Viral Video: 10 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಟೈ ಕಟ್ಟುವ ಎಪಿಕ್ ಹ್ಯಾಕ್ ಇಲ್ಲಿದೆ

Viral Video: ಕೆಲವರಿಗೆ ಟೈ ಕಟ್ಟುವುದು ಮಕ್ಕಳ ಆಟದಂತೆ.  ತುಂಬಾ ಸುಲಭವಾಗಿ ಕಟ್ಟುತ್ತಾರೆ. ಮತ್ತೆ ಕೆಲವರು ಟೈ ಕಟ್ಟಲು ಸಾಹಸವನ್ನೇ ಮಾಡುತ್ತಾರೆ. 

Written by - Chetana Devarmani | Last Updated : Jul 21, 2022, 12:23 PM IST
  • ಕೆಲವರಿಗೆ ಟೈ ಕಟ್ಟುವುದು ಮಕ್ಕಳ ಆಟದಂತೆ
  • ಕಡಿಮೆ ಅವಧಿಯಲ್ಲಿ ಟೈ ಕಟ್ಟುವ ಎಪಿಕ್ ಹ್ಯಾಕ್
  • ಈ ಸುಲಭ ಟ್ರಿಕ್ ಬಳಸಿ ನೀವು ಸಹ ಪಟ್ ಅಂತ ಟೈ ಕಟ್ಟಿ
Viral Video: 10 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಟೈ ಕಟ್ಟುವ ಎಪಿಕ್ ಹ್ಯಾಕ್ ಇಲ್ಲಿದೆ  title=
ಟೈ ಕಟ್ಟುವ ವಿಧಾನ

Viral Video: ಕೆಲವರಿಗೆ ಟೈ ಕಟ್ಟುವುದು ಮಕ್ಕಳ ಆಟದಂತೆ.  ತುಂಬಾ ಸುಲಭವಾಗಿ ಕಟ್ಟುತ್ತಾರೆ. ಮತ್ತೆ ಕೆಲವರು ಟೈ ಕಟ್ಟಲು ಸಾಹಸವನ್ನೇ ಮಾಡುತ್ತಾರೆ. ಟೈ ಕಟ್ಟುವುದು ಹೇಗೆ ಎಂದು ಇನ್ನೂ ತಿಳಿದಿಲ್ಲದ ಜನರಿಗೆ ಈ ವಿಡಿಯೋ ಅಚ್ಚರಿ ಮೂಡಿಸುತ್ತದೆ. ಈ ಸುಲಭವಾದ ಟ್ರಿಕ್ ಅನ್ನು ಬಳಸಿ ನೀವು ಸಹ ಪಟ್ ಅಂತ ಟೈ ಕಟ್ಟಿಕೊಳ್ಳಬಹುದು. 

ಇದನ್ನೂ ಓದಿ:WATCH: ಶಿರೂರು ಟೋಲ್ ಗೇಟ್ ಬಳಿ ಆಂಬ್ಯುಲೆನ್ಸ್ ಅಪಘಾತ, ಬೆಚ್ಚಿಬೀಳಿಸುತ್ತೆ ವಿಡಿಯೋ

ಮಿರೆಕ್ಸ್ ಮೋಸೆಜ್ ಎಂಬ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 9.3 ಮಿಲಿಯನ್ ವೀಕ್ಷಣೆಗಳೊಂದಿಗೆ ಈ ವಿಡಿಯೋ ಸಖತ್‌ ವೈರಲ್ ಆಗಿದೆ. ಸಾಧ್ಯವಾದಷ್ಟು ಸುಲಭವಾದ ಮತ್ತು ತ್ವರಿತ ರೀತಿಯಲ್ಲಿ ಟೈ ಅನ್ನು ಹೇಗೆ ಗಂಟು ಹಾಕಬೇಕೆಂದು ಕಲಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

 

 

ಲೈಫ್ ಹ್ಯಾಕ್ ನಿಮ್ಮ ಕೈಯಲ್ಲಿ ಟೈ ಅನ್ನು ಮೂರು ಬಾರಿ ಸುತ್ತಿಕೊಳ್ಳಿ ಮತ್ತು ನಂತರ ಈ ವಿಡಿಯೋದಲ್ಲಿ ತೋರಿಸಿರುವ ಸರಳ ತಂತ್ರದೊಂದಿಗೆ ಅಚ್ಚುಕಟ್ಟಾಗಿ ಗಂಟು ರಚಿಸುತ್ತದೆ. ಸುಲಭವಾದ ಗಂಟು ಹೇಗೆ ಮಾಡಬೇಕೆಂದು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಕೆಲವೇ ಕೆಲವು ಸೆಕೆಂಡುಗಳಲ್ಲಿ ಟೈ ಕಟ್ಟುವ ಅತ್ಯಂತ ಸುಲಭ ವಿಧಾನವನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. 

ಇದನ್ನೂ ಓದಿ:Viral video : ಮಿಂಚಿನ ವೇಗದಲ್ಲಿ ಬಂದ ರೈಲಿಗೆ ಎದುರಾದ ಮಹಿಳೆ ..! ಮುಂದೆ ?

ಈ ವಿಡಿಯೋಗೆ ಹಲವರು ಮೆಚ್ಚುಗೆ ಸೂಚಿಸಿದ್ದು, ಅನೇಕರು ಈ ವ್ಯಕ್ತಿಗೆ ಧನ್ಯಾವದ ತಿಳಿಸಿದ್ದಾರೆ. ಇಷ್ಟೋಂದು ಸುಲಭವಾಗಿ ಟೈ ಕಟ್ಟ ಬಹುದೇ ಎಂದು ಇದು ವರೆಗೆ ನಮಗೆ ತಿಳಿದಿರಲಿಲ್ಲ ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News