CBSE Class 10th, 12th Practical Exams Schedule: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಭಾನುವಾರ 10 ಮತ್ತು 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆ, ಪ್ರಾಜೆಕ್ಟ್ ಹಾಗೂ ಆಂತರಿಕ ಮೌಲ್ಯಮಾಪನದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ನವೆಂಬರ್ 2022 ರಿಂದ ಪ್ರಾಯೋಗಿಕ ಪರೀಕ್ಷೆ ಮತ್ತು ವಿಂಟರ್ ಬೌಂಡ್ ಶಾಲೆಗಳ ಆಂತರಿಕ ಮೌಲ್ಯಮಾಪನವನ್ನು ನಡೆಸಲಾಗುತ್ತದೆ. ಈ ಪರೀಕ್ಷೆಗೆ ಸಂಬಂಧಿಸಿದ ಅಧಿಸೂಚನೆಯು CBSE ನ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಲಭ್ಯವಿದೆ.
ಪರೀಕ್ಷೆಯು ನವೆಂಬರ್ 15 ರಿಂದ ಆರಂಭವಾಗಲಿದೆ
ಹೊರಡಿಸಿದ ಅಧಿಸೂಚನೆಯ ಪ್ರಕಾರ, ಚಳಿಗಾಲದ ಶಾಲೆಗಳ 10 ಮತ್ತು 12 ನೇ ತರಗತಿಗಳ ಪ್ರಾಯೋಗಿಕ ಪರೀಕ್ಷೆ, ಪ್ರಾಜೆಕ್ಟ್ ಮತ್ತು ಆಂತರಿಕ ಮೌಲ್ಯಮಾಪನವು ನವೆಂಬರ್ 15 ರಿಂದ ಪ್ರಾರಂಭವಾಗಲಿದ್ದು, ಡಿಸೆಂಬರ್ 14 ರವರೆಗೆ ಮುಂದುವರೆಯಲಿದೆ. ಈ ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ವಿಂಟರ್ ಶಾಲೆಗಳಿಗೆ ಮಾತ್ರ ಎಂದು ಸಂಬಂಧಿತ ಸೂಚನೆಯ ಮೂಲಕ CBSE ಹೇಳಿದೆ. ಅಂದರೆ, ನಿಯಮಿತ ಅವಧಿಗಳನ್ನು ಹೊಂದಿರುವ ಶಾಲೆಗಳಿಗೆ ಈ ಪರೀಕ್ಷೆಯ ವೇಳಾಪಟ್ಟಿ ಅನ್ವಯಿಸುವುದಿಲ್ಲ.
ಇದನ್ನೂ ಓದಿ-Viral Video: ಬಾಯಿಯಿಂದ ವಿಷ ಉಗುಳುತ್ತಿರುವ ಹಾವನ್ನು ಎಲ್ಲಾದರೂ ನೋಡಿದ್ದೀರಾ... ವಿಡಿಯೋ ನೋಡಿ
CBSE ಈ ಸೂಚನೆಗಳನ್ನು ವಿಂಟರ್ ಬೌಂಡ್ ಶಾಲೆಗಳಿಗೆ ನೀಡಿದೆ
ಜನವರಿ ತಿಂಗಳಲ್ಲಿ ವಿಂಟರ್ ಬೌಂಡ್ ಶಾಲೆಗಳನ್ನು ಮುಚ್ಚುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು CBSE ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಧಿಕೃತ ಹೇಳಿಕೆಯಲ್ಲಿ, ಸಿಬಿಎಸ್‌ಇ ಎಲ್ಲಾ ವಿಂಟರ್ ಬೌಂಡ್ ಶಾಲೆಗಳಿಗೆ ಪ್ರಾಯೋಗಿಕ ಪರೀಕ್ಷೆಯ ಪ್ರಾರಂಭದ ದಿನಾಂಕದಿಂದ ಏಕಕಾಲದಲ್ಲಿ ಎಲ್ಲಾ ಪ್ರಾಯೋಗಿಕ ಪರೀಕ್ಷೆಗಳು, ಪ್ರಾಜೆಕ್ಟ್ ವರ್ಕ್ ಮತ್ತು ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಅಪ್‌ಲೋಡ್ ಮಾಡಲು ನಿರ್ದೇಶಿಸಿದೆ ಎಂದು ಹೇಳಲಾಗಿದೆ. 10ನೇ ಮತ್ತು 12ನೇ ತರಗತಿಯ ಎಲ್ಲಾ ಪ್ರಾಯೋಗಿಕ ಪರೀಕ್ಷೆಗಳು, ಪ್ರಾಜೆಕ್ಟ್‌ಗಳು ಮತ್ತು ಆಂತರಿಕ ಮೌಲ್ಯಮಾಪನಗಳ ಅಂಕಗಳನ್ನು ಅಪ್‌ಲೋಡ್ ಮಾಡುವುದು ಆಯಾ ಅಧಿವೇಶನದ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ-Viral Video: ಫ್ಯಾನ್ ಆಫ್ ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಚಪ್ಪಲಿಯಿಂದ ಪಟ ಪಟ ಅಂತಾ ಏಟು ಕೊಟ್ಟ ಮಹಿಳೆ!!
ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುವುದಿಲ್ಲ - CBSE
ಈ ದಿನಾಂಕಗಳ ವಿಸ್ತರಣೆಯನ್ನು ಪರಿಗಣಿಸಲಾಗುವುದಿಲ್ಲ ಎಂದು CBSE ಹೇಳಿದೆ. 10 ಮತ್ತು 12 ನೇ ತರಗತಿಯಲ್ಲಿ 20 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದರೆ, ಒಂದು ದಿನದಲ್ಲಿ ಎರಡು ಅಥವಾ ಮೂರು ಅವಧಿಗಳಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಮಂಡಳಿಯು ವಿಂಟರ್ ಬೌಂಡ್ ಶಾಲೆಗಳಿಗೆ ನಿರ್ದೇಶಿಸಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.