ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ವಧುವಿನ ಗ್ರ್ಯಾಂಡ್ ಎಂಟ್ರಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಪ್ರತಿ ದಂಪತಿಗಳು ತಮ್ಮ ದಿನವನ್ನು ವಿಶೇಷವಾಗಿಸಲು ಬಯಸುತ್ತಾರೆ ಮತ್ತು ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮುಂಚಿತವಾಗಿ ಮಾಡಿಕೊಳ್ಳುತ್ತಾರೆ. ಹಲವಾರು ಇದಕ್ಕಾಗಿಯೇ ಮುಂಚಿತವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ಅದಕ್ಕಾಗಿ ಲಕ್ಷಾಂತರ ರೂ. ಮೀಸಲಿಡುತ್ತಾರೆ.  ಕುಟುಂಬದ ಸದಸ್ಯರು ಕೂಡ ತಮ್ಮ ಮಕ್ಕಳ ಮದುವೆಯನ್ನು ಆಡಂಬರ ಮತ್ತು ಪ್ರದರ್ಶನದಿಂದ ನಡೆಯಬೇಕೆಂದು ಬಯಸುತ್ತಾರೆ, ಆದರೆ ಅನೇಕ ಬಾರಿ ನಡೆದುಹೋಗುವ ಕೆಲ ಸಂಗತಿಗಳು ಜನರ ಭಾರಿ ಟ್ರೋಲ್ ಗೆ ಕಾರಣವಾಗುತ್ತವೆ. ಇತ್ತೀಚೆಗಿನ ದಿನಗಳಲ್ಲಿ ಅಂತಹುದೇ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಗುತ್ತಿದ್ದು, ಅದನ್ನು ನೋಡಿದ ನೆಟ್ಟಿಗರ ಪಿತ್ತ ನೆತ್ತಿಗೇರಿ ಮಾತನಾಡಿದೆ . ಅಷ್ಟಕ್ಕೂ ನಡೆದಿದ್ದೇನು ಅಂತೀರಾ?. (Viral News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಪ್ರೀವೇಡ್ಡಿಂಗ್ ಷೂಟ್ ವೇಳೆ ವಧು-ವರರ ಮಧ್ಯೆ ಬಂದ ಹಾವು, ಬೆಚ್ಚಿಬಿದ್ದ ಜೋಡಿ ಮಾಡಿದ್ದೇನು ನೀವೇ ನೋಡಿ!


ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಅನೇಕ ಮಹಿಳೆಯರು ಗಾಳಿಯಲ್ಲಿ ನೇತಾಡುತ್ತಿರುವುದನ್ನು ನೀವು ನೋಡಬಹುದು ಮತ್ತು ಅವರೆಲ್ಲರ ಕೈಯಲ್ಲಿ ಪೂಜೆಯ ತಟ್ಟೆ ಹಿಡಿದುಕೊಂಡಿದ್ದಾರೆ. ಅದರಲ್ಲಿ ವಧು ಮತ್ತು ವರನ ಉಂಗುರಗಳಿವೆ. ಶ್ವೇತವರ್ಣದ ಬಟ್ಟೆಗಳನ್ನು ಧರಿಸಿದ ಮಹಿಳೆಯರು ಆಶ್ಚರ್ಯಕರ ರೀತಿಯಲ್ಲಿ ಮೇಲಿನಿಂದ ನಿಧಾನವಾಗಿ ಕೆಳಗೆ ಇಳಿಯುತ್ತಿದ್ದಾರೆ., ದಂಪತಿಗಳಿಗೆ ನಿಶ್ಚಿತಾರ್ಥದ ಉಂಗುರಗಳನ್ನು ಪ್ರಸ್ತುತಪಡಿಸುವ 'ಹಾರುವ ದೇವತೆಗಳ' ಪಾತ್ರವನ್ನು ಇವರು ನಿರ್ವಹಿಸುತ್ತಿದ್ದಾರೆ. ಈ ಥೀಮ್ ಅನ್ನು ಸ್ವರ್ಗದಂತೆ ಅಲಂಕರಿಸಲಾಗಿದೆ, ಇದರಿಂದ ವಧು ಮತ್ತು ವರರು ಅಲ್ಲಿಗೆ ಬಂದಾಗ, ಅವರಲ್ಲಿ ವಿಶೇಷ ಭಾವನೆ ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.


ಇದನ್ನೂ ಓದಿ-ಕಿಸ್ ಮಾಡಲು ತಡೆದಿದ್ದಕ್ಕೆ ಬಾಯ್ ಫ್ರೆಂಡ್ ನನ್ನು ಹಿಗ್ಗಾಮುಗ್ಗಾ ಥಳಿಸಿದ ಗರ್ಲ್ ಫ್ರೆಂಡ್... ವಿಡಿಯೋ ನೋಡಿ!


ಆದರೆ, ಈ ವೀಡಿಯೊ ಇಂಟರ್ನೆಟ್ ಜಗತ್ತಿನಲ್ಲಿ ಬಂದಾಗ, ಜನರು ಈ ಥೀಮ್ ಅನ್ನು ಭಾರಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ವೀಡಿಯೊವನ್ನು @nikitachaturvedi10 ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು 35 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ ಮತ್ತು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರರು, 'ಮೇಲಿನಿಂದ ಕೆಳಕ್ಕೆ ಇಳಿಯುವ ಯುವತಿಯರೂ ಮನುಷ್ಯರೇ, ಅವರನ್ನ ಇಷ್ಟು ಕ್ರೂರವಾಗಿ ನಡೆಸಿಕೊಳ್ಳುವುದು ಸರಿಯಲ್ಲ' ಎಂದು ಬರೆದಿದ್ದರೆ, 'ನಿಮ್ಮ ಸಂತೋಷಕ್ಕಾಗಿ ಯಾರನ್ನಾದರೂ ಈ ರೀತಿ ನೋಯಿಸುವುದು ತಪ್ಪು' ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ