Viral Video: ನೀವು ಹಿಂದೆಂದೂ ನೋಡಿರದ ಕೊರೊನಾ ಟೆಸ್ಟ್ ನ ಭಯಾನಕ ದೃಶ್ಯಗಳು ಇಲ್ಲಿವೆ!

ಚೀನಾದಲ್ಲಿ ಕೊರೊನಾ 4ನೇ ಅಲೆಯ ಅಬ್ಬರ ಜೋರಾಗಿದೆ. ರಾಜಧಾನಿ ಬೀಜಿಂಗ್, ವಾಣಿಜ್ಯ ನಗರಿ ಶಾಂಘೈ ಸೇರಿದಂತೆ ಕೆಲವು ನಗರಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ.

Written by - Puttaraj K Alur | Last Updated : May 5, 2022, 08:10 PM IST
  • ಚೀನಾದಲ್ಲಿ ಕೊರೊನಾ 4ನೇ ಅಲೆಯ ಅಬ್ಬರ ಜೋರಾಗಿದೆ
  • ಬೀಜಿಂಗ್, ಶಾಂಘೈ ಸೇರಿದಂತೆ ಕೆಲವು ನಗರಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ
  • ಚೀನಾದ ಕೊರೊನಾ ಟೆಸ್ಟ್ ನ ಹಾರಿಬಲ್ ದೃಶ್ಯಗಳು ಸಖತ್ ವೈರಲ್
Viral Video: ನೀವು ಹಿಂದೆಂದೂ ನೋಡಿರದ ಕೊರೊನಾ ಟೆಸ್ಟ್ ನ ಭಯಾನಕ ದೃಶ್ಯಗಳು ಇಲ್ಲಿವೆ!   title=
ಕೊರೊನಾ ಟೆಸ್ಟ್ ನ ಹಾರಿಬಲ್ ದೃಶ್ಯಗಳು

ನವದೆಹಲಿ: ಭಾರತದ ಕೆಲವು ರಾಜ್ಯಗಳಲ್ಲಿ ಕೊರೊನಾ ಮತ್ತೆ ರಣಕೇಕೆ ಹಾಕುತ್ತಿದೆ. ಕೊರೊನಾ 4ನೇ ಅಲೆಯ ಭೀತಿಯಿಂದ ಜನರು ಭಯಭೀತರಾಗಿದ್ದಾರೆ. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯ ಮಾಡಿ ಸರ್ಕಾರಗಳು ಆದೇಶ ಹೊರಡಿಸಿವೆ. ಪ್ರತಿದಿನ ಕೋವಿಡ್-19 ಕೇಸ್‍ಗಳಲ್ಲಿ ಹೆಚ್ಚಳ ಕಂಡುಬರುತ್ತಿದ್ದು, ಜನರಿಗೆ ಹೊಸ ತಲೆನೋವು ಶುರುವಾಗಿದೆ.

ಚೀನಾದಲ್ಲಿ ಕೊರೊನಾ 4ನೇ ಅಲೆಯ ಅಬ್ಬರ ಜೋರಾಗಿದೆ. ರಾಜಧಾನಿ ಬೀಜಿಂಗ್, ವಾಣಿಜ್ಯ ನಗರಿ ಶಾಂಘೈ ಸೇರಿದಂತೆ ಕೆಲವು ನಗರಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಬೀಜಿಂಗ್‍ನಲ್ಲಿ ಮೆಟ್ರೋ ಮತ್ತು ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಲವು ಪ್ರಾಂತ್ಯಗಳಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಪ್ರತಿದಿನ ಕೊರೊನಾ ಕೇಸ್‍ಗಳು ಏರಿಕೆಯಾಗುತ್ತಿರುವ ಕಾರಣ ಚೀನಾದ ಹಲವು ನಗರಗಳಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಮತ್ತೊಂದು ಹೊಸ ಕೊರೊನಾ ರೂಪಾಂತರ ಹೊರಹೊಮ್ಮುವ ಸಾಧ್ಯತೆ..!

ಕೊರೊನಾ ಟೆಸ್ಟ್ ನ ಹಾರಿಬಲ್ ದೃಶ್ಯಗಳು!

ಚೀನಾದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ ಅಲ್ಲಿನ ಸರ್ಕಾರ ಪ್ರತಿಯೊಬ್ಬರೂ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವೆಂದು ಘೋಷಿಸಿದೆ. ಹೀಗಾಗಿ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರಿಗೂ ಕೊರೊನಾ ಟೆಸ್ಟ್  ಮಾಡಿಸುತ್ತಿದ್ದಾರೆ. ಆದರೆ ಕೋವಿಡ್-19 ಟೆಸ್ಟ್ ಮಾಡಿಸಿಕೊಳ್ಳಲು ಅನೇಕರು ಒಪ್ಪುತ್ತಿಲ್ಲ. ನಾವು ಈಗಾಗಲೇ ಟೆಸ್ಟ್ ಮಾಡಿಸಿಕೊಂಡಿದ್ದೇವೆ, ಏಕೆ ಮತ್ತೆ ಮಾಡಿಸಿಕೊಳ್ಳಬೇಕೆಂದು ಆರೋಗ್ಯ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ಆದರೆ, ಆರೋಗ್ಯ ಕಾರ್ಯಕರ್ತರು ಸರ್ಕಾರದ ಆದೇಶ ಪಾಲಿಸಲೇಬೇಕಾಗಿದೆ.

ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಒಲ್ಲೆ ಎನ್ನುತ್ತಿರುವವರಿಗೆ ಆರೋಗ್ಯ ಸಿಬ್ಬಂದಿ ಬಲವಂತಾಗಿ ಟೆಸ್ಟ್ ಮಾಡಿಸುತ್ತಿದ್ದಾರೆ. ಯುವಕರು, ಮಹಿಳೆಯರು, ವೃದ್ಧರು ಎನ್ನದೆ ಪ್ರತಿಯೊಬ್ಬರ ಮೇಲೂ ಬಲಪ್ರಯೋಗ ಮಾಡಿ ಕೊರೊನಾ ಟೆಸ್ಟ್ ಮಾಡಿಸಿಸುತ್ತಿದ್ದಾರೆ. ಚೀನಿ ಆರೋಗ್ಯ ಸಿಬ್ಬಂದಿ ಬಲವಂತವಾಗಿ ಕೊರೊನಾ ಟೆಸ್ಟ್ ಮಾಡುತ್ತಿರುವ ಹಲವಾರು ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡಲು ಭಯಾನಕವಾಗಿದೆ.

ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ಚೀನಾ ಏನು ಮಾಡುತ್ತಿದೆ! ವಿಡಿಯೋ ನೋಡಿದ್ರೆ ಶಾಕ್ ಆಗ್ತೀರ...

ಸದ್ಯ ವೈರಲ್ ಆಗಿರುವ ದೃಶ್ಯಗಳಲ್ಲಿ ಚೀನಾದ ಆರೋಗ್ಯ ಸಿಬ್ಬಂದಿ ಜನರಿಗೆ ಯಾವ ರೀತಿಯಲ್ಲಿ ಬಲವಂತವಾಗಿ ಕೊರೊನಾ ಟೆಸ್ಟ್ ಮಾಡಿಸುತ್ತಿದ್ದಾರೆ ಅನ್ನೋದನ್ನು ನೀವು ಕಾಣಬಹುದು. ಮನೆಗೆ ಮನೆಗೆ ನುಗ್ಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಒಪ್ಪದ ಜನರನ್ನು ಹಿಡಿದು ಹೊರತಂದು ಅವರಿಗೆ ಬಲವಂತವಾಗಿ ಟೆಸ್ಟ್ ಮಾಡುತ್ತಿದ್ದಾರೆ. ಕೊರೊನಾ ಟೆಸ್ಟ್ ಬೇಡ ಅಂತಿರೋ ಮಹಿಳೆಯನ್ನು ನೆಲದ ಮೇಲೆ ಮಲಗಿಸಿ ಅವಳ ಮೇಲೆ ಕುಳಿತು ಆರೋಗ್ಯ ಸಿಬ್ಬಂದಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದಾರೆ. ವೃದ್ಧರಿಗೆ ಹೆದರಿಸಿ, ಬೆದರಿಸಿ ಟೆಸ್ಟ್ ಮಾಡಿಸಲಾಗುತ್ತಿದೆ. ಯುವರನ್ನು ಮನೆಯಿಂದ ಹೊರ ಎತ್ತಾಕಿಕೊಂಡು ಬಂದು ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ. ಈ ದೃಶ‍್ಯಗಳನ್ನು ನೋಡಿದರೆ ಪ್ರತಿಯೊಬ್ಬರಿಗೂ ಹೆದರಿಕೆಯಾಗುತ್ತದೆ. ಚೀನಾ ಸರ್ಕಾರದ ರೂಲ್ಸ್ ಅಂದರೆ ಹಾಗೆ, ಪ್ರತಿಯೊಬ್ಬರೂ ಪಾಲಿಸಲೇಬೇಕು. ಪಾಲಿಸದವರ ಮೇಲೆ ಚೀನೀ ಸರ್ಕಾರ ಬಲವಂತದ ಪ್ರಯೋಗ ಮಾಡುತ್ತದೆ ಎಂಬುದಕ್ಕೆ ಈ ದೃಶ್ಯಗಳು ಸಾಕ್ಷಿಯಾಗಿವೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News