Viral News: ಹಾವು ಕಚ್ಚಿದ ಬಳಿಕ ಈ ಯುವಕ ಮಾಡಿದ ಕೆಲಸ ನೋಡಿ ಜನರಿಗೆ ಶಾಕ್..!
ಸದ್ಯ ಸುರೇಂದ್ರ ಪ್ರಸಾದ್‍ನನ್ನು ಸಾಮಾನ್ಯ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಆತನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿದುಬಂದಿದೆ.
ನವದೆಹಲಿ: ತನಗೆ ಕಚ್ಚಿದ ಹಾವು ಸಮೇತ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದು ಕೆಲಕಾಲ ಆತಂಕ ಮೂಡಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಕಚ್ಚಿದ ಹಾವನ್ನು ಚೀಲದಲ್ಲಿ ತುಂಬಿಕೊಂಡು ಆಸ್ಪತ್ರೆ ತಲುಪಿದ ವ್ಯಕ್ತಿ ತನಗೆ ಚಿಕಿತ್ಸೆ ನೀಡುವಂತೆ ಕೇಳಿದ್ದಾನೆ. ಹಾವು ಕಂಡ ಆಸ್ಪತ್ರೆಯಲ್ಲಿದ್ದ ವೈದ್ಯರು ಮತ್ತು ರೋಗಿಗಳು ಹೌಹಾರಿಹೋಗಿದ್ದಾರೆ.
ಆಗಿದ್ದೇನು..?
ಬಿಹಾರದ ಶರೀಫ್‌ನಲ್ಲಿ ಸುರೇಂದ್ರ ಪ್ರಸಾದ್ ಎಂಬಾತನಿಗೆ ಹಾವು ಕಚ್ಚಿದೆ. ಈ ವೇಳೆ ಧೈರ್ಯ ಕಳೆದುಕೊಳ್ಳದ ಆತ ತನಗೆ ಕಚ್ಚಿದ ಹಾವನ್ನು ಹಿಡಿದು ಬ್ಯಾಗ್‌ನಲ್ಲಿ ಹಾಕಿಕೊಂಡು ನೇರ ಆಸ್ಪತ್ರೆಗೆ ಬಂದಿದ್ದಾನೆ. ಆಸ್ಪತ್ರೆಗೆ ಬಂದವನೇ ಬ್ಯಾಗ್‍ನಲ್ಲಿದ್ದ ಹಾವನ್ನು ಹೊರತೆಗೆದು ವೈದ್ಯರ ಮುಂದೆ ಇಟ್ಟಿದ್ದಾನೆ. ಇದನ್ನು ಕಂಡ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ: Viral Video : ವಿಹಾರಕ್ಕೆಂದು ಬಂದವ ಪ್ರಿಯತಮೆಯ ತಲೆಯ ಹೇನು ಹುಡುಕುತ್ತಾ ಕುಳಿತ
ಸುರೇಂದ್ರ ಪ್ರಸಾದ್ ತನಗೆ ಕಚ್ಚಿದ ಹಾವು ಯಾವುದು ಎಂಬುದನ್ನು ವೈದ್ಯರಿಗೆ ತಿಳಿಸಿ ಚಿಕಿತ್ಸೆ ಪಡೆಯಬೇಕಿತ್ತು. ಹೀಗಾಗಿ ಆತ ತನಗೆ ಕಚ್ಚಿದ ಹಾವಿನ ಸಮೇತವೇ ಆಸ್ಪತ್ರೆ ತಲುಪಿದ್ದಾನೆ. ಹಾವು ತೋರಿಸಿ ಇದೇ ನೋಡಿ ನನಗೆ ಕಚ್ಚಿರುವ ಹಾವು, ಕೂಡಲೇ ನನಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಿ ಎಂದು ವೈದ್ಯರಿಗೆ ಮನವಿ ಮಾಡಿದ್ದಾನೆ. ಏಕಾಏಕಿ ಚೀಲದಲ್ಲಿದ್ದ ಹಾವನ್ನು ಹೊರತೆಗೆದ ಕೂಡಲೇ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸರ್ಪವನ್ನು ಕಂಡ ವೈದ್ಯರು, ಸಿಬ್ಬಂದ ಮತ್ತು ರೋಗಿಗಳಿಗೆ ಶಾಕ್ ಆಗಿದೆ.
ವರದಿಯ ಪ್ರಕಾರ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸುರೇಂದ್ರ ಪ್ರಸಾದ್ ಕಾಲಿಗೆ ಹಾವು ಕಚ್ಚಿತ್ತಂತೆ. ಹೇಗಾದರೂ ಮಾಡಿ ಪ್ರಾಣ ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದ ಆತ ತನಗೆ ಕಚ್ಚಿದ ಹಾವಿನ ಬಗ್ಗೆ ವೈದ್ಯರಿಗೆ ತಿಳಿಸಬೇಕೆಂದು ಚೀಲದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದಿದ್ದಾನೆ. ‘ನನಗೆ ಯಾರನ್ನೂ ಹೆದರಿಸುವ ಉದ್ದೇಶವಿರಲಿಲ್ಲ. ನನಗೆ ಹಾವು ಕಚ್ಚಿದ್ದರ ಬಗ್ಗೆ ಮನೆಯವರಿಗೆ ತಿಳಿಸಿರಲಿಲ್ಲ. ಮಧ್ಯರಾತ್ರಿ ನನ್ನ ಆರೋಗ್ಯ ಹದಗೆಟ್ಟಿತ್ತು. ಕುಟುಂಬಸ್ಥರು ನನ್ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ವೈದ್ಯರು ನಿನಗೆ ಯಾವ ಹಾವು ಕಚ್ಚಿದೆ ಎಂದು ಕೇಳಿದ್ದರು. ಅವರಿಗೆ ತೋರಿಸುವ ಉದ್ದೇಶದಿಂದ ನಾನು ಚೀಲದಲ್ಲಿದ್ದ ಹಾವನ್ನು ಹೊರತೆಗೆದು ತೋರಿಸಿದೆ’ ಎಂದು ಸುರೇಂದ್ರ ಪ್ರಸಾದ್ ಹೇಳಿದ್ದಾನೆ. ಸದ್ಯ ಸುರೇಂದ್ರ ಪ್ರಸಾದ್‍ನನ್ನು ಸಾಮಾನ್ಯ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಆತನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral Video: ಶಾಲೆಯಲ್ಲಿ ಮಗುವಿನಿಂದ ಮಸಾಜ್ ಮಾಡಿಸಿಕೊಂಡ ಟೀಚರಮ್ಮ, ವಿಡಿಯೋ ನೀವೂ ನೋಡಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.