ಬೆಂಗಳೂರು: ಮದ್ಯದ ಅಮಲಿನಲ್ಲಿ ಜನರು ತೂರಾಡಿ ಬೀಳುವುದನ್ನು  ನೀವು ಹಲವು ಬಾರಿ ನೋಡಿರಬಹುದು. ಆದರೆ ಪ್ರಾಣಿಯು ಆಲ್ಕೋಹಾಲ್ ಸೇವಿಸಿದ ನಂತರ ದುರ್ಬಲಗೊಂಡಾಗ ಮತ್ತು ಅದರ ಕಾಲುಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಎಂದಾದರೂ ನೋಡಿದ್ದೀರಾ? ಇತ್ತೀಚಿನ ದಿನಗಳಲ್ಲಿ, ಇದೇ ರೀತಿಯ ನಾಯಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ, ಇದನ್ನು ನೋಡಿ ಸಾರ್ವಜನಿಕರು ಸಾಕಷ್ಟು ಆಶ್ಚರ್ಯಚಕಿತರಾಗಿದ್ದಾರೆ. ವೈರಲ್ ಆಗಿರುವ ವೀಡಿಯೊ ಕ್ಲಿಪ್‌ನಲ್ಲಿ, ನಾಯಿಯು ಮನುಷ್ಯರಂತೆ ಮದ್ಯದ ಅಮಲಿನಲ್ಲಿ ಅತ್ತಿತ್ತ ಹೊರಳಾಡುತ್ತ ನಡೆಯುವುದನ್ನು ನೀವು ನೋಡಬಹುದು. (Viral News In Kannada)


COMMERCIAL BREAK
SCROLL TO CONTINUE READING

ಈ ವಿಡಿಯೋ ಅಮೆರಿಕದ ನ್ಯೂಜೆರ್ಸಿಯಿಂದ ಹೊರಹೊಮ್ಮಿದೆ. ಮನೆಯ ಒಡತಿ ಸ್ವಲ್ಪ ಹೊತ್ತು ಹೊರಗೆ ಹೋದಾಗ ಆಕೆಯ ಸಾಕುನಾಯಿ ಜಾಕ್ ಸಂಪೂರ್ಣ ವೋಡ್ಕಾ ಬಾಟಲಿಯನ್ನು ಗಟಕ್ ಅನ್ನಿಸಿದೆ. ಇದಾದ ನಂತರ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಯಿಗೆ ಏನಾಯಿತು ಎಂದು ನೀವೇ ನೋಡಬಹುದು. ಜಾಕ್‌ನ ಸ್ಥಿತಿ ತುಂಬಾ ಹದಗೆಟ್ಟಿದೆ ಮತ್ತು ಆತನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಮೇರಿ ಹೇಳಿದ್ದಾರೆ.


ಮೇರಿ ಮನೆಗೆ ಹಿಂದಿರುಗಿದ ತಕ್ಷಣ, ಜ್ಯಾಕ್ ಕುಡಿದಿರುವುದನ್ನು ಕಂಡಿರುವುದಾಗಿ ಹೇಳಿದ್ದಾಳೆ. ಇದಾದ ಬಳಿಕ  ನೆಲದ ಮೇಲೆ ಬಿದ್ದಿದ್ದ ಬೈಲಿಸ್ (ಮದ್ಯ) ಖಾಲಿ ಬಾಟಲಿಯನ್ನು ಕಂಡಿದಾಳೆ. ಇದೇ ವೇಳೆ, ವೋಡ್ಕಾ ಬಾಟಲಿಯು ಕೌಂಟರ್ ಮೇಲೆ ಬಿದ್ದಿರುವುದು ಕಂಡುಬಂದಿದೆ, ಅದರ ಮುಚ್ಚಳವು ಅರ್ಧ ತೆರೆದಿತ್ತು. ಆಗ ಮೇರಿ ತನ್ನ ಮುದ್ದಿನ ನಾಯಿಯನ್ನು ಕರೆದಿದ್ದಾರೆ, ಕುಡಿದು ನಡೆದುಕೊಂಡು ಹೋಗುವಾಗ ಅದು ಎಡವಿ ಬೀಳುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.


ಇದನ್ನೂ ಓದಿ-'ನನ್ನನ್ನು ಕಿಡ್ನ್ಯಾಪ್ ಮಾಡಲಾಗಿದೆ...' ವಿಮಾನದಲ್ಲಿ ಆಕಸ್ಮಿಕವಾಗಿ ಕಿರುಚಲಾರಂಭಿಸಿದ ಮಹಿಳೆ... ವಿಡಿಯೋ ನೋಡಿ!


ನಾಯಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿದೆ
ಇದನ್ನು ನೋಡಿದ ಮೇರಿ ಮೊದಲಿಗೆ ನಗಲು ಆರಂಭಿಸಿದ್ದಾಳೆ, ಆದರೆ ನಂತರ ಜಾಕ್‌ನ ಸ್ಥಿತಿಯ ಬಗ್ಗೆ ಅವಳು ತುಂಬಾ ಚಿಂತಿತಳಾಗಿದ್ದಾಳೆ. ಕೂಡಲೇ ಅನಿಮಲ್ ಪಾಯಿಸನಿಂಗ್ ಸೆಂಟರ್ ಸಹಾಯವಾಣಿಗೆ ಕರೆ ಮಾಡಿ ಪಶು ವೈದ್ಯರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೇರಿ ಪ್ರಕಾರ, ಜಾಕ್ ಅನ್ನು ರಾತ್ರಿಯಿಡೀ ವೈದ್ಯರ ಆರೈಕೆಯಲ್ಲಿ ಕಳೆಯಬೇಕಾದ ಕಾಲ ಎದುರಾಗಿದ್ದು, ನಂತರ ಆತನ ಸ್ಥಿತಿ ಸುಧಾರಿಸಿದೆ. 


ಇದನ್ನೂ ಓದಿ-ವರನ ಕೊರಳಲ್ಲಿ ನೋಟಿನ ವಿಶಾಲ ಗಾತ್ರದ ಮಾಲೆ, 'ಭಾಯಿ ಮೊದಲು ಮನೆ ಗೋಡೆ ಕಟ್ಟಿಸಿಕೊ' ಎಂದ ನೆಟ್ಟಿಗರು!


ಆಲ್ಕೋಹಾಲ್ ಸೇವನೆಯು ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ ಮತ್ತು ದೇಹದ ಉಷ್ಣತೆಯಲ್ಲಿ ಅಪಾಯಕಾರಿ ಕುಸಿತವನ್ನು ಉಂಟುಮಾಡಬಹುದು ಎಂದು ರಾಷ್ಟ್ರೀಯ ಅನಿಮಲ್ ಪಾಯಿಸನಿಂಗ್ ಸೆಂಟರ್ ಉಲ್ಲೇಖಿಸಿ ನ್ಯೂಸ್‌ವೀಕ್ ವರದಿ ಮಾಡಿದೆ. ಇದೇ ವೇಳೆ ತೀವ್ರವಾಗಿ ಅಮಲೇರಿದ ಪ್ರಾಣಿಗಳು ಉಸಿರಾಟದ ವೈಫಲ್ಯ ಮತ್ತು ರೋಗಗ್ರಸ್ತವಾಗುವಿಕೆಗಳನ್ನು ಸಹ ಅನುಭವಿಸುವ ಸಾಧ್ಯತೆ ಇದೆ.


ಮದ್ಯ ಸೇವಿಸಿ ತೂರಾಡುವ ನಾಯಿ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ