ಬೆಂಗಳೂರು: ಗಿಳಿಗಳು ತುಂಬಾ ಮುದ್ದಾಗಿರುತ್ತವೆ ಮತ್ತು ನಾವು ಅವುಗಳನ್ನು ಪ್ರೀತಿಯಿಂದ 'ಮಿಟ್ಟು ಮಿಯಾ' ಎಂದು ಕರೆಯುತ್ತೇವೆ. ಅಂದಹಾಗೆ, ಈ ಗಿಳಿಗಳ ವಿಶೇಷತೆ ಏನೆಂದರೆ, ಅವು ಮನುಷ್ಯರಂತೆ ಅನುಕರಿಸಿ, ಮನುಷ್ಯರಂತೆ ಮಾತನಾಡುತ್ತವೆ. ಹೌದು, ಸ್ವಲ್ಪ ಅಭ್ಯಾಸದ ಬಳಿಕ  ಅವು ತುಂಬಾ ಸ್ಪಷ್ಟವಾಗಿ ಮಾತನಾಡುತ್ತವೆ. ಒಂದು ಹಂತದಲ್ಲಿ ಗಿಳಿ ಮಾತನಾಡುತ್ತಿದೆಯೇ ಅಥವಾ ಮನುಷ್ಯ ಮನುಷ್ಯ ಮಾತನಾಡುತ್ತಿದ್ದಾನೆ ಎಂಬ ಗೊಂದಲ ಮೂಡುತ್ತದೆ! ಗಿಳಿಗಳು ಮಾತನಾಡುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಹಸಿದ ಗಿಳಿಯೊಂದು ಅಂತರ್ಜಾಲಕ್ಕೆ ಕಿಚ್ಚು ಹಚ್ಚಿದೇ ಎಂದರೆ ತಪ್ಪಾಗಲಾರದು. ಹೌದು, ಈ ಗಿಣಿಗೆ ಹಸಿವಾಗಿದೆ ಮತ್ತು ಅದು ಮಾನುಷರಂತೆ ತನ್ನ ತಾಯಿಗೆ ಆಹಾರ ಕೇಳುತ್ತಿದೆ.  ಇದನ್ನು ಯಾರೋ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಇದೀಗ ಸಕತ್ ವೈರಲ್ ಆಗಿದೆ.(Trending News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗುತ್ತಿದೆ ಗಾಳಿಯಲ್ಲಿ ಹಾರಾಡುವ 'ಆಂಜನೇಯನ ಡ್ರೋನ್' ... ನೋಡಿದ್ರಾ?


ಜನರ ಮನಸ್ಸು ಗೆದ್ದ ಗಿಳಿ
ಮುಖದಲ್ಲಿ ನಗು ತರಿಸುವ ಈ ವೀಡಿಯೋವನ್ನು ಅಕ್ಟೋಬರ್ 26 ರಂದು @ChapraZila ಹ್ಯಾಂಡಲ್‌ನೊಂದಿಗೆ ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ಪೋಸ್ಟ್ ಮಾಡಲಾಗಿದೆ. ಗಿಳಿ ಕೂಡ ಹಸಿವಾದಾಗ ಅದರ ಆಹಾರವನ್ನು ಕೇಳಲು ಕಲಿತಿದೆ ಎಂದು ಆದರ ಶೀರ್ಷಿಕೆಯಲ್ಲಿ ಬೇರೆಯಲಾಗಿದೆ. ಇದುವರೆಗೆ ಈ ಪೋಸ್ಟ್ ಗೆ 1 ಲಕ್ಷದ 92 ಸಾವಿರ ವೀಕ್ಷಣೆಗಳು ಬಂದಿವೆ ಮತ್ತು ಒಂದೂವರೆ ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಇದು ಪಡೆದುಕೊಂಡಿದೆ. ವಿಡಿಯೋಗೇ ಪ್ರತಿಕ್ರಿಯಿಸಿದ ಓರ್ವ ಬಳಕೆದಾರ. ಒಬ್ಬ ಬಳಕೆದಾರರು ಈ ಕ್ಲಿಪ್ ತುಂಬಾ ಮುದ್ದಾಗಿದೆ ಎಂದಿದ್ದಾರೆ, ಮತ್ತೊಬ್ಬರು ಇದು ಅತಿ ಹೆಚ್ಚು ಮುದ್ದಾಗಿದೆ ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರರು ನನ್ನ ಮನೆಯ ಗಿಳಿ ಮರಾಠಿಯಲ್ಲಿ ಇದೇ ಮಾತನ್ನು ಹೇಳುತ್ತದೆ ಎಂದಿದ್ದಾರೆ. ಆದರೆ ಈ ಶೈಲಿಯ ಗಿಳಿಯನ್ನು ನೋಡಿದಾಗ ಅನೇಕ ಜನರ ಮುಖದಲ್ಲಿ ಮಂದಹಾಸ ಮೂಡಿದೆ!


ಇದನ್ನೂ ಓದಿ-Vande Sadharan ರೈಲಿನ ಒಳನೋಟ ಹೇಗಿದೆ? 'ಅಗ್ಗದ ಎಕ್ಸ್ ಪ್ರೆಸ್' ರೈಲಿನ ಮೊದಲ ವಿಡಿಯೋ ಬಹಿರಂಗ!


'ಮಮ್ಮಿ ಮಿಟ್ಟು ಕೋ ರೋಟಿ ದೊ...' ಎಂದ ಗಿಳಿ
7 ಸೆಕೆಂಡ್ ಅವಧಿಯ ಈ ವಿಡಿಯೋದಲ್ಲಿ ಪಂಜರದಿಂದ ಕುತ್ತಿಗೆಯನ್ನು ಹೊರಹಾಕಿ ಇಣುಕಿ ನೋಡುತ್ತಿರುವ ಗಿಳಿಯನ್ನು ನೀವು ಕಾಣಬಹುದು . ಇದ್ದಕ್ಕಿದ್ದಂತೆ ಅದು - ಮಮ್ಮಿ ... ಓ ಮಮ್ಮಿ ... ಮಿಟ್ಟು ಕೋ ರೋಟಿ ದೊ ಮಮ್ಮಿ ... ಎಂದು ಕೂಗುತ್ತದೆ.  ಅಂದಹಾಗೆ, ಗಿಳಿ ಹೀಗೆ ಆಹಾರ ಕೇಳುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು ಎಂದಾದರೆ, ಕಾಮೆಂಟ್‌ನಲ್ಲಿ ಬರೆಯುವ ಮೂಲಕ ನಮಗೆ ತಿಳಿಸಿ.


ಗಿಳಿಯ ವೈರಲ್ ವೀಡಿಯೋ ಇಲ್ಲಿದೆ ನೋಡಿ...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.