ನವದೆಹಲಿ: ಕೇಕ್ ಅಂದ್ರೆ ಯಾರಿಗ್ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಖುಷಿ ಖುಷಿಯಿಂದಲೇ ಕೇಕ್ ಸವಿಯುತ್ತಾರೆ. ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಕೇಕ್ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ದಿನಗಳಲ್ಲಿ ಕೇಕ್ ಕತ್ತರಿಸದೆ ಯಾವುದೇ ಪಾರ್ಟಿ ಪೂರ್ಣಗೊಳ್ಳುವುದಿಲ್ಲ. ಜನರ ಬೇಡಿಕೆಗೆ ತಕ್ಕಂತೆ ವಿವಿಧ ಬಗೆಯ ಕೇಕ್‍ಗಳು ಮಾರುಕಟ್ಟೆಯಲ್ಲಿ ಲಭ್ಯ.


COMMERCIAL BREAK
SCROLL TO CONTINUE READING

ಜನರು ತಮ್ಮ ಪಾರ್ಟಿಗೆ ಮತ್ತಷ್ಟು ರಂಗು ನೀಡಲು ವಿಶಿಷ್ಟವಾದ ಕೇಕ್‍ಗಳನ್ನು ಆರ್ಡರ್ ಮಾಡುತ್ತಾರೆ. ತರಹೇವಾರಿ ಕೇಕ್‍ಗಳನ್ನು ಇಂದು ನಾವು ಕಾಣಬಹುದಾಗಿದೆ. ನೀವು ಯಾವ ರೂಪದ ಕೇಕ್ ಬೇಕು ಅಂತೀರೋ ಆ ರೀತಿಯ ಕೇಕ್ಅನ್ನು ಸಿದ್ಧಪಡಿಸಿ ಕೊಡುತ್ತಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಶಿಷ್ಟವಾದ ಕೇಕ್ ಸಖತ್ ವೈರಲ್ ಆಗುತ್ತಿದೆ. ಈ ಕೇಕ್‌ನ ವಿಡಿಯೋ ಜನರನ್ನು ಗೊಂದಲಕ್ಕೀಡು ಮಾಡಿದೆ.


ಇದನ್ನೂ ಓದಿ: Viral News: ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಈ ಮೂವರ ಸಂಬಂಧ!


ವೈರಲ್ ವಿಡಿಯೋದಲ್ಲಿ ಏನಿದೆ..?



ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ತಮ್ಮದೇ ಮುಖವನ್ನು ಹೋಲುವ ಕೇಕ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇದು ನೋಡುಗರಿಗೆ  ಕನ್ಫೂಸ್ ಮಾಡುತ್ತದೆ. ಜನರಿಗೆ ಅಸಲಿ ಮತ್ತು ನಕಲಿ ಮುಖಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ವಿಶಿಷ್ಟವಾದ ಕೇಕ್‍ ನೋಡಿದ್ರೆ ನೀವು ಸಹ ಕನ್ಫೂಸ್ ಆಗುವುದು ಗ್ಯಾರಂಟಿ.


ಯುವತಿ ತನ್ನ ಕೈಯಲ್ಲಿ ತನ್ನದೇ ಮುಖ ಹೋಲುವ ಕೇಕ್ ಹಿಡಿದುಕೊಂಡು ಕಾಣಿಸಿಕೊಂಡಿರುವುದು ಅನೇಕರಿಗೆ ಗೊಂದಲ ಮೂಡಿಸಿದೆ. ಇಲ್ಲಿ ಯುವತಿಯ ಅಸಲಿ ಮುಖ ಮತ್ತು ಕೇಕ್‍ನ ಮುಖ ಯಾವುದು ಅನ್ನೋದೆ ನಿಮಗೆ ಗೊತ್ತಾಗುವುದಿಲ್ಲ.


ಇದನ್ನೂ ಓದಿ: ಈ ಹಳ್ಳಿಯ ಜನರು ಮಲಗಿದರೆ ತಿಂಗಳಾನುಗಟ್ಟಲೆ ಏಳುವುದೇ ಇಲ್ಲವಂತೆ.! ಕಾರಣ ?


 ಈ ವಿಡಿಯೋ ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿಯೇ 91 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಜನರು ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಸದ್ಯ ನೋಡಿದ ತಕ್ಷಣ ಕನ್ಫೂಸ್ ಮಾಡುತ್ತಿರುವ ಈ ಕೇಕ್‍ನ ಬಗ್ಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.