Modi Ka Parivar: 2024ರ ಲೋಕಸಭೆ ಚುನಾವಣೆಗಳಿಗಾಗಿ ದಿನಗಣನೆ ಆರಂಭವಾಗಿದೆ, ಹಲವೆಡೆ ಚುನಾವಣಾ ಪ್ರಚಾರಗಳು ಕೂಡ ನಡೆಯುತ್ತಿವೆ. ಏತನ್ಮಧ್ಯೆ, ರಾಜಕೀಯ ಪಕ್ಷದ ಹಿರಿಯ ಮುಖಂಡರೂ ಕೂಡ ಪರಸ್ಪರ ಹೇಳಿಕೆ ನೀಡುವುದರಲ್ಲಿ ಹಿಂದೆ ಬೀಳುತ್ತಿಲ್ಲ. ಇತ್ತೀಚೆಗಷ್ಟೇ ಬಿಹಾರದಲ್ಲಿ ನಡೆದ ಒಂದು ಚುನಾವಣಾ ಪ್ರಧಾರ ಸಭೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವೈಯಕ್ತಿಕ ದಾಳಿ ನಡೆಸಿ ಅವರ ಕುಟುಂಬದ ಬಗ್ಗೆ ಹೇಳಿಕೆ ನೀಡಿದ್ದರು. ಇದಾದ ಬಳಿಕ, ಗೃಹ ಸಚಿವ ಅಮಿತ್ ಶಾದಿಂದ ಹಿಡಿದು ಬಿಜೆಪಿಯ ಎಲ್ಲಾ ಹಿರಿಯ ನಾಯಕರು, ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನ ಬಯೋ ಮುಂದೆ 'ಮೋದಿ ಕಾ ಪರಿವಾರ್'  ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಪರಿವಾರ್ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆರಂಭಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡುತ್ತಿರುವವರು ಹೇಳುತ್ತಿದ್ದಾರೆಂದು ತಿಳಿದುಕೊಳ್ಳೋಣ ಬನ್ನಿ. (Viral News In Kannada)


COMMERCIAL BREAK
SCROLL TO CONTINUE READING

ಜನರ ಪ್ರತಿಕ್ರಿಯೆ ಹೇಗಿದೆ
#ModiKaParivar ಹ್ಯಾಶ್‌ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಬಳಿಕ, ಜನರು ಅದಕ್ಕೆ ತುಂಬಾ ಆಸಕ್ತಿದಾಯಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಜನರು ಈ ಬಗ್ಗೆ ತಮಾಷೆಯ ಮೀಮ್‌ಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಬಳಕೆದಾರರು ಸಲ್ಮಾನ್ ಖಾನ್ ಅವರ ರೆಡಿ ಚಿತ್ರದ ದೃಶ್ಯವನ್ನು ಟ್ವೀಟ್ ಮಾಡಿದ್ದಾರೆ. ಈ ಪ್ರವೃತ್ತಿ ಹಾಗೆಯೇ ಮುಂದುವರೆದಿದೆ.


Viral Video: ಒಂದೇ ನಿಮಿಷದಲ್ಲಿ ತಲೆಯಿಂದ 77 ಬಾಟಲಿಗಳನ್ನು ಅನ್ ಕ್ಯಾಪ್ ಮಾಡಿದ ವ್ಯಕ್ತಿ, ತಲೆ ಇದೆಯಾ ಅಥವಾ ಒಪ್ನರ್? ಪ್ರಶ್ನಿಸಿದ ನೆಟ್ಟಿಗರು!

ಭಾರತೀಯ ಸೇನೆಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿಯವರ ಎಲ್ಲಾ ಚಿತ್ರಗಳನ್ನು ಪೋಸ್ಟ್ ಹಂಚಿಕೊಂಡ ಬಳಕೆದಾರರು, 'ಮೋದಿ ತಮ್ಮ ಕುಟುಂಬದೊಂದಿಗೆ, ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತಾರೆ' ಎಂದು ಬರೆದುಕೊಂಡಿದ್ದಾರೆ.


Viral Video: ನರೇಂದ್ರ ಮೋದಿ ಯಾರು? ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ ಪತ್ರಕರ್ತೆ, ಉತ್ತರ ಕೇಳಿ ನೀವೂ...!



ಈ ಬಳಕೆದಾರರು ಕಿಲಿಯನ್ ಮರ್ಫಿ ಅವರ ವೆಬ್ ಸರಣಿ ಪೀಕಿ ಬ್ಲೈಂಡರ್ಸ್ ಅನ್ನು ಮೋದಿ ಸರ್ಕಾರದ ನಾಯಕರನ್ನು ಹೆಸರಿಸುವ ಮೂಲಕ ಮೋದಿ ಅವರ ಕುಟುಂಬದ ಹ್ಯಾಶ್‌ಟ್ಯಾಗ್‌ ಅನ್ನು ಟ್ರೆಂಡ್ ಆಗಿ ಪರಿವರ್ತಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ