Trending Video: ಬಿಹಾರದ ರಾಜಧಾನಿ ಪಾಟ್ನಾದ ಮೆರೈನ್ ಡ್ರೈವ್ ದಿನನಿತ್ಯ ಸಾಕಷ್ಟು ಹೆಡ್ಲೈನ್ ಗಿಟ್ಟಿಸುತ್ತಿದೆ. ಸೋಶಿಯಲ್ ಮೀಡಿಯಾ ಇಂಫ್ಲೂಯೆನ್ಸರ್ ಗಳು ಇಲ್ಲಿ ಬೈಕ್ ಸ್ಟಂಟ್ ವೀಡಿಯೋಗಳನ್ನು ದಿನನಿತ್ಯ ಚಿತ್ರೀಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಹುಡುಗಿಯೊಬ್ಬಳ ಕಾರಣ  ಮರೈನ್ ಡ್ರೈವ್ ಸುದ್ದಿಯಲ್ಲಿದೆ (Viral Video In Kannada). ಮರೀನ್ ಡ್ರೈವ್‌ನಲ್ಲಿ ಬೈಕ್‌ನ ಹಿಂಬದಿಯಲ್ಲಿ ಹುಡುಗಿಯೊಬ್ಬಳು ಕುಳಿತಿದ್ದಾಳೆ. ಬೈಕ್ ಸವಾರ ಅತಿವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದಾನೆ. ಹುಡುಗಿ ಶಾರ್ಟ್ಸ್ ಧರಿಸಿದ್ದಾಳೆ. ಎರಡೂ ಕೈಗಳಲ್ಲಿ ಪಿಸ್ತೂಲ್ ಹಿಡಿದು ಎದ್ದು ನಿಂತು ರೀಲ್ ಗೆ ಪೋಸ್ ನೀಡುತ್ತಿದ್ದಾಳೆ.


ಐವತ್ತು ಕೋತಿಗಳ ಮಧ್ಯೆ ಒಂದು ಚಿರತೆ ಇತ್ತು... ಮುಂದೇನಾಯ್ತು ತಿಳಿಯಲು ಈ ವೈರಲ್ ವಿಡಿಯೋ ನೋಡಿ!


COMMERCIAL BREAK
SCROLL TO CONTINUE READING

ವಿಡಿಯೋದಲ್ಲಿ ಬಾಲಕಿ ಸ್ಟಂಟ್ ಮಾಡುತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು ನೋಡಿದ ಜನರು ನಿಬ್ಬೆರಗಾಗಿದ್ದಾರೆ.  ಈ ವೀಡಿಯೊವನ್ನು ಪಾಟ್ನಾದ ಮರೈನ್ ಡ್ರೈವ್ ವಿಡಿಯೋ ಎಂದು ಹೇಳಲಾಗುತ್ತಿದೆ. ಪೊಲೀಸರು ವಾಹನವನ್ನು ಗುರುತಿಸಿದ್ದಾರೆ ಎಂದು ಪಾಟ್ನಾದ ಸಿಟಿ ಎಸ್ಪಿ ಸೆಂಟ್ರಲ್ ವೈಭವ್ ಶರ್ಮಾ ಹೇಳಿದ್ದಾರೆ. ಸದ್ಯದಲ್ಲೇ ಈ ಪ್ರಕರಣದ ತನಿಖೆ ಆರಂಭವಾಗಲಿದೆ.


ಇದನ್ನೂ ಓದಿ-ಇಂತಹ ಕಾರ್ ಆಕ್ಸಿಡೆಂಟ್ ನೀವು ನಿಮ್ಮ ಲೈಫಲ್ಲೆ ನೋಡಿರ್ಲಿಕ್ಕಿಲ್ಲ, ಡೈರೆಕ್ಟ್ 2ನೇ ಮಹಡಿಗೆ ನುಗ್ಗಿದ ಕಾರ್ ಸ್ಪೀಡ್ ಎಷ್ಟಿತ್ತು ಗೊತ್ತಾ?


ಪಾಟ್ನಾದ ಮರೈನ್ ಡ್ರೈವ್ ರೀಲ್ ಹಬ್ ಆಗುತ್ತದೆ
ಪಾಟ್ನಾದ ಮರೈನ್ ಡ್ರೈವ್ ರೀಲ್ ಹಬ್ ಆಗಿ ಮಾರ್ಪಡುತ್ತಿದೆ. ಜನರು ಆಗಾಗ್ಗೆ ಇಲ್ಲಿಗೆ ಬಂದು ವೀಡಿಯೊಗಳನ್ನು ತಯಾರಿಸುತ್ತಿದ್ದಾರೆ. ಕಳೆದ ತಿಂಗಳಲ್ಲೂ ಬಾಲಕಿಯೊಬ್ಬಳು ಇಲ್ಲಿ ಪಿಸ್ತೂಲ್ ಬೀಸುತ್ತಿರುವುದು ಕಂಡು ಬಂದಿತ್ತು. ಹುಡುಗಿ ತನ್ನನ್ನು ಹಂಟರ್ ಕ್ವೀನ್ ಎಂದು ಬರೆದುಕೊಂಡಿದ್ದಳು. ಈ ಕಪಿಚೇಷ್ಟೆಗಾಗಿ  ಪೊಲೀಸರು ಆಕೆಗೆ 30,000 ರೂಪಾಯಿ ದಂಡವನ್ನೂ ವಿಧಿಸಿದ್ದರು. ಇದಾದ ಬಳಿಕ ಹುಡುಗಿ ತನ್ನ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಳು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ