ಮುಂಬೈ: ಮುಂಬೈನಲ್ಲಿ ಲೈಂಗಿಕ ಕಿರುಕುಳದ ವಿಶಿಷ್ಟ ಪ್ರಕಣವೊಂದು ನಡೆದಿದೆ. 16 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿ ‘ಐಟಂ’ ಎಂದು ಕರೆದ ಆರೋಪದಡಿ 25 ವರ್ಷದ ಉದ್ಯಮಿಗೆ ಮುಂಬೈ ನ್ಯಾಯಾಲಯ 1.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಅಪ್ರಾಪ್ತ ವಯಸ್ಕ ಬಾಲಕಿಗೆ ‘ಕ್ಯಾ ಐಟಂ, ಕಿದರ್ ಜಾ ರಹೀ ಹೋ’ ಎಂದು ಕರೆಯುವ ಮೂಲಕ ಆ ವ್ಯಕ್ತಿ ಕಿರುಕುಳ ನೀಡಿದ್ದ. ಪ್ರಕಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆ ಆತನಿಗೆ ಜೈಲುಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಹುಡುಗಿಯನ್ನು ಸಂಬೋಧಿಸಲು ‘ಐಟಂ’ ಎಂಬ ಪದವನ್ನು ಲೈಂಗಿಕವಾಗಿ ವಸ್ತುನಿಷ್ಠಗೊಳಿಸುವ ಸಂದರ್ಭದಲ್ಲಿ ಬಳಸಲಾಗುತ್ತದೆಯೇ ಹೊರತು ಬೇರೇನೂ ಅಲ್ಲವೆಂದು POCSO ಕೋರ್ಟ್ ತೀರ್ಪು ನೀಡಿದೆ. ಆರೋಪಿಯ ಉತ್ತಮ ನಡವಳಿಕೆ(Good Behaviour)ಯಡಿ ಕ್ಷಮಾದಾನ ನೀಡಲು ತಿರಸ್ಕರಿಸಿದ ಪೋಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್.ಜೆ.ಅನ್ಸಾರಿ, ‘ಮಹಿಳೆಯರನ್ನು ಅನ್ಯಾಯದಿಂದ ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇಂತಹ ರೋಡ್ ರೋಮಿಯೋಗಳಿಗೆ ಪಾಠ ಕಲಿಸುವ ತುರ್ತು ಅಗತ್ಯವಿದೆ’ ಅಂತಾ ಹೇಳಿದ್ದಾರೆ.   


ಇದನ್ನೂ ಓದಿ: Viral Video: ವಿಶ್ವದ ಅತ್ಯಂತ ಸುಂದರ ಹಾವು ಇದೇನಾ? ನೋಡಿ ಕಾಮದೇವ ಕೂಡ ಮಂತ್ರಮುಗ್ಧನಾಗುವುದು ಗ್ಯಾರಂಟಿ!


ಈ ಘಟನೆಯು 2015ರಲ್ಲಿ ನಡೆದಿದ್ದು, ಅಪ್ರಾಪ್ತ ಬಾಲಕಿ ಶಾಲೆಯಿಂದ ಮನೆಗೆ  ಹಿಂತಿರುಗುತ್ತಿದ್ದಾಗ ಆಕೆಗೆ ಕಿರುಕುಳ ನೀಡಲಾಗಿತ್ತು. ಆರೋಪಿಯು ಬಾಲಕಿಯ ಕೂದಲನ್ನು ಎಳೆದು ಆಕೆಗೆ ‘ಕ್ಯಾ ಐಟಂ, ಕಿದಾರ್ ಜಾ ರಹೀ ಹೋ?’ ಅಂತಾ ಹೇಳಿದ್ದನಂತೆ. ಆಕೆಯ ಪೋಷಕರು ತನ್ನ ಸ್ನೇಹಕ್ಕೆ ವಿರುದ್ಧವಾಗಿದ್ದ ಕಾರಣ ಆರೋಪಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂಬ ಆರೋಪವನ್ನು POCSO ನ್ಯಾಯಾಲಯ ತಳ್ಳಿಹಾಕಿದೆ. ವರದಿಯ ಪ್ರಕಾರ ಅಪ್ರಾಪ್ತೆಯನ್ನು ಈ ವರ್ಷದ ಜುಲೈನಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.


ಬೈಕ್‍ನಲ್ಲಿ ಬಂದಿದ್ದ ಆರೋಪಿಯು ಮಧ್ಯಾಹ್ನ 2.15ಕ್ಕೆ ಅಪ್ರಾಪ್ತ ಬಾಲಕಿ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಹಿಂಬಾಲಿಸಿ ಕಿರುಕುಳ ನೀಡಿದ್ದ. ಆಕೆಯನ್ನು ನೋಡಿದ ಕೂಡಲೇ ಹಿಂದೆ ಬಂದ ಆರೋಪಿ ಕೂದಲು ಹಿಡಿದು ಎಳೆದಾಡಿದ್ದಾನೆ. ಈ ವೇಳೆ ಬಾಲಕಿ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆತನನ್ನು ದೂರ ತಳ್ಳಲು ಯತ್ನಿಸಿ ತನ್ನನ್ನು ಬಿಟ್ಟುಬಿಡುವಂತೆ ಅಂಗಲಾಚಿದ್ದಾಳೆ. ಆದರೆ ಆರೋಪಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಪ್ರಾಪ್ತೆ ಕೂಡಲೇ 100ಗೆ ಡಯಲ್ ಮಾಡಿ ವಿಷಯ ತಿಳಿಸಿದ್ದಳು. ಆದರೆ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ನಂತರ ಘಟನೆಯ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಳು ಎಂದು ವರದಿಯಾಗಿದೆ.


ಇದನ್ನೂ ಓದಿ: Cyclone Sitrang: ದೇಶದ 6 ರಾಜ್ಯಗಳಿಗೆ ‘ಸಿತ್ರಾಂಗ್’ ಭೀತಿ: ಕರ್ನಾಟಕಕ್ಕೂ ಇದೆಯಾ ಸೈಕ್ಲೋನ್ ಪರಿಸ್ಥಿತಿ ಎಫೆಕ್ಟ್?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ