೆಂಟ್ ವೊಂದು ದಕ್ಷಿಣ ಭಾರತದ ತಿಂಡಿ-ತಿನುಸುಗಳನ್ನು ಸರ್ವ ಮಾಡುತ್ತದೆ. ಆದರೆ, ಆ ಹೋಟೆಲ್ ದೊರೆಯುವ ಆಹಾರಗಳ ಪಟ್ಟಿಯನ್ನು ನೋಡಿ, ನೀವೂ ಕೂಡ ಒಂದು ಕ್ಷಣ ನಿಬ್ಬೇರಗಾಗುವಿರಿ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರೊಬ್ಬರು ಆ ಹೋಟೆಲ್ ನಲ್ಲಿ ದೊರೆಯುವ ತಿಂಡಿ-ತಿನುಸುಗಳ ಮೇನ್ಯೂ ಹಂಚಿಕೊಂಡಿದ್ದಾರೆ. ಈ ಮೇನ್ಯೂ ಅನ್ನು ನೋಡಿದ ಭಾರತೀಯ ನೆಟ್ಟಿಗರು ಅದನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ಎಂದರೆ, ಆ ಹೋಟೆಲ್, ಶುದ್ಧ ದಕ್ಷಿಣ ಭಾರತದ ತಿಂಡಿಯಾಗಿರುವ ವಡೆಯನ್ನು 'ಡೋನೆಟ್' ಹಾಗೂ ಇಡ್ಲಿಯನ್ನು 'ರೈಸ್ ಕೇಕ್' ಹೆಸರಿನಿಂದ ಮಾರಾಟಮಾಡುತ್ತಿದೆ.
1300 ರೂ.ಗಳಿಗೆ ವಡೆ ಮಾರಾಟ
ಅಮೇರಿಕಾದಲ್ಲಿರುವ Indian Crepe Co.ಹೆಸರಿನ ಈ ರೆಸ್ಟೋರೆಂಟ್ ದಕ್ಷಿಣದ ಅತ್ಯಂತ ಜನಪ್ರೀಯ ತಿಂಡಿಯಾಗಿರುವ ವಡೆಯನ್ನು Dunked Doughnut Delight ಹೆಸರಿನಿಂದ ಮಾರಾಟ ಮಾಡುತ್ತಿದೆ. ಅಲ್ಲಿನ ಗ್ರಾಹಕರು 2 ವಡೆಗೆ ಒಟ್ಟು $16.49 (1300) ಪಾವತಿಸಬೇಕು. ಇನ್ನೊಂದೆಡೆ ಇಡ್ಲಿ-ಸಾಂಬಾರ್ ಅನ್ನು Dunked Rice Cake Delight ಅಡಿ ಮಾರಾಟ ಮಾಡುತ್ತದೆ ಮತ್ತು ಇದಕ್ಕಾಗಿ ನೀವು ಡಾಲರ್ 15.39 (ಅಂದರೆ ಸುಮಾರು ರೂ.1200) ಪಾವತಿಸಬೇಕು.
ಒಂದು ದೋಸೆಗಾಗಿ ನೀವು ರೂ.1400 ಪಾವತಿಸಬೇಕು
ಇಡ್ಲಿ-ವಡೆ ಜೊತೆಗೆ ಈ ರೆಸ್ಟೋರೆಂಟ್ ದೋಸೆ ಕೂಡ ಸರ್ವ ಮಾಡುತ್ತದೆ. ಸಾದಾ ದೋಸೆಯನ್ನು Naked Crepe ಹೆಸರಿನಿಂದ ಸರ್ವ ಮಾಡಲಾಗುತ್ತದೆ ಮತ್ತು ಒಂದು ಸದಾ ದೊಸೆಗೆ ಜನರು ರೂ.1400 ಅಂದರೆ $ 17.59 ಪಾವತಿಸಬೇಕು.
ಇದನ್ನೂ ಓದಿ-Viral News: ಪತಿಗೆ ತನ್ನ ತದ್ರೂಪಿಯನ್ನು ಉಡುಗೊರೆಯಾಗಿ ನೀಡಿದ ಪತ್ನಿ, ಪತಿಯ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಜನರಿಂದ ಸ್ವಾರಸ್ಯಕರ ಪ್ರತಿಕ್ರಿಯೆಗಳು
ಸಾಮಾಜಿಕ ಮಾಧ್ಯಮದ ಮೇಲೆ ಈ ಪೋಸ್ಟ್ ವೈರಲ್ ಆಗುತಿದ್ದಂತೆ, ಈ ಪೋಸ್ಟ್ ಗೆ ಜನರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. 'ಪಂಚಾಯತ್' ವೆಬ್ ಸೀರೀಸ್ ನ ಜನಪ್ರೀಯ ಡೈಲಾಗ್ ರೂಪದಲ್ಲಿ ಓರ್ವ ಬಳಕೆದಾರ ಪ್ರತಿಕ್ರಿಯೆ ನೀಡಿದ್ದು, ' ನೋಡಿದೆಯಾ ವಿನೋದ್, ಹೇಗೆ ದಕ್ಷಿಣ ಭಾರತದ ತಿಂಡಿಗಳಿಗೆ ವಿವಿಧ ಹೆಸರುಗಳನ್ನು ನೀಡಿ, ಬೆಲೆ ಹೆಚ್ಚಿಸಲಾಗುತ್ತಿದೆ' ಎಂದಿದ್ದಾರೆ.
ಇದನ್ನೂ ಓದಿ-ಈ ವರ್ಷ ಬರಲಿದೆ ದೊಡ್ಡ ದುರಂತ! ನಾಸ್ಟ್ರಾಡಾಮಸ್ ಭವಿಷ್ಯವಾಣಿಯ ಭಯದ ನೆರಳಿನಲ್ಲಿ ಜಗತ್ತು
ಮತ್ತೋರ್ವ ಬಳಕೆದಾರರು, " ಇಂಗ್ಲಿಷ್ ಹೆಸರುಗಳಿಗಾಗಿ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತಿದೆಯೇ?" ಎಂದು ಪ್ರಶ್ನಿಸಿದ್ದಾರೆ. ತಿಂಡಿಗಳ ಮೂಲ ಹೆಸರಿನಿಂದ ಅವುಗಳನ್ನು ಮಾರಾಟ ಮಾಡಲಾಗುತ್ತಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಭಾರಿ ಟ್ರೋಲ್ ಗೆ ಗುರಿಯಾಗಿರುವುದು ಮಾತ್ರ ನಿಜ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.