ನವದೆಹಲಿ: ನೀವು ಸ್ಪೈಡರ್-ಮ್ಯಾನ್, ಬ್ಯಾಟ್‍ಮ್ಯಾನ್ ಸಿನಿಮಾಗಳನ್ನು ನೋಡಿರುತ್ತೀರಿ. ಆ ಸಿನಿಮಾಗಳಲ್ಲಿ ಅಪಾಯಕ್ಕೆ ಸಿಲುಕಿದ ಜನರನ್ನು ಕಣ್ಣುಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ರಕ್ಷಿಸುವ ಸಾಹಸಮಯ ದೃಶ್ಯಗಳನ್ನು ಕಂಡು ರೋಮಾಂಚಿತರಾಗಿರುತ್ತೀರಿ. ಅದೇ ರೀತಿಯ ಘಟನೆಯ ರಿಯಲ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಈ ಘಟನೆ ನಡೆದಿದ್ದು ಚೀನಾದ ಝೆಜಿಯಾಂಗ್ ಪ್ರಾಂತ್ಯದ ಟೊಂಗ್‌ಕ್ಸಿಯಾಂಗ್‌ನಲ್ಲಿ. 5ನೇ ಮಹಡಿಯ ಕಿಟಕಿಯಿಂದ ಬಿದ್ದ ಪುಟ್ಟ ಬಾಲಕಿಯನ್ನು ವ್ಯಕ್ತಿಯೊಬ್ಬರು ಸೂಪರ್ ಮ್ಯಾನ್‍ನಂತೆ ಕ್ಯಾಚ್ ಮಾಡಿ ರಕ್ಷಿಸಿದ್ದಾರೆ. ಈ ವಿಡಿಯೋ ಸಖತ್ ಸೌಂಡ್ ಮಾಡುತ್ತಿದ್ದು, ವ್ಯಕ್ತಿಯ ಸಮಯಪ್ರಜ್ಞೆಗೆ ನೆಟಿಜನ್‍ಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Bank Holidays: ಆಗಸ್ಟ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 13 ದಿನ ರಜೆ, ಪೂರ್ಣ ಪಟ್ಟಿ ಇಲ್ಲಿದೆ ನೋಡಿ


ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಚೀನಾದ ಸರ್ಕಾರಿ ಅಧಿಕಾರಿ ಲಿಜಿಯಾನ್ ಝಾವೋ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಬಾಲಕಿ ರಕ್ಷಿಸಿದ ಶೆನ್ ಡಾಂಗ್‍ಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.  


ಇದನ್ನೂ ಓದಿ: Mutual Funds Trick: ಕೇವಲ 167 ರೂ. ಉಳಿಸಿ & 11.33 ಕೋಟಿ ರೂ. ಪಡೆಯಿರಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.