Video : ಮದುವೆ ಮಂಟಪದಲ್ಲೇ ಅದ್ಯಾಕೆ ಇಷ್ಟು ಸಿಟ್ಟು ಬಂತೋ ವರನಿಗೆ .! ವಧುವಿನ ಪಾಡು ಹೇಳತೀರದು

ಮದುವೆಗೆ ಸಂಬಂಧಪಟ್ಟ ವಿಡಿಯೋವನ್ನು ಇಲ್ಲಿ ಕಾಣಬಹುದು. ಇಲ್ಲಿ ಹಾರ ಬದಲಾಯಿಸುವ ವೇಳೆ ವಧು ವರರಿಬ್ಬರ ವರ್ತನೆಯೇ ಎಲ್ಲರ ಗಮನ ಸೆಳೆಯುತ್ತದೆ. ವಿವಾಹ ವಿಧಿ ವಿಧಾನಗಳು ನಡೆಯುತ್ತಿದ್ದ ವೇಳೆ ಇಬ್ಬರಿಗೂ ಅದೇನಾಯಿತು ಎಂದೇ ತಿಳಿಯುವುದಿಲ್ಲ.   

Written by - Ranjitha R K | Last Updated : May 10, 2022, 04:11 PM IST
  • ವೈರಲ್ ಆಯಿತು ಮದುವೆಯ ವಿಡಿಯೋ
  • ಹಾರ ಬದಲಾಯಿಸುವ ವೇಳೆ ವಧು ವರರ ಕೋಪ
  • ಭಾರೀ ಸಂಖ್ಯೆಯ ಜನರಿಂದ ವಿಡಿಯೋ ವೀಕ್ಷಣೆ
Video : ಮದುವೆ ಮಂಟಪದಲ್ಲೇ ಅದ್ಯಾಕೆ ಇಷ್ಟು  ಸಿಟ್ಟು ಬಂತೋ ವರನಿಗೆ .!  ವಧುವಿನ ಪಾಡು ಹೇಳತೀರದು  title=
Wedding viral video (file photo)

ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ಕಾಣಬಹುದು.  ಕೆಲವೊಮ್ಮೆ ವೇದಿಕೆಯಲ್ಲೇ ವಧು-ವರರು ಪರಸ್ಪರ ಶತ್ರುಗಳಂತೆ ನಡೆದುಕೊಳ್ಳುವುದನ್ನು ಅನೇಕ ಬಾರಿ ನಾವು ನೋಡಿದ್ದೇವೆ. ಇನ್ನು ಕೆಲವಡೆ ಮದುವೆಗೆ ಬಂದವರು , ಸ್ನೇಹಿತರು ಮದುವೆ ಮನೆಯಲ್ಲಿ ಗೊಂದಲ ಸೃಷ್ಟಿಸಿ ಬಿಡುತ್ತಾರೆ.   ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮದುವೆಗೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ.

ಇಲ್ಲಿ ಮದುವೆಯ ಶಾಸ್ತ್ರಗಳು ನಡೆಯುವುದನ್ನು ಕಾಣಬಹುದು. ನೋಡುವುದಕ್ಕೆ ಎಲ್ಲವೂ ಸರಿ ಇರುವಂತೆಯೇ ಕಾಣುತ್ತದೆ. ಆದರೆ ಹಾರ ಬದಲಾಯಿಸುವ ಶಾಸ್ತ್ರದ ವೇಳೆ ಮಾತ್ರ ವರಮಹಾಶಯನಿಗೆ ಅದೇನಾಗುತ್ತದೋ ಗೊತ್ತಿಲ್ಲ. ಇದ್ದಕ್ಕಿದ್ದಂತೆಯೇ ಕೋಪಗೊಂಡವನಂತೆ  ಕಾಣುತ್ತಾನೆ. ಹಾರ ಬದಲಾಯಿಸುವ ವೇಳೆ, ವರ ಕೋಪಗೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. 

ಇದನ್ನೂ ಓದಿ : Viral Video: ನೀವು ಹಿಂದೆಂದೂ ನೋಡಿರದ ಕೊರೊನಾ ಟೆಸ್ಟ್ ನ ಭಯಾನಕ ದೃಶ್ಯಗಳು ಇಲ್ಲಿವೆ!

ಹಾರ ಬದಲಾವಣೆ ವೇಳೆ ವರ ಸಿಡುಕಿಕೊಂಡು ನಿಂತಿರುವಂತೆ ಕಾಣುತ್ತಾನೆ. ವಧು ಹಾರ ಹಾಕಲು ಬರುವಾಗ ಇಷ್ಟವಿಲ್ಲ ಎಂಬಂತೆ ವರನ ವರ್ತನೆ ಕಾಣುತ್ತದೆ. ಕೊನೆಗೂ ಹೇಗೋ ಮಾಡಿ ವಧು ಹಾರ ಬದಲಾಯಿಸುವಲ್ಲಿ ಸಫಲಲಾಗುತ್ತಾಳೆ. ನಂತರ ವರ ಕೂಡಾ ವಧುವಿಗೆ ಹಾರ ಹಾಕುತ್ತಾನೆ. ಮಾತ್ರವಲ್ಲ  ಇಬ್ಬರು ಫೋಟೋಗೆ ಬೇರೆ ಫೋಸ್ ನೀಡುತ್ತಾರೆ. 

ವೀಡಿಯೊವನ್ನು ಇಲ್ಲಿ ವೀಕ್ಷಿಸಿ:

 

ಇದನ್ನೂ ಓದಿ  : Snake Viral Video : ಮಾನವ ಹತ್ತಿರ ಬರುತ್ತಿದ್ದಂತೆಯೇ ಸತ್ತು ಬಿದ್ದಂತೆ ನಟಿಸುವ ನಟ ಭಯಂಕರ ಹಾವು

ಮದುಮಗಳು ಕೂಡಾ ಹಾರ ಬದಲಾವಣೆ ವೇಳೆ ಅಷ್ಟೊಂದು ಸಮಾಧಾನದಲ್ಲಿರುವಂತೆ ಕಾಣುವುದಿಲ್ಲ. ವಧು ವರರ ಈ ವರ್ತನೆಯ ನಡುವೆಯೂ ಎರಡೂ ಕಡೆಯವರು ಮಾತ್ರ ಶಾಂತ ರೀತಿಯಗಿದ್ದುಕೊಂಡು ಶಾಸ್ತ್ರಗಳನ್ನು ಪೂರೈಸುತ್ತಾರೆ. ವಧು ವರರ ಮನೆಯವರ ನಡವಳಿಕೆಯೇ ಇಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಿಲೋಡೆಡ್ ಸೀರೀಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಮದುವೆಯ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ ವೀಡಿಯೋವನ್ನು 60 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಎಂದಿನಂತೆ ನೆಟ್ಟಿಗರು ಈ ವಿಡಿಯೋ ಬಗ್ಗೆ ತಮ್ಮ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News