ನವದೆಹಲಿ: ವಿಷಕಾರಿ ತೆವಳುವ ಜೀವಿಗಳಿಂದ ಯಾವಾಗಲೂ ಹತ್ತು ಹೆಜ್ಜೆ ದೂರವಿರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ, ಆದರೂ ಕೆಲವರು ಅವುಗಳೊಂದಿಗೆ ಚೆಲ್ಲಾಟವಾಡುವ ಅಪಾಯವನ್ನು ತೆಗೆದುಕೊಳ್ಳುತ್ತಾರೆ. ಅಂತರ್ಜಾಲದಲ್ಲಿ ಆಗಾಗ ಕಂಡುಬರುವ ಅಂತಹ ವಿಡಿಯೋಗಳಲ್ಲಿ, ಅಪಾಯಕಾರಿ ಜೀವಿಗಳಿಗೆ ಕಿರುಕುಳ ನೀಡಿದ ಪರಿಣಾಮಗಳು ಸಹ ಕೆಲವೊಮ್ಮೆ ಕಂಡುಬರುತ್ತವೆ. ಇತ್ತೀಚೆಗಷ್ಟೇ ಅಂತಹದೊಂದು ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ, ಈ ವಿಡಿಯೋದಲ್ಲಿ  ವ್ಯಕ್ತಿಯೊಬ್ಬರು ಭಾರೀ ಗಾತ್ರದ ಹೆಬ್ಬಾವಿನ ಜೊತೆ ಚೆಲ್ಲಾಟವಾಡುತ್ತಿರುವುದು ಕಂಡು ಬಂದಿದ್ದು, ಮುಂದಿನ ಕ್ಷಣದಲ್ಲಿ ನಡೆಯುವ ಘಟನೆ ನೋಡಿ ಒಂದು ಕ್ಷಣ ಎದೆ ಝಲ್ ಎನ್ನುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ನದಿಯಲ್ಲಿ ಸ್ನಾನಕ್ಕಿಳಿದ ಯುವ ಜೋಡಿ, ತುಂಟ ಕೋತಿ ಮಾಡಿದ ಕೃತ್ಯ ಕಂಡು ಜನ ಹೊಟ್ಟೆ ಹಿಡಿದು ನಗುತ್ತಿದ್ದಾರೆ!


ವಿಶ್ವಾದ್ಯಂತ ಅನೇಕ ಜಾತಿಯ ಹಾವುಗಳಿವೆ, ಅವುಗಳಲ್ಲಿ ಕೆಲವೊಮ್ಮೆ ಕೆಲ ಹಾವುಗಳು ಒಮ್ಮೆ ಬುಸುಗುಟ್ಟಿದರೆ ಮಾತ್ರ ಸಾಕು ವ್ಯಕ್ತಿಗಳ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಇದರ ಹೊರತಾಗಿಯೂ, ಕೆಲವರು ಈ ಭೀಕರ ನರಹಂತಕ ಜೀವಿಗಳಿಗೆ ಚುಡಾಯಿಸುವ ಮೂಲಕ ತಮ್ಮ ಪಾದಗಳ ಮೇಲೆ ತಾವೇ ಕೊಡಲಿ ಏಟು ಹಾಕಿಕೊಳ್ಳುತ್ತಾರೆ, ಇತ್ತೀಚೆಗೆ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಹೆಬ್ಬಾವಿನೊಂದಿಗೆ ಕ್ಯಾಮೆರಾದಲ್ಲಿ ಪೋಸ್ ನೀಡಲು ಪ್ರಯತ್ನಿಸುತ್ತಿರುವಾಗ ಒಬ್ಬ ವ್ಯಕ್ತಿಯು ತನ್ನನ್ನು ತಾನೇ ಹೇಗೆ ಅದರ ದವಡೆಗೆ ಸಿಲುಕಿಸಿಕೊಂಡು ಸ್ವಂತ ಜೀವನ ಅಪಾಯಕ್ಕೆ ಸಿಲುಕಿಸುತ್ತಾನೆ ಎಂಬುದನ್ನು ನೀವು ನೋಡಬಹುದು. ವೀಡಿಯೊದ ಆರಂಭದಲ್ಲಿ, ವ್ಯಕ್ತಿಯು ತನ್ನ ಕೈಯಲ್ಲಿ ಹೆಬ್ಬಾವನ್ನು ಹಿಡಿದಿರುವುದನ್ನು ನೀವು ನೋಡಬಹುದು, ಆದರೆ ಮುಂದಿನ ಕ್ಷಣದಲ್ಲಿ ಹೆಬ್ಬಾವು ವ್ಯಕ್ತಿಯ ಮುಖದ ಮೇಲೆ ದಾಳಿ ಮಾಡುತ್ತದೆ ಮತ್ತು ಅವನ ಮುಖವನ್ನು ವಿರೂಪಗೊಳಿಸುತ್ತದೆ. ಆದರೆ, ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ.


ಇದನ್ನೂ ಓದಿ-ಬ್ಯಾಟ್ ಹಿಡಿದು ಮೈದಾನಕ್ಕಿಳಿದ ಜನಪ್ರತಿನಿಧಿ, ಮುಂದೆ ನಡೆದಿದ್ದು ನೋಡಿ!


ಈ ಹೃದಯ ವಿದ್ರಾವಕ ವೀಡಿಯೊದಲ್ಲಿ, ವ್ಯಕ್ತಿಯು ಹೆಬ್ಬಾವನ್ನು ತನ್ನ ಮುಖದ ಹತ್ತಿರ ತಂದ ತಕ್ಷಣ, ಅದು ಆತನ ಮೇಲೆ ದಾಳಿ ಇತ್ತು ಕೆನ್ನೆ ಮತ್ತು ಮೂಗನ್ನು ಹಿಡಿದುಕೊಳ್ಳುತ್ತದೆ, ನಂತರ ವ್ಯಕ್ತಿಯು ನೋವಿನಿಂದ ನರಳುತ್ತಾನೆ ಮತ್ತು ಹೆಬ್ಬಾವಿನ ಬಾಯಿಯೊಂದ ಪಾರಾಗಲು ಯತ್ನಿಸುತ್ತಾನೆ. ಸಾಧ್ಯವಿರುವ ಎಲ್ಲ ಪ್ರಯತ್ನಗಳಲ್ಲಿ ಆತ ತೊಡಗಿಕೊಳ್ಳುತ್ತಾನೆ. ಕೇವಲ 32 ಸೆಕೆಂಡುಗಳ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ದಿ ರಿಯಲ್ ಟಾರ್ಜನ್ ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. 2 ದಿನಗಳ ಹಿಂದೆ ಶೇರ್ ಆಗಿರುವ ಈ ವೀಡಿಯೋವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲಾಗುತ್ತಿದೆ ಮತ್ತು ಶೇರ್ ಮಾಡಲಾಗುತ್ತಿದೆ. ವೀಡಿಯೋವನ್ನು ವೀಕ್ಷಿಸಿದ ಬಳಕೆದಾರರು ಅದಕ್ಕೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರ, 'ಇದು ಮೂರ್ಖತನದ ಪರಮಾವಧಿ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು  'ಹೆಂಗಸರು ಪುರುಷರಿಗಿಂತ ಏಕೆ ಹೆಚ್ಚು ಕಾಲ ಬದುಕುತ್ತಾರೆ?' ಎಂದು ಬರೆದುಕೊಂಡಿದ್ದಾನೆ. 


ವೈರಲ್ ವಿಡಿಯೋ ಇಲ್ಲಿದೆ ನೋಡಿ



ಇದನ್ನೂ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ