ನವದೆಹಲಿ: ಭಾರತದಲ್ಲಿ ಮದುವೆಯ ಸಂದರ್ಭದಲ್ಲಿ ವಿವಿಧ ಆಚರಣೆಗಳನ್ನು ನಡೆಸಲಾಗುತ್ತದೆ. ಈ ಪೈಕಿ ಕೆಲವು ಆಚರಣೆಗಳು ಹೃದಯಸ್ಪರ್ಶಿಯಾಗಿದ್ದರೆ, ಇನ್ನು ಕೆಲವು ಆಚರಣೆಗಳು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಹೆಚ್ಚಿನ ಆಚರಣೆಗಳು ವಧು ಮತ್ತು ವರರಿಗೆ ಸಂಬಂಧಿಸಿರುತ್ತವೆ. ಈ ರೀತಿಯ ಮದುವೆಯ ಆಚರಣೆಗಳನ್ನು ಜನರು ಬಹಳ ಆಸಕ್ತಿಯಿಂದ ವೀಕ್ಷಿಸಲು ಇಷ್ಟಪಡುತ್ತಾರೆ.


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರು ಶಾಕ್ ಆಗಿದ್ದಾರೆ. ಇದ್ಯಾವ ರೀತಿಯ ಆಚರಣೆ ಅಂತಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿಮಗೂ ಸಹ ಈ ವಿಡಿಯೋ ನೋಡಿದ್ರೆ ಖಂಡಿತ ಆಶ್ಚರ್ಯ ಉಂಟಾಗುತ್ತದೆ.


ಇದನ್ನೂ ಓದಿ: NPS : ಪ್ರತಿದಿನ ₹74 ಹೂಡಿಕೆ ಮಾಡಿ, ನಿವೃತ್ತಿ ನಂತರ ಮಿಲಿಯನೇರ್ ಆಗಿ!


ಧೂಳು ಲೆಕ್ಕಿಸದೆ ಕಾರಿನ ಹಿಂದೆ ಓಡಿದ ವಧು-ವರ!



ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಧು-ವರರು ಕಾರಿನ ಹಿಂದೆ ಓಡುತ್ತಿರುವುದನ್ನು ಕಾಣಬಹುದು. ವರನು ವಧುವಿನ ಕೈಯನ್ನು ಹಿಡಿದುಕೊಂಡಿದ್ದಾನೆ. ಧೂಳನ್ನು ಲೆಕ್ಕಸದೆ ಇಬ್ಬರೂ ಓಡುತ್ತಾ ಓಡುತ್ತಾ ಕಾರನ್ನು ಹಿಂಬಾಲಿಸಿದ್ದಾರೆ. ಅವರ ಹಿಂದೆ ಅನೇಕರು ಸಹ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮದುವೆ ಕಾರ್ಯಕ್ರಮ ಮುಗಿದ ಬಳಿಕ ಇಬ್ಬರು ಕಾರಿನಲ್ಲಿ ಕುಳಿತು ಹೋಗುವುದು ಬಿಟ್ಟು ಧೂಳಿನಲ್ಲಿ ಕಾರು ಹಿಂಬಾಲಿಸುತ್ತಿರುವುದನ್ನು ಕಂಡ ಅನೇಕರಿಗೆ ಆಶ್ಚರ್ಯವಾಗಿದೆ.


ನೆಟಿಜನ್‍ಗಳಿಗೆ ಕನ್ಫೂಸ್ ಆಗಿದೆ


ಈ ವಿಡಿಯೋ ನೋಡಿದ ಕೆಲವರು ಕಾರನ್ನು ಹಿಡಿಯಲು ಅವರು ಈ ರೀತಿ ಓಡುತ್ತಿರಬಹುದೇ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಇದು ಬೀಳ್ಕೊಡುವ ಸಮಯದಲ್ಲಿನ ಒಂದು ಆಚರಣೆಯಾಗಿದೆ ಅಂತಾ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು rkkhan6549 ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿವರೆಗೆ ಈ ವಿಡಿಯೋವನ್ನು ಸುಮಾರು 80 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಧು-ವರರು ಹಿಗ್ಯಾಕೆ ಕಾರಿನ ಹಿಂದೆ ಓಡಿ ಹೋಗುತ್ತಿದ್ದಾರೆ ಅಂತಾ ನೆಟಿಜನ್‍ಗಳು ಕನ್ಫೂಸ್ ಆಗಿದ್ದಾರೆ.   


ಇದನ್ನೂ ಓದಿ: Viral Video: ವರಮಾಲಾ ಕಾರ್ಯಕ್ರಮದಲ್ಲಿ ಆಯತಪ್ಪಿದ ವಧು, ವರ ಮಾಡಿದ್ದೇನು ನೋಡಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.