Viral Video: ಹೆಂಡತಿ ಸಾಯುತ್ತಿದ್ದಂತೆಯೇ ಮಾವನ ಎದುರು ಅತ್ತೆಯನ್ನೇ ಮದುವೆಯಾದ ಭೂಪ!
Mother-in-law and son-in-law got married: 45 ವರ್ಷದ ಸಿಕಂದರ್ ಯಾದವ್ ಎರಡು ಮಕ್ಕಳ ತಂದೆ. ಇತ್ತೀಚೆಗಷ್ಟೇ ಆತನ ಪತ್ನಿ ಸಾವನ್ನಪ್ಪಿದ್ದಳು. ಪತ್ನಿ ಸಾಯುತ್ತಿದ್ದಂತೆಯೇ ಆತ ಅತ್ತೆಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ.
ನವದೆಹಲಿ: ತನ್ನ ಹೆಂಡತಿ ಸಾಯುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಮಾವನ ಎದುರೇ ಅತ್ತೆಯನ್ನು ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಹೌದು, ಇದು ಆಶ್ಚರ್ಯವಾದರೂ ನಿಜವಾಗಿಯೂ ನಡೆದಿರುವ ಘಟನೆ. ಹೆಂಡತಿಯ ತಾಯಿಯನ್ನು ಪ್ರೀತಿಸಿ ಗ್ರಾಮಸ್ಥರ ಎದುರೇ ವ್ಯಕ್ತಿಯೊಬ್ಬ ಮದುವೆಯಾಗಿದ್ದಾನೆ. ಬಿಹಾರದ ಛತ್ರಪಾಲ್ ಪಂಚಾಯತ್ನ ಹೀರ್ಮೋತಿ ಗಾಂವ್ನಲ್ಲಿ ನಡೆದಿರುವ ಈ ಘಟನೆ ವ್ಯಾಪಕ ಚರ್ಚೆಯಾಗುತ್ತಿದೆ.
ಆಗಿದ್ದೇನು..?
ಬಿಹಾರದ 45 ವರ್ಷದ ಸಿಕಂದರ್ ಯಾದವ್ ಎರಡು ಮಕ್ಕಳ ತಂದೆ. ಇತ್ತೀಚೆಗಷ್ಟೇ ಆತನ ಪತ್ನಿ ಸಾವನ್ನಪ್ಪಿದ್ದಳು. ಪತ್ನಿ ಸಾಯುತ್ತಿದ್ದಂತೆಯೇ ಆತ ಅತ್ತೆಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ. 55 ವರ್ಷದ ಗೀತಾದೇವಿ ಸಹ ಆತನನ್ನು ಪ್ರೀತಿಸಲು ಶುರು ಮಾಡಿದ್ದಾರೆ. ಗೀತಾದೇವಿಯ ಪತಿ ದಿಲೇಶ್ವರ ದರ್ವೆಗೆ ಇವರಿಬ್ಬರ ಸಂಬಂಧದ ಬಗ್ಗೆ ಅನುಮಾನ ಬಂದಿದೆ. ಈ ಬಗ್ಗೆ ರಹಸ್ಯವಾಗಿ ಪರಿಶೀಲಿಸಿದಾಗ ಈ ಜೋಡಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ಗ್ರಾಮಸ್ಥರ ಎದುರು ಸಿಕಂದರ್ ತನ್ನ ಅತ್ತೆಯ ಮೇಲಿನ ಪ್ರೀತಿಯನ್ನು ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: Good News: ರಾಜ್ಯದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದಲ್ಲಿ ಊಟ
ಗೀತಾದೇವಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಮಾತನಾಡಿರುವ ಗೀತಾದೇವಿಯ ಪತಿ ದಿಲೇಶ್ವರ್, ತನ್ನ ಪತ್ನಿ ಮತ್ತು ಅಳಿಯ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಅವರನ್ನು ನಾನೇ ರೆಡ್ಹ್ಯಾಂಡ್ ಆಗಿ ಹಿಡಿದಿದ್ದೆ. ಅವರಿಬ್ಬರು ಪ್ರೀತಿಸುತ್ತಿರುವುದನ್ನು ತಿಳಿದು ನಾನು ಇಬ್ಬರ ಮದುವೆಗೆ ಸಂತಸದಿಂದಲೇ ಒಪ್ಪಿಗೆ ನೀಡಿದ್ದೇನೆ ಅಂತಾ ಹೇಳಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಮದುವೆಯ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ. ಲಕ್ಷಾಂತರ ಜನರು ಈ ವಿಡಿಯೋ ವೀಕ್ಷಿಸಿದ್ದು, ದಂಪತಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಚುನಾವಣಾ ಆಯೋಗದಿಂದ ಸೋಮವಾರ ನವೀಕರಿಸಿದ ಅಂಕಿ ಅಂಶ ಬಿಡುಗಡೆ : ಕೇರಳದಲ್ಲಿ ಶೇ.71.27ರಷ್ಟು ಮತದಾನ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.