ಚಲಿಸುತ್ತಿರುವ ರೈಲಿನಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ, ವಿಡಿಯೋ ನೋಡಿ!

Viral Train Marriage Video: ಚಲಿಸುತ್ತಿರುವ ರೈಲಿನಲ್ಲಿಯೇ ಯುವ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಸಿಂಧೂರ ಹಚ್ಚುವುದರಿಂದ ಹಿಡಿದು ಮಂಗಳಸೂತ್ರ ಮತ್ತು ಮಾಲೆ ಹಾಕುವವರೆಗೆ ಈ ದಂಪತಿಗಳು ರೈಲಿನಲ್ಲಿಯೇ ಸಂಪೂರ್ಣ ವಿವಾಹ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ, ಆದರೆ ಸಪ್ತಪದಿ ತುಳಿಯುವುದು ಅವರಿಂದ ಸಾಧ್ಯವಾಗಿಲ್ಲ. (Viral News In Kannada)

Written by - Nitin Tabib | Last Updated : Nov 27, 2023, 08:09 PM IST
  • ಇದೇ ವೇಳೆ, ವೀಡಿಯೊವನ್ನು ನೋಡಿದ ನಂತರ, ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.
  • ‘ಇದನ್ನೆಲ್ಲ ಮಾಡಿಸುವಲ್ಲಿ ನಮ್ಮ ಭಾರತದ ಸಾರ್ವಜನಿಕರೇ ಮುಂಚೂಣಿಯಲ್ಲಿರುತ್ತಾರೆ’ ಎಂದು ಯಾರೋ ಬರೆದುಕೊಂಡಿದ್ದರೆ,
  • ‘ಇನ್ನೂ ಪರಸ್ಪರರ ಕೈ ಎಂದಿಗೂ ಬಿಡಬೇಡಿ’ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಚಲಿಸುತ್ತಿರುವ ರೈಲಿನಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ, ವಿಡಿಯೋ ನೋಡಿ!  title=

ನವದೆಹಲಿ: ಇಂದಿಗೂ ಭಾರತದ ಬಹುತೇಕ ಕುಟುಂಬಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಗಳು ನಡೆಯುತ್ತವೆ. ಅಂದರೆ ಮನೆಯವರ ಇಚ್ಛೆಯಂತೆ ಮದುವೆಗಳು ನಡೆಯುತ್ತವೆ. ಈಗ ದೇಶದಲ್ಲಿ ಸಾಕಷ್ಟು ಪ್ರೇಮವಿವಾಹಗಳು ನಡೆಯುತ್ತಿದ್ದರೂ, ಅದರಲ್ಲಿ ಕುಟುಂಬದ ಸದಸ್ಯರ ಒಪ್ಪಿಗೆಯೂ ಇರುತ್ತದೆ, ಆದರೆ ಕೆಲವೊಮ್ಮೆ ಕುಟುಂಬ ಸದಸ್ಯರಿಗೆ ಹುಡುಗ/ಹುಡುಗಿ  ಇಷ್ಟಪಡುವ ಹುಡುಗಿ ಅಥವಾ ಹುಡುಗನನ್ನು ಇಷ್ಟಪಡುವುದಿಲ್ಲ. ಹೀಗಿರುವಾಗ ಆ ಜೋಡಿಯ ವಿವಾಹದಲ್ಲಿ ಅಡಚನೆಗಳು ಎದುರಾಗುತ್ತವೆ. ಇಂತಹ ಸಂದರ್ಭಗಳು ಎದುರಾದಾಗ, ಅನೇಕ ಬಾರಿ ದಂಪತಿಗಳು ಓಡಿಹೋಗಿ ಮದುವೆಯಾಗುತ್ತಾರೆ. ಪ್ರಸ್ತುತ, ಅಂತಹ ಒಂದು ಮದುವೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿದೆ, ಇದರಲ್ಲಿ ದಂಪತಿ ಜೋಡಿಯೊಂದು ಚಲಿಸುತ್ತಿರುವ ರೈಲಿನಲ್ಲಿ ವಿವಾಹವಾಗುತ್ತಿರುವುದನ್ನು ನೀವು ನೋಡಬಹುದು. ಈ ಸಂದರ್ಭದಲ್ಲಿ ಅವರನ್ನು ನೋಡಲು ರೈಲಿನಲ್ಲಿ ಭಾರಿ ಜನಸಮೂಹವೇ ನೆರೆದಿದೆ. (Viral News In Kannada)

ಹುಡುಗಿಯ ಹಣೆಗೆ ಚಲಿಸುವ ರೈಲಿನಲ್ಲಿ ಹುಡುಗ ಹೇಗೆ ಸಿಂಧೂರವನ್ನು ತುಂಬಿದ್ದಾನೆ ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಇದಾದ ನಂತರ ಹುಡುಗಿ ರೈಲಿನಲ್ಲಿದ್ದ ಜನರ ಮುಂದೆ ಆತನನ್ನು ತಬ್ಬಿಕೊಳ್ಳುತ್ತಾಳೆ. ನಂತರ ಹುಡುಗನು ಅವಳ ಕೊರಳಿಗೆ ಮಂಗಳಸೂತ್ರವನ್ನು ಹಾಕುತ್ತಾನೆ ಮತ್ತು ನಂತರ ಇಬ್ಬರೂ ಸಹ ಪರಸ್ಪರರ ಕೊರಳಿಗೆ ಹಾರವನ್ನು ಹಾಕುತ್ತಾರೆ. ಇದನ್ನು ಮಾಡಿದ ನಂತರ, ಹುಡುಗಿ ಮತ್ತೊಮ್ಮೆ ಅವನನ್ನು ತಬ್ಬಿಕೊಳ್ಳುತ್ತಾಳೆ ಮತ್ತು ಅವನ ಪಾದಗಳನ್ನು ಸ್ಪರ್ಶಿಸುವುದನ್ನು ಸಹ ಕಾಣಬಹುದು. ರೈಲಿನಲ್ಲಿದ್ದ ಹಲವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸನ್ಸೋಲ್‌ನಿಂದ ಜಸಿದಿಹ್ ಮಾರ್ಗದ ನಡುವೆ ಈ ಘಟನೆ ನಡೆದಿದ್ದು, ಸ್ಥಳೀಯ ರೈಲಿನಲ್ಲಿ ಎಲ್ಲರ ಸಮ್ಮುಖದಲ್ಲಿ ದಂಪತಿಗಳು ವಿವಾಹವಾದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-ವಿಶಾಲ ಗಾತ್ರದ ಹಾವು ಹಿಡಿದ ಈ ಪೋರನ ಧೈರ್ಯ ಮೆಚ್ಚಲೇಬೇಕು... ಎದೆ ಝಲ್ ಎನ್ನಿಸುವಂತಿದೆ ಈ ವಿಡಿಯೋ!
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್ಸ್ಟಾಗ್ರಾಮ್ ನಲ್ಲಿ max_sudama_1999 ಹೆಸರಿನ ಐಡಿ  ಮೂಲಕ ಹಂಚಿಕೊಳ್ಳಲಾಗಿದೆ ಮತ್ತು 'ಚಲಿಸುತ್ತಿರುವ ರೈಲಿನಲ್ಲಿ ವಿವಾಹ ವಾಹ್ ವಾ ಎಂತಹ ಅದ್ಭುತ' ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋವನ್ನು ಇದುವರೆಗೆ 1 ಲಕ್ಷದ 48 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 3 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ-ನಡು ರಸ್ತೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಲಲನೆಯರು, ತುಂಟ ನಾಯಿ ಮಾಡಿದ್ದೇನು ನೀವೇ ನೋಡಿ!

ಇದೇ ವೇಳೆ, ವೀಡಿಯೊವನ್ನು ನೋಡಿದ ನಂತರ, ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ. ‘ಇದನ್ನೆಲ್ಲ ಮಾಡಿಸುವಲ್ಲಿ ನಮ್ಮ ಭಾರತದ ಸಾರ್ವಜನಿಕರೇ ಮುಂಚೂಣಿಯಲ್ಲಿರುತ್ತಾರೆ’ ಎಂದು ಯಾರೋ ಬರೆದುಕೊಂಡಿದ್ದರೆ, ‘ಇನ್ನೂ ಪರಸ್ಪರರ ಕೈ ಎಂದಿಗೂ ಬಿಡಬೇಡಿ’ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಅಂತೆಯೇ, ಕಾಮೆಂಟ್ ಮಾಡುವಾಗ, ಮೂರನೇ ಬಳಕೆದಾರರು ಈ ಮದುವೆಯನ್ನು 'ಇದು ಪ್ರೇಮ ವಿವಾಹವಲ್ಲ ಬದಲಿಗೆ 'ರೈಲು ವಿವಾಹ' ಎಂದು ಕರೆದಿದ್ದಾರೆ, ಇನ್ನೊಬ್ಬ ಬಳಕೆದಾರರು 'ಇದು ಭಾರತದಲ್ಲಿ ಮಾತ್ರ ನಡೆಯುತ್ತದೆ' ಎಂದು ಬರೆದುಕೊಂಡಿದ್ದಾರೆ.

ಈ ಅಪರೂಪ ವಿವಾಹದ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News