‘ಲೂಟಿಕೊರರು ಬಿಜೆಪಿ ಸರ್ಕಾರದ ಮಂತ್ರಿಗಳಾಗಿರುವಾಗ, ಕಳ್ಳರಾದವರೆಲ್ಲ ಪೊಲೀಸರಾಗುತ್ತಿದ್ದಾರೆ!’

ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನಾಚಾರಗಳು ಉತ್ತುಂಗಕ್ಕೆ ತಲುಪಿರುವ ಪರಿಣಾಮ ರಾಜ್ಯದಲ್ಲಿ ಭ್ರಷ್ಟರು, ಕಳ್ಳರು ಕಾನೂನು ಪಾಲಕರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

Written by - Zee Kannada News Desk | Last Updated : May 2, 2022, 04:11 PM IST
  • ಲೂಟಿಕೊರರೆಲ್ಲ ಬಿಜೆಪಿ ಸರ್ಕಾರದ ಮಂತ್ರಿಗಳಾಗಿರುವಾಗ, ಕಳ್ಳರಾದವರೆಲ್ಲ ಪೊಲೀಸರಾಗುತ್ತಿದ್ದಾರೆ!
  • ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನಾಚಾರಗಳು ಉತ್ತುಂಗಕ್ಕೆ ತಲುಪಿದ್ದು, ಭ್ರಷ್ಟರು, ಕಳ್ಳರು ಕಾನೂನು ಪಾಲಕರಾಗುತ್ತಿದ್ದಾರೆ
  • ಕಳ್ಳರನ್ನೇ ಪೊಲೀಸರನ್ನಾಗಿ ಆಯ್ಕೆ ಮಾಡಿದರೆ ಲೂಟಿಯೇ ಕಾನೂನುಬದ್ಧ ಆಗುವುದು ನಿಶ್ಚಿತ
‘ಲೂಟಿಕೊರರು ಬಿಜೆಪಿ ಸರ್ಕಾರದ ಮಂತ್ರಿಗಳಾಗಿರುವಾಗ, ಕಳ್ಳರಾದವರೆಲ್ಲ ಪೊಲೀಸರಾಗುತ್ತಿದ್ದಾರೆ!’ title=
ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಪ್ರಕರಣ ಸಂಬಂಧ ಬಗೆದಷ್ಟು ಅಕ್ರಮಗಳು ಹೊರಬರುತ್ತಿವೆ. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು, ರಾಜಕೀಯ ಕೆಸರೆರಚಾಟದಲ್ಲಿ ತೊಡಗಿವೆ. ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಬಿಜೆಪಿ ಸರ್ಕಾರ ನೇರವಾಗಿ ಭಾಗಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಕಾಂಗ್ರೆಸ್ ನಾಯಕರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ‘ಕೈ’ ಪಕ್ಷ ಆರೋಪಿಸುತ್ತಿದೆ.

ಪಿಎಸ್‍ಐ ಹಗರಣದ ಪ್ರಮುಖ ಆರೋಪಿ, ಕಿಂಗ್‍ಪಿನ್ ದಿವ್ಯಾ ಹಾಗರಗಿ, ಮಹಾಂತೇಶ್ ಪಾಟೀಲ್, ರುದ್ರೇಗೌಡ ಪಾಟೀಲ್ ಸೇರಿದಂತೆ ಲಕ್ಷ ಲಕ್ಷ ಲಂಚ ಕೊಟ್ಟು ಪಿಎಸ್‍ಐ ಆಗಿದ್ದ ಹಲವಾರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಲಂಚದ ಹಣಕ್ಕಾಗಿ ತಾವು ಹಗರಣದಲ್ಲಿ ಭಾಗಿಯಾಗಿರುವುದಾಗಿ ಈಗಾಗಲೇ ದಿವ್ಯಾ ಹಾಗರಗಿ ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣೆ ವೇಳೆ ಅವರು ಕೆಲ ಸ್ಫೋಟಕ ವಿಷಯಗಳನ್ನು ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಹಗರಣದ ಮೂಲ ಕೆಪಿಸಿಸಿ ಭ್ರಷ್ಟಾಧ್ಯಕ್ಷ & ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ: ಬಿಜೆಪಿ

ಹೊಸಕೋಟೆ ಬಳಿ ‘ರಕ್ತ ಚಂದನ’ ದೋಚಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತಾಗಿದ್ದ ಬೆಂಗಳೂರು ಕಮಿಷನರೇಟ್ ವ್ಯಾಪಿಯ ಹೆಡ್ ಕಾನ್ಸ್‍ಸ್ಟೆಬಲ್ ಮಮತೇಶ್ ಗೌಡ ಪಿಎಸ್‍ಐ ನೇಮಕಾತಿ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗಿ 27ನೇ ರ‍್ಯಾಂಕ್ ಪಡೆದಿರುವುದನ್ನು ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ವಿಚಾರಣೆಗೆಂದು ಶನಿವಾರ ಕಾರ್ಲ್‍ಟನ್ ಕಟ್ಟದಲ್ಲಿರುವ ಸಿಐಡಿ ಕಚೇರಿಗೆ ಬಂದಾಗ ಅಧಿಕಾರಿಗಳು 12 ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ. ಸೈಬರ್ ಠಾಣೆಯೊಂದರಲ್ಲಿ ಕಾನ್‍ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ ಗಂಜೇಂದ್ರ ಎಂಬಾತ ಅಕ್ರಮ ಎಸಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿರುವುದು ಗೊತ್ತಾಗಿದೆ.

ಪಿಎಸ್‍ಐ ನೇಮಕಾತಿ ಅಕ್ರಮ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ‘ಲೂಟಿಕೊರರೆಲ್ಲ ಬಿಜೆಪಿ ಸರ್ಕಾರದ ಮಂತ್ರಿಗಳಾಗಿರುವಾಗ, ಕಳ್ಳರಾದವರೆಲ್ಲ ಪೊಲೀಸರಾಗುತ್ತಿದ್ದಾರೆ!’ ಎಂದು ಆರೋಪಿಸಿದೆ. ‘ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನಾಚಾರಗಳು ಉತ್ತುಂಗಕ್ಕೆ ತಲುಪಿರುವ ಪರಿಣಾಮ ರಾಜ್ಯದಲ್ಲಿ ಭ್ರಷ್ಟರು, ಕಳ್ಳರು ಕಾನೂನು ಪಾಲಕರಾಗುತ್ತಿದ್ದಾರೆ. ಕಳ್ಳರನ್ನೇ ಪೊಲೀಸರನ್ನಾಗಿ ಆಯ್ಕೆ ಮಾಡಿದರೆ ಲೂಟಿಯೇ ಕಾನೂನುಬದ್ಧ ಆಗುವುದು ನಿಶ್ಚಿತ’ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.   

ಇದನ್ನೂ ಓದಿ: ಎಂಇಎಸ್ ಕಿರಾತಕರ ಬಗ್ಗೆ ಬಿಜೆಪಿ ಸರ್ಕಾರ ಮೃದುದೋರಣೆ ತಾಳಿದೆ: ಎಚ್‍ಡಿಕೆ ಆರೋಪ

ಬಿ.ಎಲ್.ಸಂತೋಷ್ ಯಜಮಾನಿಕೆ ಸ್ಥಾಪಿಸಿಕೊಳ್ಳಲಿ

‘ಈ ಸಮಾಜಕ್ಕಾಗಲಿ, ಬಿಜೆಪಿ ಪಕ್ಷಕ್ಕಾಗಲಿ ಕಿಂಚಿತ್ ಕೊಡುಗೆ ಇಲ್ಲದ ಬಿ.ಎಲ್.ಸಂತೋಷ್ ಎಂಬ ಅಪರಿಚಿತ ವ್ಯಕ್ತಿ ಬಿಜೆಪಿಯಲ್ಲಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಿಕೊಳ್ಳಲಿ, ಅದು ಬಿಜೆಪಿಯವರ ಕರ್ಮ! ಆದರೆ, ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವ ದೊಣ್ಣೆನಾಯಕನೂ ಅಲ್ಲ, ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಕಾಂಗ್ರೆಸ್ ಹೆಸರು ಹೇಳುವಷ್ಟು ಯೋಗ್ಯತೆ ಅವರಿಗಿಲ್ಲ’ವೆಂದು ಮತ್ತೊಂದು ಟ್ವೀಟ್‍ನಲ್ಲಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News