Viral News: ವಿಶ್ವ ದಾಖಲೆ ಬರೆಯಲು, ಸತತ 2 ದಿನ ಒಂದೇ ಪೋಸಿಶನ್ ನಲ್ಲಿ ನಿಂತು ಈ ಜೋಡಿ ಮಾಡಿದ್ದೇನು ನೀವೇ ಓದಿ
Trending News: ಸತತ ಎರಡು ದಿನಗಳ ಕಾಲ ಪರಸ್ಪರರನ್ನು ಸ್ಮೂಚ್ ಮಾಡುತ್ತಾ 58 ಗಂಟೆಗಳವರೆಗೆ ಒಂದೇ ಪೋಸಿಶನ್ ನಲ್ಲಿ ನಿಂತಿತ್ತು ಈ ಜೋಡಿ. ಈ ಅವಧಿಯಲ್ಲಿ ಅವರಿಗೆ ಸ್ಟ್ರಾ ಮೂಲಕ ನೀರು ಮತ್ತು ಪಾನೀಯವನ್ನು ಸೇವಿಸಲು ಅವಕಾಶ ನೀಡಲಾಗಿತ್ತು.
Bizarre Viral Content: ನೀವು ಹಲವು ಚಿತ್ರ ವಿಚಿತ್ರ ದಾಖಲಾಗಳ ಬಗ್ಗೆ ಕೇಳಿರಬಹುದು. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ನಿಮಗೆ ಇಂತಹ ಅನೇಕ ವಿಶಿಷ್ಟ ಮತ್ತು ವಿಚಿತ್ರ ದಾಖಲೆಗಳು ದಾಖಲಾಗಿವೆ. ವೇಗವಾಗಿ ತಿನ್ನುವುದರಿಂದ ಹಿಡಿದು ವೇಗವಾಗಿ ಅಡುಗೆ ಮಾಡುವವರೆಗೆ, ನೀವು ಹಲವು ದಾಖಲೆಗಳನ್ನು ಅದರಲ್ಲಿ ನೋಡಬಹುದು. ಇಂತಹುದೇ ಒಂದು ವಿಚಿತ್ರ ದಾಖಲೆಯ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇದನ್ನು ಕೇಳಿದರೆ, ನೀವೂ ಕೂಡ ಒಂದು ಕ್ಷಣ 'ಅದ್ಹೇಗೆ ಸಾಧ್ಯ' ಅಂತ ಹೇಳಿ ನಿಬ್ಬೇರಗಾಗುವಿರಿ ಮತ್ತು ಆಶ್ಚರ್ಯವ್ಯಕ್ತಪಡಿಸುವಿರಿ.
ಇದನ್ನೂ ಓದಿ-Viral Video: ಜುಟ್ಟು ಎಳೆದಾಡಿಕೊಂಡು ಪರಸ್ಪರರಿಗೆ ಗೂಸಾ ಕೊಟ್ಟ ಹುಡುಗಿಯರು.. ಕಾರಣ ಏನು?
ವಾಸ್ತವದಲ್ಲಿ Ekkachai Tiranarat ಹಾಗೂ Laksana Tiranarat ಹೆಸರಿನ ಈ ಜೋಡಿ ಅತ್ಯಂತ ದೀರ್ಘ ಕಾಲದವರೆಗೆ ಪರಸ್ಪರರಿಗೆ ಮುತ್ತಿಕ್ಕಿದ ದಾಖಲೆ ನಿರ್ಮಿಸಿದೆ. ಈ ಜೋಡಿಯ ಹೆಸರು ಇದೀಗ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಾಗಿದೆ. ತಿರಾನರತ್ ದಂಪತಿಯ ಈ ಮುತ್ತಿನ ದಾಖಲೆ ಸಮಯ 58 ಗಂಟೆ, 35 ನಿಮಿಷ, 58 ಸೆಕೆಂಡುಗಳು. ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಪ್ರೇಮಿಗಳ ದಿನದಂದು ಆಯೋಜಿಸಿದ್ದ ಕಿಸ್ಸಾಥಾನ್‌ನಲ್ಲಿ ತಿರಾನರತ್ ದಂಪತಿ ಈ ದಾಖಲೆ ನಿರ್ಮಿಸಿದೆ. ಪ್ರೇಮಿಗಳ ದಿನದಂದು ಆಯೋಜಿಸಲಾದ Kissathonನಲ್ಲಿ ಇತರ ಜೋಡಿಗಳು ಸಹ ಅವರೊಂದಿಗೆ ಭಾಗವಹಿಸಿದ್ದರು. ಕೆಲ ದಂಪತಿಗಳು ಸೋಲನ್ನೋಪ್ಪಿಕೊಂಡು ಸ್ಪರ್ಧೆಯಿಂದ ನಿರ್ಗಮಿಸಿದರೆ, ಇನ್ನೂ ಕೆಲ ದಂಪತಿಗಳು ನಿಶ್ಯಕ್ತಿಯ ಕಾರಣ ಮೂರ್ಛೆ ಹೋಗಿದ್ದಾರೆ.
ಇದನ್ನೂ ಓದಿ-Viral Video: ಸಾರ್ವಜನಿಕರ ಎದುರೆ ವಧುವಿನ ಜೊತೆ ವರ ಮಾಡಿದ ಈ ಕೃತ್ಯ, ನಂತರ ನಡೆದಿದ್ದು ... ತಾಂಡವ
ಈ ಸ್ಪರ್ಧೆಯಲ್ಲಿ ಹಲವು ನಿಯಮಗಳಿದ್ದವು. ದಂಪತಿಗಳು ಸಂಪೂರ್ಣ ಅವಧಿಯವರೆಗೆ ನಿಂತುಕೊಳ್ಳಬೇಕು. ಅವರು ಸ್ಮೂಚ್ ಅನ್ನು ಮುರಿಯದೆ ಸ್ಟ್ರಾ ಮೂಲಕ ನೀರು ಮತ್ತು ದ್ರವವನ್ನು ತೆಗೆದುಕೊಳ್ಳಬಹುದು. ಅವರಿಗೆ ಮಧ್ಯದಲ್ಲಿ ಸ್ಮೂಚ್ ಅನ್ನು ಮುರಿಯಲು ಅವಕಾಶವಿರಲಿಲ್ಲ, ಇಲ್ಲದಿದ್ದರೆ ಅವರು ಸ್ಪರ್ಧೆಯಿಂದ ನಿರ್ಗಮಿಸಬೇಕು. ಅವರು ಚುಂಬಿಸುತ್ತಲೇ ಅವರು ಶೌಚಾಲಯಕ್ಕೆ ಹೋಗಬೇಕು. ಥಾಯ್ಲೆಂಡ್‌ನ ಈ ದಂಪತಿ ದಾಖಲೆ ನಿರ್ಮಿಸಿ 2 ಲಕ್ಷದ 69 ಸಾವಿರ ರೂಪಾಯಿಗೂ ಹೆಚ್ಚು ಬಹುಮಾನ ಪಡೆದಿದ್ದಾರೆ. ಇದಕ್ಕಾಗಿ ಅವರು 2 ವಜ್ರದ ಉಂಗುರಗಳನ್ನು ಸಹ ಪಡೆದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.