Shocking Snake Videos: ಹಾವುಗಳನ್ನು ಕಂಡರೆ ಬಹುತೇಕರು ಮಾರುದ್ದ ಓಡಿ ಹೋಗುತ್ತಾರೆ. ವಿಷಸರ್ಪಗಳನ್ನು ಕಂಡರೆ ಬಹುತೇಕರಿಗೆ ಭಯ ಉಂಟಾಗುತ್ತದೆ. ಪ್ರತಿದಿನ ಹಾವುಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ, ಇನ್ನೂ ಕೆಲವು ವಿಡಿಯೋಗಳು ನಂಬಲು ಸಾಧ್ಯವಾಗದಂತಿರುತ್ತವೆ. 


COMMERCIAL BREAK
SCROLL TO CONTINUE READING

ಹೆಬ್ಬಾವುಗಳು ಪ್ರಾಣಿಗಳನ್ನು ಮಾತ್ರವಲ್ಲ ಮನುಷ್ಯರನ್ನೂ ಜೀವಂತವಾಗಿ ನುಂಗುತ್ತವೆ. ಹಾವು ಕಂಡರೆ ಕಕ್ಕಾಬಿಕ್ಕಿಯಾಗುವ ಜನರ ನಡುವೆ ಒಬ್ಬ ವ್ಯಕ್ತಿ ಬೃಹತ್‌ ಹೆಬ್ಬಾವಿನೊಂದಿಗೆ ಬಾತ್‌ಟಬ್‌ನಲ್ಲಿ ಸ್ನಾನ ಮಾಡಿದ್ದಾನೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಜನರ ಗಮನ ಸೆಳೆಯುತ್ತಿವೆ.


ಇದನ್ನೂ ಓದಿ: ವಿಶ್ವದ 5 ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?



ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್‌ರೂಂನಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕುತ್ತಿಗೆ ಮೇಲೆ ಹಾಕಿಕೊಂಡು ಯಾವುದೇ ಭಯವಿಲ್ಲದೇ ಸ್ನಾನ ಮಾಡಿದ್ದಾನೆ. ಈ ವಿಡಿಯೋವನ್ನು @world_of_snakes ಎಂಬ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್‌ರೂಂನ ಶವರ್‌ಗೆ ಮೈಯೊಡ್ಡಿ ನಿಂತಿರುವುದನ್ನು ಕಾಣಬಹುದು. ಸ್ನಾನ ಮಾಡುವ ವೇಳೆ ತನ್ನ ಮೈಮೇಲೆ ದೈತ್ಯಾಕಾರದ ಹೆಬ್ಬಾವು ಹಾಕಿಕೊಂಡಿದ್ದಾನೆ. ಅದಕ್ಕೆ ನೀರು ಹಾಕುವ ಮೂಲಕ ಅದರ ಮೈಯನ್ನು ತೊಳೆಯುತ್ತಿದ್ದಾನೆ. ಈ ವೇಳೆ ಆತನ ಮುಖದಲ್ಲಿ ಯಾವುದೇ ರೀತಿಯ ಭಯ ಕಂಡುಬಂದಿಲ್ಲ.


ಭಯಾನಕ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ನೂರಾರು ಜನರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ವ್ಯಕ್ತಿಯ ಧೈರ್ಯವನ್ನು ಮೆಚ್ಚಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.  


ಇದನ್ನೂ ಓದಿ: ಈ 5 ದೇಶಗಳ ಜನರು ಮಾತ್ರ ಯಾವುದೇ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.