Viral News: ಕೊನೆಗೂ ತನ್ನನ್ನೇ ಮದುವೆಯಾದ ಯುವತಿ.. ಹನಿಮೂನ್ ಮಾತ್ರ ಬಾಕಿ!
ತಮ್ಮಿಷ್ಟದಂತೆ ತಮ್ಮ ಕನಸು ನನಸು ಮಾಡಿಕೊಂಡು ಏಕಾಂಗಿ ಮದುವೆಯಾಗಿರುವ ಕ್ಷಮಾ ಇದೀಗ ತನ್ನ ಜೊತೆಗೆ ತಾನೇ ಗೋವಾಕ್ಕೆ ತೆರಳಿ ಹನಿಮೂನ್ ಆಚರಿಸಲಿದ್ದಾರಂತೆ.
ನವದೆಹಲಿ: ದೇಶದಾದ್ಯಂತ ಸಖತ್ ಸೌಂಡ್ ಮಾಡಿದ್ದ ಗುಜರಾತ್ನ ವಡೋದರ ಮೂಲದ ಯುವತಿ ಕ್ಷಮಾ ಬಿಂದು ಕೊನೆಗೆ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಶಾಸ್ತ್ರೋಕ್ತವಾಗಿಯೇ ಆಕೆ ತನ್ನನ್ನು ತಾನೇ ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದಾಳೆ. ಅಚ್ಚರಿಯಾದ್ರೂ ಇದು ನಿಜ. ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಿಸುವ ಮೂಲಕ ಕ್ಷಮಾ ಬಿಂದು ದೊಡ್ಡ ಸುದ್ದಿಯಾಗಿದ್ದಳು.
ಗಂಡು-ಹೆಣ್ಣು ಮದುವೆಯಾಗುವುದು ಸಹಜ. ಸಲಿಂಗಿಗಳು ಮದುವೆಯಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಯುವತಿ ತನ್ನನ್ನು ತಾನೇ ಮದುವೆಯಾಗುವ ಮೂಲಕ ದೊಡ್ಡ ಸುದ್ದಿಯಾಗಿದ್ದಾಳೆ. ಈಕೆಯ ಈ ವಿಚಿತ್ರ ನಿರ್ಧಾರದಿಂದ ಅನೇಕರು ಬಾಯ್ ಮೇಲೆ ಬೆರಳಿಟ್ಟಿದ್ದಾರೆ. ನೆಟಿಜನ್ಗಳು ಮಾತ್ರ 'ದೇಶದಲ್ಲಿ ಗಂಡಸರಿಗೆ ಏನು ಬರ?' ಅಂತಾ ತಮ್ಮಲ್ಲಿಯೇ ಪ್ರಶ್ನಿಸಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಉದ್ಘಾಟನೆ ವೇಳೆಯೇ ಕುಸಿದ ತೂಗು ಸೇತುವೆ, ಮೇಯರ್ ಸೇರಿ ಹಲವರು ಚರಂಡಿ ಪಾಲು!
ಕ್ಷಮಾ ಬಿಂದುರವರ ವಿಶೇಷ ವಿವಾಹಕ್ಕೆ ಅವರ ಅಪಾರ ಸ್ನೇಹಿತರು-ಸಂಬಂಧಿಕರು ಸಾಕ್ಷಿಯಾಗಿದ್ದಾರೆ. ದೇವಾಲಯದಲ್ಲಿ ಏಕಾಂಗಿ ಮದುವೆಯಾಗಲು ವಿರೋಧ ವ್ಯಕ್ತವಾದ ಹಿನ್ನೆಲೆ ಅವರು ತಮ್ಮ ಮನೆಯಲ್ಲಿಯೇ ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆಯಾಗಿದ್ದಾರೆ. ಆದರೆ, ಈ ಮದುವೆಗೆ ಪುರೋಹಿತರು ಗೈರಾಗಿದ್ದರು. ಹಿಂದೂ ಸಂಪ್ರದಾಯದ ಶಾಸ್ತ್ರಗಳ ಪ್ರಕಾರ ಕ್ಷಮಾ ತಮ್ಮನ್ನು ತಾವೇ ಮದುವೆಯಾಗಿದ್ದಾರೆ. ತಮ್ಮಿಷ್ಟದಂತೆ ತಮ್ಮ ಕನಸು ನನಸು ಮಾಡಿಕೊಂಡು ಏಕಾಂಗಿ ಮದುವೆಯಾಗಿರುವ ಕ್ಷಮಾ ಇದೀಗ ತನ್ನ ಜೊತೆಗೆ ತಾನೇ ಗೋವಾಕ್ಕೆ ತೆರಳಿ ಹನಿಮೂನ್ ಆಚರಿಸಲಿದ್ದಾರಂತೆ.
Viral Video: ಕುಚೇಷ್ಟೆ ಮಾಡಿದವನಿಗೆ ಓರಾಂಗುಟನ್ ಮಾಡಿದ್ದೇನು ನೋಡಿ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.