ನದಿಯಲ್ಲಿ ಸ್ನಾನಕ್ಕಿಳಿದ ಯುವ ಜೋಡಿ, ತುಂಟ ಕೋತಿ ಮಾಡಿದ ಕೃತ್ಯ ಕಂಡು ಜನ ಹೊಟ್ಟೆ ಹಿಡಿದು ನಗುತ್ತಿದ್ದಾರೆ!

Trending Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ದಂಪತಿ ಜೋಡಿಯೊಂದು ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ನೀವು ನೋಡಬಹುದು. ಆಗ ಇದ್ದಕ್ಕಿದ್ದಂತೆ ಒಂದು ಕೋತಿ ಅಲ್ಲಿಗೆ ಎಂಟ್ರಿ ಕೊಡುತ್ತದೆ. ಇದನ್ನು ನೋಡಿದ ದಂಪತಿಗೆ ಆಶ್ಚರ್ಯವಾಗಿದೆ. (Viral News In Kannada)  

Written by - Nitin Tabib | Last Updated : Dec 29, 2023, 08:30 PM IST
  • ವೈರಲ್ ಆಗಿರುವ ವಿಡಿಯೋಗೆ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
  • ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರರು 'ಯುವತಿ ತುಂಬಾ ಬುದ್ಧಿವಂತಳು, ಅವಳು ನೀರು ಎಸೆದು ತಪ್ಪಿಸಿಕೊಂಡಳು' ಎಂದಿದ್ದಾರೆ.
  • ಇನ್ನೊಬ್ಬ ಬಳಕೆದಾರರು - 'ಹುಡುಗಿ ಹುಡುಗನನ್ನು ಸಿಲುಕಿಸಿ, ತಾನೇ ತಪ್ಪಿಸಿಕೊಂಡಳು' ಎಂದಿದ್ದಾಳೆ.
ನದಿಯಲ್ಲಿ ಸ್ನಾನಕ್ಕಿಳಿದ ಯುವ ಜೋಡಿ, ತುಂಟ ಕೋತಿ ಮಾಡಿದ ಕೃತ್ಯ ಕಂಡು ಜನ ಹೊಟ್ಟೆ ಹಿಡಿದು ನಗುತ್ತಿದ್ದಾರೆ! title=

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ತಮಾಷೆಯ ವಿಡಿಯೋಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈ ವಿಡಿಯೋಗಳು ಜನರನ್ನು ಹೊಟ್ಟೆಹಿಡಿದು ನಗುವಂತೆ ಮಾಡುತ್ತವೆ. ಅಂತಹುದೇ  ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ, ಇದನ್ನು ನೋಡಿ ಜನರು ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದಾರೆ. ವಾಸ್ತವದಲ್ಲಿ, ಈ ವೀಡಿಯೊದಲ್ಲಿ ಕೋತಿಯು ದಂಪತಿಗಳ ಸಂಪೂರ್ಣ ಎಂಜಾಯ್ಮೆಂಟ್ ಹಾಳು ಮಾಡಿದೆ. ಈ ವೀಡಿಯೋ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಬಳಿಕ ಜನರು ಇದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ, ಈ ಪೋಸ್ಟ್‌ಗೆ ಅನೇಕ ಜನರು ತಮ್ಮ ಬಲವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. (Viral News In Kannada)

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ದಂಪತಿ ಜೋಡಿಯೊಂದು ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ನೀವು ನೋಡಬಹುದು. ಆಗ ಇದ್ದಕ್ಕಿದ್ದಂತೆ ಒಂದು ಕೋತಿ ಅಲ್ಲಿಗೆ ಬರುತ್ತದೆ. ಇದನ್ನು ನೋಡಿದ ದಂಪತಿಗೆ ಆಶ್ಚರ್ಯವಾಗುತ್ತದೆ. ಇದರ ನಂತರ ಕೋತಿ ದಂಪತಿಗಳಿಗೆ ಹತ್ತಿರವಾಗುತ್ತದೆ, ಗಾಬರಿಯಿಂದ ಹುಡುಗಿ ಅಲ್ಲಿಂದ ಕಾಲು ಕೀಳುತ್ತಾಳೆ. ಜನರು ಈ ವೀಡಿಯೊವನ್ನು ತುಂಬಾ ತಮಾಷೆಯ ವಿಡಿಯೋ ಎಂದು ಕರೆಯುತ್ತಿದ್ದಾರೆ. ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @ChapraZila ಹ್ಯಾಂಡಲ್‌ನೊಂದಿಗೆ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಹಂಚಿಕೊಂಡು ಬರೆದುಕೊಂಡ ಬಳಕೆದಾರರು, 'ಇದಕ್ಕಾಗಿಯೇ ಯಾವುದನ್ನು ಅತಿ ಮಾಡಬಾರದು ಎನ್ನುತ್ತಾರೆ' ಎಂದು ಬರೆದಿದ್ದಾರೆ. ಈ ವೀಡಿಯೊ ಇದುವರೆಗೆ 36 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದೇ ವೇಳೆ ಅನೇಕ ಜನರು ಈ ವಿಡಿಯೋಗೇ ತಮ್ಮ ತರಹೇವಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 

ಇದನ್ನೂ ಓದಿ-ಬ್ಯಾಟ್ ಹಿಡಿದು ಮೈದಾನಕ್ಕಿಳಿದ ಜನಪ್ರತಿನಿಧಿ, ಮುಂದೆ ನಡೆದಿದ್ದು ನೋಡಿ!

ವೈರಲ್ ವಿಡಿಯೋಗೆ ಜನರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗಿರುವ ವಿಡಿಯೋಗೆ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರರು 'ಯುವತಿ ತುಂಬಾ ಬುದ್ಧಿವಂತಳು, ಅವಳು ನೀರು ಎಸೆದು ತಪ್ಪಿಸಿಕೊಂಡಳು' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು  - 'ಹುಡುಗಿ ಹುಡುಗನನ್ನು ಸಿಲುಕಿಸಿ, ತಾನೇ ತಪ್ಪಿಸಿಕೊಂಡಳು' ಎಂದಿದ್ದಾಳೆ. ಇದೇ ವೇಳೆ, ಇನ್ನೊಬ್ಬ ಬಳಕೆದಾರರು 'ತುಂಬಾ ತಮಾಷೆಯ ವೀಡಿಯೊ' ಎಂದು ಬರೆದಿದ್ದಾರೆ.

ಇದನ್ನೂ ಓದಿ-'ಸ್ವರ್ಗದಲ್ಲಿ ಮದುವೆ' ಥೀಮ್ ಕಂಡು ರೊಚ್ಚಿಗೆದ್ದ ನೆಟ್ಟಿಗರು, ಹೇಳಿದ್ದೇನು ಗೊತ್ತಾ?

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News