ಬಿರು ಬೇಸಿಗೆಯಲ್ಲಿ ಒಂದು ಗುಟುಕು ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಪುಟ್ಟ ಬಾಲಕನೋರ್ವ ಬೀದಿ ಬದಿ ವ್ಯಾಪಾರ ಮಾಡುವ ಜನರಿಗೆ ನೀರಿನ ಬಾಟಲಿ ನೀಡಿ ದಾಹ ನೀಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: PM Kisan: ಇ-ಕೆವೈಸಿ ಕುರಿತು ಸರ್ಕಾರದ ಮಹತ್ವದ ಅಪ್ಡೇಟ್, ಯಾವಾಗ ಖಾತೆ ಸೇರಲಿದೆ 11ನೇ ಕಂತು?


ಅಯಾನ್ ಎಂಬ ಪುಟ್ಟ ಬಾಲಕ ಬೀದಿ ಬದಿ ತರಕಾರಿ, ಹಣ್ಣು ಹೂವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಜನರಿಗೆ ನೀರಿನ ಬಾಟಲಿಯನ್ನು ನೀಡಿದ್ದಾನೆ. ಬಾಲಕ ಈ ಕಾರ್ಯಕ್ಕೆ ಮನಸೋತ ಅಜ್ಜಿಯೊಬ್ಬರು ಆತನಿಗೆ ಆಶಿರ್ವಾದವನ್ನು ಸಹ ಮಾಡಿದ್ದಾರೆ. ಈ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. 


ಐಎಎಸ್‌ ಅಧಿಕಾರಿ ಅವನೀಶ್‌ ಎಂಬವರು ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, 2 ಗಂಟೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಮೆಚ್ಚುಗೆ ಸೂಚಿಸಿ ಕಮೆಂಟ್‌ ಜೊತೆಗೆ ಲೈಕ್‌ಗಳನ್ನು ಸಹ ಮಾಡಿದ್ದಾರೆ. 


ಇದನ್ನು ಓದಿ: Knowledge News: ರೂಪಾಯಿ ನೋಟಿನ ಈ ವೈಶಿಷ್ಟ್ಯದ ನಿಮಗೆ ಗೊತ್ತಾ? ಇಲ್ಲಿದೆ ಟಾಪ್‌ ಸೀಕ್ರೆಟ್‌...


ಸಹಾಯ ಮಾಡಬೇಕೆಂದರೆ ವಯಸ್ಸಿನ ಅವಶ್ಯಕತೆಯಿರುವುದಿಲ್ಲ ಎಂಬುದಕ್ಕೆ ಈ ವಿಡಿಯೋ ಉದಾಹರಣೆಯಂತಿದೆ. ಮನಸ್ಸಿದ್ದರೆ ಎಂತಹ ಕಾರ್ಯ ಬೇಕಾದರೂ ಮಾಡಬಹುದು. ಈ ಬಾಲಕನ ಕಾರ್ಯ ಇಂದಿನ ಪೀಳಿಗೆಗೆ ಮಾದರಿ ಎಂಬಂತಿದೆ. ದುಡ್ಡಿದ್ದರೆ ಸ್ವಲ್ಪವೂ ದಾನ ಮಾಡದೆ, ಸ್ವಾರ್ಥಕ್ಕಾಗಿ ಬದುಕುವ ಕೆಲವು ಜನರ ಮಧ್ಯೆ ಬಾಲಕನ ಮಾನವೀಯ ಕಾರ್ಯ ಮೆಚ್ಚುವಂತಹದ್ದೇ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.