ನವದೆಹಲಿ: ಕಳೆದ 8 ವರ್ಷಗಳಲ್ಲಿ ಸುಮಾರು 50 ಮಕ್ಕಳಿಗೆ ತಂದೆಯಾಗಿರುವ 30 ವರ್ಷ ವಯಸ್ಸಿನ ಈ ವ್ಯಕ್ತಿ ತಮ್ಮ ‘ವಿವಾದಾತ್ಮಕ ಆಯ್ಕೆಗಳು’ ಡೇಟಿಂಗ್ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಹೇಳಿಕೊಂಡಿದ್ದಾರೆ. ಈ ವ್ಯಕ್ತಿ ಜಗತ್ತಿನಾದ್ಯಂತ 47ಕ್ಕೂ ಹೆಚ್ಚು ಮಕ್ಕಳಿಗೆ ಜೈವಿಕ ತಂದೆಯಾಗಿದ್ದು, ಇನ್ನೂ 10 ಮಕ್ಕಳನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಅಮೆರಿಕದ ಈ ಯುವಕನಿಗೆ ಇಷ್ಟೊಂದು ಮಕ್ಕಳಿಗೆ ಅಪ್ಪನಾಗಿರುವುದೇ ಮುಳುವಾಗಿದೆ. ಕ್ಯಾಲಿಫೋರ್ನಿಯಾದ ಕೈಲ್ ಕಾರ್ಡಿ ವೀರ್ಯ ದಾನ ಮಾಡಿ ಇಷ್ಟು ಮಕ್ಕಳ ತಂದೆಯಾಗಿದ್ದಾರೆ. ಇದರಿಂದ ಆತನ ನಿಜವಾದ ಪ್ರೀತಿಗೆ ಧಕ್ಕೆ ಆಗಿದೆಯಂತೆ. ವೀರ್ಯ ದಾನದ ನಿರ್ಧಾರದಿಂದ ಇದೀಗ ಆತನಿಗೆ ಸಂಗಾತಿಯನ್ನು ಹುಡುಕುವುದು ಕಷ್ಟಕರವಾಗಿದೆ.


ಇದನ್ನೂ ಓದಿ: Viral Video: ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ಗ್ಯಾರಂಟಿ ನೀರು ಬರುತ್ತೆ!


‘ಆರಂಭದಲ್ಲಿ ನನ್ನ ಜೀವನ ಸುಮಾರಾಗಿ ನಡೆಯುತ್ತಿತ್ತು. ಆದರೆ, ಯಾವುದೇ ಸಂಬಂಧಗಳು ದೀರ್ಘಕಾಲ ಉಳಿಯುತ್ತಿರಲಿಲ್ಲ. ಇದೀಗ ನನ್ನ ಜೊತೆ ಸಂಬಂಧ ಬೆಳೆಸಲು ಮಹಿಳೆಯರು ತಾ ಮುಂದು ನಾ ಮುಂದು ಎಂದು ಬರುತ್ತಾರೆ. ಆದರೆ, ಮಕ್ಕಳನ್ನು ಪಡೆಯುವುದಷ್ಟೇ ಅವರ ಗುರಿ ಎಂದು ಅಳಲು ತೋಡಿಕೊಂಡಿದ್ದಾನೆ. 2 ವರ್ಷಗಳ ವೀರ್ಯ ದಾನದ ನಂತರ ನಾನು ಹೆಚ್ಚು ಸುದ್ದಿಯಾಗಿದ್ದೇನೆ. ಏಕೆಂದರೆ ನಾನು ಸಕ್ರಿಯವಾಗಿ ವೀರ್ಯವನ್ನು ಹೆಚ್ಚು ದಾನ ಮಾಡುತ್ತಿದ್ದೆ ಎಂದು ಕೈಲ್ ತಿಳಿಸಿದ್ದಾರೆ.


Viral Video: ಬೃಹತ್ ಬಂಡೆಕಲ್ಲು ಅಪ್ಪಳಿಸಿ ಬೈಕ್ ಸವಾರ ಸಾವು, ಭಯಾನಕ ವಿಡಿಯೋ ಮೊಬೈಲ್‍ನಲ್ಲಿ ಸೆರೆ


ತನ್ನ ಕೆಟ್ಟ ನಿರ್ಧಾರದಿಂದಾಗಿ ತನ್ನ ಡೇಟಿಂಗ್ ಜೀವನಕ್ಕೆ ಹೊಡೆತ ಬಿದ್ದಿದೆ. ಯಾರೂ ಕೂಡ ನನ್ನನ್ನು ಮದುವೆಯಾಗಲು ಒಪ್ಪುತ್ತಿಲ್ಲ. ನನ್ನ ಜೀವನದ ಬಗ್ಗೆ ಕುಟುಂಬ ಸದಸ್ಯರಿಗೂ ಬೇಸರವಾಗಿದೆ. ನನಗೆ ಈಗ ಉತ್ತಮ ಜೀವನ ಸಂಗಾತಿ ಬೇಕಾಗಿದೆ. ಆದರೆ ನನ್ನ ಜೊತೆ ಮದುವೆಯಾಗಲು ಯಾವ ಹುಡುಗಿಯು ಮುಂದೆ ಬರುತ್ತಿಲ್ಲ. ಮುಂದೇನು ಅನ್ನೋ ಯೋಚನೆ ನನ್ನನ್ನು ಬಹಳವಾಗಿ ಕಾಡುತ್ತಿದೆ ಅಂತಾ 30ರ ಹರೆಯದ ಕೈಲ್ ಹೇಳಿದ್ದಾರೆ.   


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.