Viral Video: ನಟ ರಣ್‌ಬೀರ್ ಕಪೂರ್ ನೋಡಿ ಅಭಿಮಾನಿ ಮಾಡಿದ್ದೇನು ನೋಡಿ
ಬಾಲಿವುಡ್ ನಟ ರಣ್‌ಬೀರ್ ಕಪೂರ್ ಮಹಿಳಾ ಅಭಿಮಾನಿಯ ಜೊತೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರಣಬೀರ್ ಕಪೂರ್ ಗೆ ಮಹಿಳಾ ಅಭಿಮಾನಿ ‘ಐ ಲವ್ ಯೂ’ ಎಂದು ಹೇಳಿದ್ದಾರೆ.
ನವದೆಹಲಿ: ಬಾಲಿವುಡ್ ನಟ ರಣ್‌ಬೀರ್ ಕಪೂರ್ ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಈ ಪೈಕಿ ಅತಿಹೆಚ್ಚು ಹುಡುಗಿಯರೇ ಫ್ಯಾನ್ಸ್ ಇದ್ದಾರೆ. ಯಾವುದೇ ಕಾರ್ಯಕ್ರಮ ಅಥವಾ ಸಿನಿಮಾ ಪ್ರಚಾರಕ್ಕೆ ಹೋದಾಗ ರಣ್‌ಬೀರ್ ನೋಡಿ ಮಹಿಳಾ ಅಭಿಮಾನಿಗಳು ದಿಲ್‍ಖುಷ್ ಆಗುತ್ತಾರೆ. ಕೆಲವರು ನಟನನ್ನು ನೋಡಿದಾಕ್ಷಣವೇ ಅಳಲು ಶುರುಮಾಡಿಬಿಡುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಫುಟ್ಬಾಲ್ ಪಂದ್ಯದಲ್ಲಿ ರಣಬೀರ್
ರಣ್‌ಬೀರ್ ಕಪೂರ್ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ದುಬೈನಲ್ಲಿ ಎಮಿರೇಟ್ಸ್ ದುಬೈ ಜೊತೆಗೆ ನಡೆದ ಆಲ್ ಸ್ಟಾರ್ ಫುಟ್ಬಾಲ್ ಕ್ಲಬ್ ಇಂಟರ್ನ್ಯಾಷನಲ್ ಪಂದ್ಯದ ವಿಡಿಯೋ ಆಗಿದೆ. ಈ ಪಂದ್ಯದಲ್ಲಿ ರಣ್‌ಬೀರ್ ಕಪೂರ್ ಕೂಡ ಭಾಗವಹಿಸಿದ್ದರು. ಇದೇ ವೇಳೆ ಅವರನ್ನು ನೋಡಿದ ಅಭಿಮಾನಿ ಫುಲ್ ಖುಷಿಯಾಗಿದ್ದಾರೆ.
ಇದನ್ನೂ ಓದಿ: Video : ಮದುವೆ ಮಂಟಪದಲ್ಲೇ ಅದ್ಯಾಕೆ ಇಷ್ಟು ಸಿಟ್ಟು ಬಂತೋ ವರನಿಗೆ .! ವಧುವಿನ ಪಾಡು ಹೇಳತೀರದು
‘ಐ ಲವ್ ಯೂ’ ರಣ್‌ಬೀರ್ ಎಂದ ಅಭಿಮಾನಿ
ವೈರಲ್ ಆಗಿರುವ ವಿಡಿಯೋದಲ್ಲಿ ರಣ್‌ಬೀರ್ ಫುಟ್ಬಾಲ್ ಆಡಲು ಫೀಲ್ಡಿಗೆ ಹೋಗಲು ರೆಡಿಯಾಗಿರುವುದನ್ನು ನೀವು ಕಾಣಬಹುದು. ಈ ವೇಳೆ ರಣ್‌ಬೀರ್ ಅವರನ್ನು ನೋಡಿದ ಮಹಿಳಾ ಅಭಿಮಾನಿಗೆ ಖುಷಿ ತಡೆಯಲಾಗಿಲ್ಲ. ‘ಐ ಲವ್ ಯೂ’ ರಣ್‌ಬೀರ್ ಎಂದು ಆ ಮಹಿಳಾ ಅಭಿಮಾನಿ ಜೋರಾಗಿ ಕೂಗಿದ್ದಾರೆ. ಅಭಿಮಾನಿಯ ಧ್ವನಿಯನ್ನು ಕೇಳಿಸಿಕೊಂಡ ರಣ್‌ಬೀರ್ ಆಕೆಯತ್ತ ನೋಡಿ ಸ್ಮೈಲ್ ಮಾಡುತ್ತಾರೆ. ಬಳಿಕ ತಮ್ಮ ಕಣ್ಣುಗಳನ್ನು ಮಿಟುಕಿಸುತ್ತಾರೆ. ಇದರಿಂದ ಖುಷಿಯಾದ ಅಭಿಮಾನಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ವಿಡಿಯೋದಲ್ಲಿ ಹಲವು ತಾರೆಯರು
ಈ ವಿಡಿಯೋದಲ್ಲಿ ರಣ್‌ಬೀರ್ ಕಪೂರ್ ಜೊತೆಗೆ ಅಭಿಷೇಕ್ ಬಚ್ಚನ್ ಮತ್ತು ಕಾರ್ತಿಕ್ ಆರ್ಯನ್ ಕೂಡ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೂರಾರು ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ನಟನನ್ನು ಹೊಗಳಿದ್ದಾರೆ.
ಇದನ್ನೂ ಓದಿ: Viral News: ಜಮೀನಿಗೆ ಎಂಟ್ರಿ ಕೊಟ್ಟ 13 ಅಡಿ ಉದ್ದದ ಕಿಂಗ್ ಕೋಬ್ರಾ! ಆಮೇಲೇನಾಯ್ತು?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.