ಬೆಂಗಳೂರು: ಬೆಕ್ಕುಗಳು ತುಂಬಾ ಚುರುಕಾಗಿರುತ್ತವೆ. ಹಾರುವ ಹಕ್ಕಿಗಳನ್ನೂ ಹಿಡಿಯುವ ಕೌಶಲ ಬೆಕ್ಕುಗಳಿಗೆ ಇರುತ್ತದೆ. ಆದರೆ ಕೆಲವೊಮ್ಮೆ ಬೆಕ್ಕುಗಳು ಕೂಡ ಮೂರ್ಖರಾಗುತ್ತವೆ. ಹೌದು, ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಧೈರ್ಯಶಾಲಿ ಹಕ್ಕಿಯೊಂದು ಸುಲಭವಾಗಿ ಮೂರು ಬೆಕ್ಕುಗಳಿಗೆ ಚಳ್ಳೆಹಣ್ಣು ತಿನ್ನಿಸಿದೆ. ಹೇಗೆ ಎಂಬುದನ್ನು ನೀವು ವೀಡಿಯೊವನ್ನು ನೋಡುವ ಮೂಲಕ ತಿಳಿದುಕೊಳ್ಳಬಹುದು. ವಾಸ್ತವದಲ್ಲಿ ಏನಾಗಿದೆ ಎಂದರೆ ಆ ಹಕ್ಕಿ ನೆಲದ ಮೇಲೆ ಕುಳಿತಾಗ ಮೂರು ಬೆಕ್ಕುಗಳು ಅದನ್ನು ಸುತ್ತುವರೆದಿವೆ. ಹಠಾತ್ ಎದುರಾದ ಈ ಪರಿಸ್ಥಿತಿ ನೋಡಿ ಗುಬ್ಬಚ್ಚಿ ಕಿಂಚಿತ್ತು ಅಲುಗಾಡದೆ ಕಲ್ಲಿನಂತೆ ಕುಳಿತುಕೊಂಡಿದೆ ಮತ್ತು ಅವಕಾಶವನ್ನು ಬಳಸಿಕೊಂಡು ಅಲ್ಲಿಂದ ಹಾರಿಹೋಗಿದೆ. (Viral News In Kannada)


COMMERCIAL BREAK
SCROLL TO CONTINUE READING

ಕೆಲ ಕ್ಷಣ ಕಲ್ಲಾಗಿ ಕುಳಿತ ಗುಬ್ಬಚ್ಚಿ 
ಈ ವಿಡಿಯೋ 1.45 ನಿಮಿಷಗಳದ್ದು. ಇದರಲ್ಲಿ ಹಕ್ಕಿಯೊಂದು ನೆಲದ ಮೇಲೆ ಕುಳಿತಿರುವುದನ್ನು ನೀವು ನೋಡಬಹುದು. ಮತ್ತು ಅದು  ಸಂಪೂರ್ಣ ಸ್ತಬ್ಧವಾಗಿದೆ. ಸಾಕಷ್ಟು ಹೊತ್ತು ಬೆಕ್ಕುಗಳು ಕೂಡ ಅದನ್ನು ಒಂದು ವಿಗ್ರಹ ಎಂದೇ ಭಾವಿಸುತ್ತವೆ! ಇದೆ ಕಾರಣದಿಂದ ಅವು ಹಕ್ಕಿಯ ಹತ್ತಿರಕ್ಕೆ ಬಂದು ಅದರ ವಾಸನೆಯನ್ನು ಪದೇ ಪದೇ ನೋಡುತ್ತವೆ. ಅಷ್ಟೇ ಅಲ್ಲ ಅದರಲ್ಲಿನ ಒಂದು ಬೆಕ್ಕು ಅದನ್ನು ಮುಟ್ಟಿಕೂಡ ನೋಡುತ್ತದೆ. ಇಷ್ಟಾಗಿಯೂ ಕೂಡ ಹಕ್ಕಿ ಯಾವುದೇ ರಿಯಾಕ್ಷನ ನೀಡುವುದಿಲ್ಲ. 


ಹಕ್ಕಿ ತನ್ನ ಶೌರ್ಯವನ್ನು ಪ್ರದರ್ಶಿಸುತ್ತದೆ ಮತ್ತು ಕೊನೆಯವರೆಗೂ ಕಲ್ಲಿನಂತೆ ಸ್ಥಿರವಾಗಿ ಕುಳಿತುಕೊಳ್ಳುತ್ತದೆ. ಕೊನೆಗೆ ಅದಕ್ಕೆ ಅವಕಾಶ ಸಿಕ್ಕಾಗ ಫುರ್ರ್... ಅಂತ ಹಾರಿಹೋಗುತ್ತದೆ. ಬೆಕ್ಕುಗಳು ಕೂಡ ಅದನ್ನು ಹಿಡಿಯಲು ಜಿಗಿಯುತ್ತವೆ ಮತ್ತು ಅದನ್ನು ಹಿಡಿಯಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತವೆ ಆದರೆ ವಿಫಲವಾಗುತ್ತವೆ. ಅಂದಹಾಗೆ, ಈ ವೀಡಿಯೊವನ್ನು ನೋಡಿ ನಿಮ್ಮ ಅನಿಸಿಕೆ ಎಂದು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. 


ಇದನ್ನೂ ಓದಿ-ಮೆಟ್ರೊ ಬ್ರಿಡ್ಜ್ ಕೆಳಗೆ ಇಬ್ಬರು ಯುವತಿಯರ ಜೊತೆಗೆ ಶಾಲಾ ಬಾಲಕನ ಅಶ್ಲೀಲ ಕೃತ್ಯ... ವಿಡಿಯೋ ನೋಡಿ!


ಕಲ್ಲಿನಂತೆ ಕುಳಿತು ಪ್ರಾಣ ರಕ್ಷಿಸಿಕೊಂಡ ಗುಬ್ಬಚ್ಚಿ
ಈ ವೀಡಿಯೊವನ್ನು ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ @gunsnrosesgirl3 ಹ್ಯಾಂಡಲ್‌ನೊಂದಿಗೆ ಹಂಚಿಕೊಳ್ಳಲಾಗಿದೆ. 'ಬೆಕ್ಕು ಸ್ಟ್ಯಾಚೂ ಆಟ ಆಟುವ ಮೂಲಕ ಬೆಕ್ಕುಗಳ ಗುಂಪಿನಿಂದ ತನ್ನ ಪ್ರಾಣ ರಕ್ಷಿಸಿಕೊಂಡಿದೆ' ಎಂಬ ಶೀರ್ಷಿಕೆ ಅದಕ್ಕೆ ನೀಡಲಾಗಿದೆ. ಈ ವಿಡಿಯೋ ಗೆ ಇದುವರೆಗೆ  77 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 45 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ.


ಇದನ್ನೂ ಓದಿ-ಪ್ರಧಾನಿ ಮೋದಿ-ಧೋನಿ-ಯುವರಾಜ್-ಕೆಜ್ರಿವಾಲ್ ಧ್ವನಿಯಲ್ಲಿ 'ಚನ್ನಾ ಮೇರೆಯಾ...' ಹಾಡನ್ನು ಎಂದಾದರೂ ಕೇಳಿದ್ದೀರಾ? ಇಲ್ಲಿ ಕೇಳಿ!


ಎಂಟು ನೂರಕ್ಕೂ ಹೆಚ್ಚು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ವಿಡಿಯೋಗೆ ಕಾಮೆಂಟ್ ಮಾಡಿದ ಓರ್ವ ವ್ಯಕ್ತಿ- 'ವೀಡಿಯೊ ಮಾಡಿದ ವ್ಯಕ್ತಿ ಏಕೆ ಪಕ್ಷಿಗೆ ಸಹಾಯ ಮಾಡಲಿಲ್ಲ' ಎಂದು ಪ್ರಶ್ನಿಸಿದ್ದಾರೆ. ಮತ್ತೊರ್ವ ವ್ಯಕ್ತಿ ನಿಮ್ಮ ಕಷ್ಟದ ಸಮಯದಲ್ಲಿ ನೀವು ತಾಳ್ಮೆಯಿಂದಿರಿ ಎಂಬ ಉತ್ತಮ ಸಂದೇಶವನ್ನು ಈ ವೀಡಿಯೊ ನೀಡುತ್ತದೆ.  ಏಕೆಂದರೆ ಕಷ್ಟೆಗಳು ಕೆಲ ಸಮಯದ ನಂತರ ಇರುವುದಿಲ್ಲ ಎಂದು ಇತರರು ಹೇಳಿದ್ದಾರೆ. ಕೆಲವರು ತಮಾಷೆಯ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.


ವೈರಲ್ ವಿಡಿಯೋ ಇಲ್ಲಿದೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ