Viral Video: ಕುಚೇಷ್ಟೆ ಮಾಡಿದವನಿಗೆ ಒರಾಂಗೂಟಾನ್ ಮಾಡಿದ್ದೇನು ನೋಡಿ..!

ಒರಾಂಗೂಟಾನ್ ಕೈಗಿ ಸಿಕ್ಕಿ ಪಜೀತಿಗೆ ಸಿಲಿಕಿಕೊಂಡಿದ್ದ ಯುವಕನ ಸಹಾಯಕ್ಕೆ ಮತ್ತೊಬ್ಬ ಯುವಕ ಧಾವಿಸಿದ್ದಾನೆ. ಆದರೆ, ಒರಾಂಗೂಟಾನ್ ಮಾತ್ರ ಯುವಕನ ಶರ್ಟ್ ಹಿಡದು ಎಳೆದಾಡಿ ಕಾಡಿಸಿದೆ.

Written by - Puttaraj K Alur | Last Updated : Jun 9, 2022, 06:19 PM IST
  • ಒರಾಂಗೂಟಾನ್ ಜೊತೆಗೆ ಕೀಟಲೆ ಮಾಡಲು ಪಜೀತಿಗೆ ಸಿಲುಕಿದ ಯುವಕ
  • ಕುಚೇಷ್ಟೆ ಮಾಡಲು ಬಂದ ಯುವಕನ ಶರ್ಟ್, ಕಾಲು ಹಿಡಿದ ಒರಾಂಗೂಟಾನ್
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ವಿಡಿಯೋ
Viral Video: ಕುಚೇಷ್ಟೆ ಮಾಡಿದವನಿಗೆ ಒರಾಂಗೂಟಾನ್ ಮಾಡಿದ್ದೇನು ನೋಡಿ..! title=
ಕುಚೇಷ್ಟೆ ಮಾಡಿದ ಯುವಕನಿಗೆ ಒರಾಂಗೂಟಾನ್ ಮಾಡಿದ್ದೇನು?

ನವದೆಹಲಿ: ಮೃಗಾಲಯಕ್ಕೆ ಹೋದಾಗ ಕೆಲವರು ತಾವು ಅಲ್ಲಿಗೆ ಏತಕ್ಕೆ ಹೋಗಿದ್ದೇವೆಂಬುದನ್ನೇ ಮರೆತಿರುತ್ತಾರೆ. ಪ್ರಾಣಿಗಳ ಜೊತೆಗೆ ಕುಚೇಷ್ಟೆ ಮಾಡುತ್ತಾ ಮಜಾ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಹವರಿಗೆ ಕೆಲವು ಪ್ರಾಣಿಗಳು ಸರಿಯಾಗಿಯೇ ಬುದ್ಧಿ ಕಲಿಸುತ್ತವೆ. ಇದಕ್ಕೆ ನಿದರ್ಶನವೆಂಬಂತೆ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮೃಗಾಲಯಕ್ಕೆ ಹೋದಾಗ ನಾವು ಪ್ರಾಣಿಗಳಿಗೆ ಕೀಟಲೆ ಮಾಡಬಾರದು ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಇಂಡೋನೇಷ್ಯಾದ Zooನಲ್ಲಿ ಈ ಘಟನೆ ನಡೆದಿದೆ. ಮೃಗಾಲಯದ ವೀಕ್ಷಣೆಗೆಂದು ತೆರಳಿದ್ದ ಯುವಕನೊಬ್ಬ ಒರಾಂಗೂಟಾನ್ ಜೊತೆಗೆ ಕೀಟಲೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ತನೆಗೆ ಕುಚೇಷ್ಟೆ ಮಾಡಲು ಬಂದ ಆ ಯುವಕನಿಗೆ ಒರಾಂಗೂಟಾನ್ ಸರಿಯಾಗಿಯೇ ಬುದ್ಧಿ ಕಲಿಸಿದೆ.

ಇದನ್ನೂ ಓದಿ: ರಸ್ತೆಗೆ ಇಳಿಯಿತು 260 ವರ್ಷ ಹಳೆಯ ಗೋಲ್ಡನ್‌ ರಥ: ಚಿನ್ನದ ತೇರಿನ ವಿಶೇಷತೆ ಏನ್‌ ಗೊತ್ತಾ!

ಆಗಿದ್ದೇನು..?

ಪಂಜರದೊಳಗಿದ್ದ ಒರಾಂಗೂಟಾನ್ ಬಳಿ ಹೋದ ಯುವಕ ಸುಮ್ಮನೇ ಅದನ್ನು ನೋಡುವುದು ಬಿಟ್ಟು ತಮಾಷೆ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಆ ಯುವಕನ ಶರ್ಟ್ ಹಿಡಿದು ಓರಾಂಗುಟನ್ ಎಳೆದಾಡಿದೆ. ಅದರ ಕೈಗೆ ಸಿಕ್ಕ ಯುವಕ ಬಿಡಿಸಿಕೊಳ್ಳಲು ಪರದಾಡಿದ್ದಾನೆ. ಎಷ್ಟೇ ಪ್ರಯತ್ನಪಟ್ಟರೂ ಒರಾಂಗೂಟಾನ್ ಮಾತ್ರ ಆತನನ್ನು ಬಿಡದೆ ಕಾಡಿಸಿದೆ.

ಒರಾಂಗೂಟಾನ್ ಕೈಗಿ ಸಿಕ್ಕಿ ಪಜೀತಿಗೆ ಸಿಲಿಕಿಕೊಂಡಿದ್ದ ಯುವಕನ ಸಹಾಯಕ್ಕೆ ಮತ್ತೊಬ್ಬ ಯುವಕ ಧಾವಿಸಿದ್ದಾನೆ. ಆದರೆ, ಒರಾಂಗೂಟಾನ್ ಮಾತ್ರ ಯುವಕನ ಶರ್ಟ್ ಹಿಡದು ಎಳೆದಾಡಿ ಕಾಡಿಸಿದೆ. ಬಳಿಕ ಆತನ ಕಾಲನ್ನು ಸಹ ಬಿಗಿಯಾಗಿ ಹಿಡದು ಎಳೆದಾಡಿದೆ. ಇದರಿಂದ ಯುವಕ ದೊಡ್ಡ ಪಜೀತಿಗೆ ಸಿಲುಕಿ ಒದ್ದಾಡಿದ್ದಾನೆ.

ಇದನ್ನೂ ಓದಿ: ನಿಗೂಢ ಅರಣ್ಯ ರಹಸ್ಯ: ಈ ವಿಸ್ಮಯಕಾರಿ ಕಾಡಿಗೆ ಹೋದವರು ಯಾರೂ ತಿರುಗಿ ಬಂದಿಲ್ಲ

ತನಗೆ ಕೀಟಲೆ ಮಾಡಲು ಬಂದ ಯುವಕನಿಗೆ ಒರಾಂಗೂಟಾನ್ ಸರಿಯಾಗಿಯೇ ಬುದ್ಧಿ ಕಲಿಸಿದೆ. ಈ ವಿಡಿಯೋವನ್ನು ಶೇರ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಪ್ರಾಣಿಗಳಿಗೆ ತೊಂದರೆ ಕೊಟ್ಟರೆ ಇದೇ ರೀತಿ ಆಗುತ್ತೆ ಅಂತಾ ಹಲವರು ಕಾಮೆಂಟ್ ಮಾಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News